ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 2023ರ ಮೇ 10 ರಂದು ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. 224 ಸದಸ್ಯರ ವಿಧಾನಸಭೆಯನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಅದರಲ್ಲೂ, ರಾಜಕೀಯ ಬಿಟ್ಟು ಪ್ರಜಾಕೀಯ ರಾಜ್ಯದಲ್ಲಿ ತಲೆ ಎತ್ತಿ ನಿಲ್ಲಬೇಕೆನ್ನುವುದು ನಟ ಉಪೇಂದ್ರ ಅವರ ಮಹದಾಸೆ ಆಗಿದೆ. ತಮ್ಮ ಹೊಸ ಹೊಸ ಅಭಿಪ್ರಾಯವನ್ನು ಸಿನಿಮಾದ ಮೂಲಕ ತಿಳಿಸುತ್ತಾ ಬಂದಿರುವ ರಿಯಲ್ ಸ್ಟಾರ್, ಇದೀಗ ರಾಜಕೀಯದಲ್ಲಿ ಕೂಡ ಹೊಸತನವನ್ನು ಸೃಷ್ಟಿ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ನಟ ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮತದಾರರು ನೋಟಾಗೆ ವೋಟ್ (Nota Vote Details) ಮಾಡಿದರೆ ಏನಾಗುವುದು ಎನ್ನುವ ಮಾಹಿತಿಯನ್ನು ವಿವರವಾಗಿ ಹಂಚಿಕೊಂಡಿದ್ದಾರೆ.
ನಟ ಉಪೇಂದ್ರ ತಮ್ಮ ಟ್ವೀಟರ್‌ನಲ್ಲಿ, “ನೋಟಾ (ಮೇಲಿನವುಗಳಲ್ಲದ), ನೋಟಾಗೆ ಮತದಾರರು ವೋಟ್ ಮಾಡಿದರೆ ಏನಾಗುತ್ತದೆ ? ಇದು ಗೂಗಲ್ ನಲ್ಲಿ ಸಿಕ್ಕ ಉತ್ತರ. ಇದು ಸರಿಯೇ ?” ಎಂದು ಪೋಸ್ಟ್ ಮಾಡಿ ಗೂಗಲ್‌ನಲ್ಲಿ ಸಿಕ್ಕಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನೋಟಾಗೆ ಮತದಾರರು ವೋಟ್ ಮಾಡುವ ಕುರಿತು ಗೂಗಲ್ ಏನು ಹೇಳುತ್ತದೆ ಎಂದರೆ “ನಾನು ನೋಟಾ (ಮೇಲಿನ ಯಾವುದೂ ಅಲ್ಲ)ಗೆ ಮತ ಹಾಕಿದರೆ ನಾನು ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುತ್ತೇನೆ ಎಂದರ್ಥ. ನನ್ನಂತೆ ಬಹುಸಂಖ್ಯಾತರು ನೋಟಾ ಮತ ಚಲಾಯಿಸಿದರೆ ಬಹುಸಂಖ್ಯಾತರು ಅಭ್ಯರ್ಥಿಗಳನ್ನು ಇಷ್ಟಪಡುವುದಿಲ್ಲ ಅಥವಾ ನಂಬುವುದಿಲ್ಲ ಎಂದರ್ಥ.
ಹೀಗಾಗಿ ಚುನಾವಣೆಯನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿ ಹೊಸದಾಗಿ ಚುನಾವಣೆ ನಡೆಸಬೇಕು. ಅಷ್ಟೇ ಅಲ್ಲದೇ, ಹಿಂದಿನ ಯಾವೊಬ್ಬ ಅಭ್ಯರ್ಥಿಗೂ ಸ್ಪರ್ಧಿಸಲು ಅವಕಾಶ ನೀಡಬಾರದು. ಕನಿಷ್ಠ, ಇದು ನ್ಯಾಯೋಚಿತ ದೃಷ್ಟಿಕೋನ ಎಂದು ನಾನು ನಂಬುತ್ತೇನೆ. ಆದರೆ ಸ್ಪಷ್ಟವಾಗಿ, ನಾನು/ನಾನು ತಪ್ಪಿ. ನೋಟಾ ಎಂಬುದು ಕಾಗದದ ಮತಪತ್ರಗಳನ್ನು ಬಳಸಿದ ಹಿಂದಿನ ಅಮಾನ್ಯ ಮತದಂತಿದೆ ಎಂದು ಚುನಾವಣಾ ಆಯೋಗ ಹೇಳಿದೆ. ನೋಟಾ ಗರಿಷ್ಠವಾಗಿದ್ದರೆ, ಅವು ಕೇವಲ ಅಮಾನ್ಯ ಮತಗಳಾಗಿವೆ ಮತ್ತು ಮುಂದಿನ ಬಹುಮತದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ” ಈ ರೀತಿ ಹೇಳುತ್ತದೆ ಎಂಉ ಉಪೇಂದ್ರ ಅವರು ತಿಳಿಸಿದ್ದಾರೆ.
