Modi Warning : ಬಿಜೆಪಿ ನಾಯಕರ ಮಕ್ಕಳಿಗೆ, ಸಂಬಂಧಿಗಳಿಗೆ ನೋ ಟಿಕೇಟ್ : ಹೊರಬಿತ್ತು ಹೈಕಮಾಂಡ್ ಖಡಕ್ ಆದೇಶ

ಬೆಂಗಳೂರು : ರಾಜಕೀಯಕ್ಕೂ ಕುಟುಂಬ ರಾಜಕಾರಣಕ್ಕೂ ಎಲ್ಲಿಲ್ಲದ ನಂಟು. ರಾಜಕೀಯಕ್ಕೆ ಬರೋ ಪ್ರತಿಯೊಬ್ಬ ನಾಯಕರು ಆಡಳಿತ, ಹುದ್ದೇ ತಮ್ಮ‌ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಮುಂದುವರೆಯಬೇಕು ಅಂತ ಬಯಸ್ತಾರೆ.‌ಇದು ಬಿಜೆಪಿ, ಕಾಂಗ್ರೆಸ್, ಜೆಡಿ ಎಸ್ ಅನ್ನೋ ಬೇಧವಿಲ್ಲದೇ ಎಲ್ಲ ಪಕ್ಷಗಳ ನಾಯಕರಿಗಿರೋ ಕಾಮನ್ ಕಾಯಿಲೆ.‌ ಆದರೆ ಈಗ ಬಿಜೆಪಿ ನಾಯಕರ ಕುಟುಂಬ ರಾಜಕೀಯಕ್ಕೆ ಕಡಿವಾಣ ಬೀಳೋ ಕಾಲ ಹತ್ತಿರವಾಗಿದ್ದು ಮೋದಿ (Modi Warning) ಭಾಷಣ ರಾಜ್ಯ ನಾಯಕರ ಎದೆಯಲ್ಲಿ ನಡುಕ‌ ಮೂಡಿಸಿದೆ.

ಹೌದು, ರಾಜ್ಯ ಬಿಜೆಪಿ ನಾಯಕರು ಪಂಚ ರಾಜ್ಯ ಚುನಾವಣೆ ಬಳಿಕ ಎಲ್ಲಿಲ್ಲದ ಉತ್ಸಾಹದಿಂದ ಚುನಾವಣೆಗೆ ಸಿದ್ಧವಾಗಿದ್ದರು. ಅವಧಿ ಪೂರ್ವ ಚುನಾವಣೆಗೂ ಸಿದ್ಧ ಅಂತ ತೊಡೆತಟ್ಟಲು ಮುಂದಾಗಿದ್ದರು. ಅಷ್ಟೇ ಏನು ಮಗ, ಮಗಳು, ಹೆಂಡತಿ, ಬಾವಾ, ಬಾಮೈದಾ ಎಲ್ಲರಿಗೂ ಟಿಕೇಟ್ ಪಡೆಯೋಕೆ ಹೈಕಮಾಂಡ್ ಬಳಿ ಕೈಕಟ್ಟಿ ನಿಲ್ಲಲು ಪ್ಲ್ಯಾನ್ ಕೂಡ ಮಾಡಿದ್ದರು. ಆದರೆ ಬಿಜೆಪಿ ಸಂಸದೀಯ‌ ಮಂಡಳಿ ಸಭೆಯಲ್ಲಿ ಮೋದಿ ನೀಡಿರುವ ಸಂದೇಶ ರಾಜ್ಯ ಬಿಜೆಪಿ ನಾಯಕರ ಕನಸಿಗೆ ಎಳ್ಳು ನೀರು ಬಿಡುವಂತೆ ಮಾಡಿದೆ. ವಂಶಾಢಳಿತ ಪ್ರಜಾ ಪ್ರಭುತ್ವಕ್ಕೆ ಮಾರಕ. ಬಿಜೆಪಿ ವಂಶಾಢಳಿತ ವಿರೋಧಿ. ಪಂಚ ‌ರಾಜ್ಯ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿಯೇ ಸಂಸದರ ಮಕ್ಕಳಿಗೆ ಟಿಕೇಟ್ ನೀಡಿಲ್ಲ . ಟಿಕೇಟ್ ನಿರಾಕರಣೆ ಮಾಡಿದ ನಿರ್ಧಾರ ನನ್ನದೇ ಎಂದು ಮೋದಿ (Modi Warning) ಸ್ಪಷ್ಟವಾಗಿ ಹೇಳಿದ್ದಾರಂತೆ.

