ಬೆಂಗಳೂರು : siddaramaiah tweet : ಕನ್ನಡ ಭಾಷೆಯೆಂಬುದು ನಮಗೆ ಎಂದಿಗೂ ರಾಜಕಾರಣದ ಆಯುಧವಲ್ಲ ಆದರೆ ಧರ್ಮ ರಾಜಕಾರಣದ ಹಸು ಬರಡಾಗುತ್ತಿದೆ ಎಂಬುದನ್ನು ಅರಿತ ಬಿಜೆಪಿ ನಾಯಕರು ಇದೀಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಬಿಜೆಪಿ ನಾಯಕರ ಸ್ವಾರ್ಥ ರಾಜಕಾರಣಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡುತ್ತಾರೆ ಎಂದು ಬರೆದಿದ್ದಾರೆ.
ಇಂಗ್ಲೀಷ್, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳ ಮೇಲೆ ನಮಗೆ ಗೌರವವಿದೆ. ನಮಗೆ ಈ ಎಲ್ಲಾ ಭಾಷೆಗಳು ಬೇಕು. ಇವುಗಳಿಂದ ಹರಿದು ಬರುವ ಜ್ಞಾನದ ಅಮೃತ ಕೂಡ ನೇಕು. ಆದರೆ ಕನ್ನಡಕ್ಕೆ ಎಂದಿಗೂ ನಮ್ಮ ಮೊದಲ ಆದ್ಯತೆ ಇರಲಿದೆ. ಮಾತೃಭಾಷೆಗೆ ಮೊದಲ ಪೂಜೆ ಸಲ್ಲುತ್ತದೆ. ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಭಾಷಾವಾರು ಪ್ರಾಂತಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಗೌರವ ಕೊಡಲೇಬೇಕಾಗುತ್ತದೆ. ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ… ಎನ್ನುವ ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದಂತಹ ನಿಲುವು ನಮಗೆ ಭಾಷೆ ಹಾಗೂ ಪ್ರದೇಶಗಳ ಮೇಲಿದೆ. ಕನ್ನಡ ಭಾಷೆ ನಮಗೆ ಎಂದಿಗೂ ಆಯುಧವಲ್ಲ. ಆದರೆ ಇದು ನಮ್ಮ ಜೀವದ ಉಸಿರು ಎಂದಿದ್ದಾರೆ.
ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ @BJP4India ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ.
— Siddaramaiah (@siddaramaiah) April 29, 2022
ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ.
1/12#HindiImposition
ಕನ್ನಡ ಭಾಷೆಯೇ ನಮಗೆ ಮಾತೃಭಾಷೆ. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ರಾಜ್ಯದ ಭಾಷೆಗಳೇ ನಮಗೆ ರಾಷ್ಟ್ರ ಭಾಷೆಯಾಗಿದೆ. ಇದನ್ನು ಸಂವಿಧಾನ ಕೂಡ ಒಪ್ಪಿಕೊಳ್ಳುತ್ತದೆ. ಆದರೆ ದೇಶದ್ರೋಹಿಗಳು ಸಂವಿಧಾನವನ್ನೇ ವಿರೋಧಿಸುತ್ತಿದ್ದಾರೆ. ಮಾತೃಭಾಷೆ ಕೇವಲ ವರ್ಣಮಾಲೆಗೆ ಮಾತ್ರ ಸೀಮಿತವಾಗಿಲ್ಲ. ಮಾತೃಭಾಷೆ ಎಂದರೆ ನಮ್ಮ ಭಾವನೆ, ಸಂಬಂಧ, ತನ್ನತನದ ಪ್ರಜ್ಞೆ, ಸಂಸ್ಕೃತಿ, ಇತಿಹಾಸ, ನೆಲ, ಜಲ, ಸಂಪತ್ತು ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಇದು ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಮೂರ್ಖರಿಗೆ ತಿಳಿದಿರಲಿ ಸರಣಿ ಟ್ವೀಟ್ಗಳ ಮೂಲಕ ಟಾಂಗ್ ನೀಡಿದರು.
ಕೇಂದ್ರ ಗೃಹ ಸಚಿವ @AmitShah ಹಿಂದಿ ಪರ ವಕಾಲತು ಮಾಡಿದ ಕೂಡಲೇ ರಾಜ್ಯದ @BJP4Karnataka ನಾಯಕರು ಅವರನ್ನು ಓಲೈಸಲು ಸಾಲಲ್ಲಿ ನಿಂತಿದ್ದಾರೆ. ಬಿಜೆಪಿ ನಾಯಕರೇ, ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ ಸ್ವಾಭಿಮಾನಿ ಮಕ್ಕಳಾಗಿ.
— Siddaramaiah (@siddaramaiah) April 29, 2022
8/12#HindiImposition
ಆದರೆ ಕೆಲವರು ದೆಹಲಿ ದೊರೆಗಳ ಓಲೈಕೆ ಮಾಡ ಹೊರಟಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಎನ್ನುವ ಸಿ.ಟಿ ರವಿ ಹಾಗೂ ಮುರುಗೇಶ್ ನಿರಾಣಿ ಮುಂತಾದವರಿಗೂ ಹಿಂದಿಯ ಮೇಲೆ ಪ್ರೇಮವಿಲ್ಲ. ಇವರಿಗೆಲ್ಲ ತಮ್ಮ ದೆಹಲಿ ದೊರೆಗಳನ್ನು ಓಲೈಸುವುದೇ ಕಾರ್ಯವಾಗಿದೆ. ಗೃಹ ಸಚಿವ ಅಮಿತ್ ಶಾ ಹಿಂದಿ ಪರ ಮಾತನಾಡುತ್ತಾರೆಂದು ಅವರನ್ನು ಓಲೈಸಲು ಇವರೆಲ್ಲ ಹಿಂದಿ ಪರ ಒಲವು ತೋರಿದ್ದಾರೆ . ಬಿಜೆಪಿ ನಾಯಕರು ಅಮಿತ್ ಶಾ ಗುಲಾಮರಾಗಬಾರದು ಬದಲಾಗಿ ಕನ್ನಡ ತಾಯಿಯ ಸ್ವಾಭಿಮಾನಿ ಮಕ್ಕಳಾಗಬೇಕೆಂದು ಕಿವಿ ಹಿಂಡಿದ್ದಾರೆ.
ಇದನ್ನು ಓದಿ : Aravind Kaushik Arrest : ಸ್ಯಾಂಡಲ್‌ವುಡ್ ನಿರ್ದೇಶಕ ಅರವಿಂದ ಕೌಶಿಕ್ ಅರೆಸ್ಟ್
opposition leader siddaramaiah tweet about national language controversy