NOTA ( non of the above )
— Upendra (@nimmaupendra) March 31, 2023
ನೋಟಾಗೆ ಮತದಾರರು ವೋಟ್ ಮಾಡಿದರೆ ಏನಾಗುತ್ತದೆ ?
ಇದು ಗೂಗಲ್ ನಲ್ಲಿ ಸಿಕ್ಕ ಉತ್ತರ. ಇದು ಸರಿಯೇ ?
NOTA (non of the above)
What will happen if voters vote for NOTA?
This is the answer found on Google. Is this correct?#ElectionCommission @CEO_Maharashtra pic.twitter.com/5qulxmMau0
2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ಮುಂಬರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಈ ಹಿಂದೆ ಫೆಬ್ರವರಿ 28 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆದರೆ ಹಲವಾರು ಆಕಾಂಕ್ಷಿಗಳು ಪ್ರತಿದಿನ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಮಾರ್ಚ್ 25 ರ ವರೆಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ. ಮಾರ್ಚ್ 25, 2023 ರ ವರೆಗೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಎರಡನೇ ವಾರದಲ್ಲಿ ಆಯ್ಕೆಯಾದ ಆಕಾಂಕ್ಷಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : B.S Yediyurappa : ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ : ಹರಕೆ ಕುರಿ ಪ್ಲ್ಯಾನ್ ನಿಂದ ಮಗನನ್ನು ಬಚಾವ್ ಮಾಡಿದ ಬಿ.ಎಸ್.ಯಡಿಯೂರಪ್ಪ
ಇದನ್ನೂ ಓದಿ : ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ : ಬಿ.ಎಸ್.ಯಡಿಯೂರಪ್ಪ
ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ ಇಲ್ಲಿ ಮತದಾರರೇ ನಾಯಕರು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ನಮಗೆ ಬೇಕಿರುವುದು ಪ್ರಜೆಗಳಾದ ನಾವು ಹೇಳಿದಂತೆ ಕೆಲಸ ಮಾಡುವಂತಹ ಉತ್ತಮ ಕಾರ್ಮಿಕರು. ಇಲ್ಲಿ ನಮಗೆ ಬೇಕಿರುವುದು ಕಾಯಕತ್ವದ ಸಂಸ್ಕೃತಿ ಎಂದು ಹೇಳಿದ್ದಾರೆ. ತಮ್ಮದೇ ಆದ ವಿಶೇಷ ನಿಲುವುವನ್ನು ಹೊಂದಿರುವ ಇವರು ರಾಜಕೀಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತಾರೆ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಯಾವುದೇ ಹೆಚ್ಚಿನ ಪ್ರಚಾರವಿಲ್ಲದೇ, ಯಾವುದೇ ಖರ್ಚು ಇಲ್ಲದೇ ಒಬ್ಬ ಪೂರ್ಣ ಪ್ರಮಾಣದ ನಾಯಕ ದೇಶದ ಜನತೆಗಾಗಿ ಕೆಲಸ ಮಾಡಬೇಕು ಎನ್ನುವುದು ಎಲ್ಲರಿಗೂ ಇಷ್ಟವಾಗುವಂತಹ ವಿಚಾರವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎನ್ನುವುದು ಎಲ್ಲರ ಕುತೂಹಲವಾಗಿದೆ.
Nota Vote Details : What happens if voters cast Nota Vote: Actor Upendra explained