ಮೋದಿ ಈ ಸ್ಪಷ್ಟ ವಾರ್ನಿಂಗ್ (Modi Warning) ನಿಂದ ಮಕ್ಕಳನ್ನು ರಾಜಕಾರಣಕ್ಕೆ ತರಲು ಆಗಲೇ ಸಿದ್ಧತೆ ಮಾಡಿಕೊಂಡಿದ್ದ ರಾಜ್ಯ ಬಿಜೆಪಿ ನಾಯಕರಿಗೆ ನಿರಾಸೆ ಎದುರಾಗಿದೆ. ರಾಜ್ಯದಲ್ಲಿ ಯಾವ ಜಿಲ್ಲೆ ನೋಡಿದರೂ ಎಲ್ಲರೂ ಕುಟುಂಬ ರಾಜಕಾರಣ ಕ್ಕೆ ತುದಿಗಾಲಲ್ಲಿ ನಿಂತವರೇ ಕಾಣುತ್ತಿದ್ದರು. ಈ ಕುಟುಂಬ ರಾಜಕಾರಣದ ಪರಿಕಂಡು ದಂಗಾಗಿ ಮೋದಿ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ರಾಜ್ಯದಲ್ಲಿ ಕುಟುಂಬ ರಾಜಕಾರಣದ ಉದಾಹರಣೆ ಬಿಜೆಪಿಯಲ್ಲೇ ಬೇಕಷ್ಟಿದೆ. ಇದರಲ್ಲೂ ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಕಣಕ್ಕಿಳಿಯಲು ಸಿದ್ಧವಾದ ಕುಟುಂಬ ರಾಜಕಾರಣದ ಲಿಸ್ಟ್ ಯಾವುದು ಅನ್ನೋದನ್ನು ಗಮನಿಸೋದಾದರೇ.

  • ಬಿಎಸ್ವೈ ಎರಡನೇ ಪುತ್ರ ಬಿ.ವೈ.ವಿಜಯೇಂದ್ರ
  • ಈಶ್ವರಪ್ಪ ಪುತ್ರ ಕಾಂತೇಶ್
  • ಗೋವಿಂದ್ ಕಾರಜೋಳ ಪುತ್ರ ಗೋಪಾಲ್ ಕಾರಜೋಳ
  • ವಿ.ಸೋಮಣ್ಣ ಪುತ್ರ ಅರುಣ ಸೋಮಣ್ಣ
  • ಅಶೋಕ್ ಸಂಬಂಧಿ ರವಿ

ಇದು ಟಿಕೇಟ್ ಆಕಾಂಕ್ಷಿಗಳ ವಿವರವಾದರೇ ಇನ್ನೂ ಈಗಾಗಲೇ ಅಧಿಕಾರ ಪಡೆದುಕೊಂಡವರ ಲಿಸ್ಟ್ ದೊಡ್ಡದಿದೆ. ಈಗ ಮೋದಿ (Modi Warning) ಮಾತಿನಿಂದ ಈ ನಾಯಕರ ರಾಜಕೀಯದ ಕನಸು ಆರಂಭದಲ್ಲೇ ವಿಘ್ನಕ್ಕೆ ತುತ್ತಾದಂತಿದ್ದು, ವಂಶ ಪಾರಂಪರ್ಯ ಅಧಿಕಾರ ಬಿಜೆಪಿಯಲ್ಲಿ ಕೊನೆಯಾಗೋ ಕಾಲ ಸನ್ನಿಹಿತವಾದಂತಿದೆ.

ಇದನ್ನೂ ಓದಿ : 2023 ರ ಚುನಾವಣೆಗೆ ಕ್ಷೇತ್ರ ಬದಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಇದನ್ನೂ ಓದಿ : ನೀರು, ವಿದ್ಯುತ್, ಶಿಕ್ಷಣ ಉಚಿತ : ಕರ್ನಾಟಕದಲ್ಲಿ ಆಧಿಕಾರಕ್ಕೇರಲು ಆಪ್ ಪ್ರಣಾಳಿಕೆ

(No tickets for children, relatives of BJP leaders, PM Modi Warning)

Comments are closed.