Potato Peels : ಆಶ್ಚರ್ಯವಾಗುತ್ತಿದೆಯಾ? ಆದರೂ ಹೌದು, ಆಲೂಗಡ್ಡೆ ಸಿಪ್ಪೆಯಿಂದಲೂ ರುಚಿಕರವಾದ ಸ್ನಾಕ್ಸ್‌ ಮಾಡಬಹುದು!

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಅತಿ ಹೆಚ್ಚಾಗಿ ಬಳಸುವ ತರಕಾರಿ ಎಂದರೆ ಆಲೂಗಡ್ಡೆ(Potato). ಆದರೆ ಇದರ ಸಿಪ್ಪೆಯನ್ನು(Potato Peels) ವೇಸ್ಟೇಜ್‌ ಎಂದು ಪರಿಗಣಿಸುತ್ತವೆ. ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಅಲೂಗಡ್ಡೆ ಪಲ್ಯ, ಆಲೂಗಡ್ಡೆ ಪರಾಠ, ಆಲೂ ಪುಲಾವ್‌, ಆಲೂ ಟಿಕ್ಕಿ ಹೀಗೆ ಮುಗಿಯದ ಉದ್ದದ ಪಟ್ಟಿಯಲ್ಲಿ ಆಲೂಗಡ್ಡೆ ಸೇರಿಹೋಗಿದೆ. ಇದರಿಂದ ರುಚಿಯಾದ ಮತ್ತು ಪೋಷಕಾಂಶಗಳಿಂದ ಕೂಡಿದ ಅಡುಗೆ ಮಾಡುತ್ತೇವೆ ಎಂಬುದೇನೋ ಸರಿ ಆದರೆ ಸಿಪ್ಪೆ ತೆಗೆಯುವುದರಿಂದ ಹೆಚ್ಚಿನ ವೇಸ್ಟ ಕೂಡಾ ಮಾಡುತ್ತೇವೆ ಎಂಬುದು ಬೇಸರದ ಸಂಗತಿ. ಎಂದಾದರೂ ಯೋಚಿಸಿದ್ದೀರಾ ಈ ಸಿಪ್ಪಿಯಿಂದಲೂ ಏನಾದರೂ ತಯಾರಿಸಬಹುದು ಎಂದು?

ಆಲೂಗಡ್ಡೆಯ ಸಿಪ್ಪೆಯಲ್ಲಿ ಇತರ ಪೋಷಕಾಂಶಗಳ ಜೊತೆಗೆ ಪೊಟ್ಯಾಶಿಯಂ ಸಮೃದ್ದವಾಗಿರುತ್ತದೆ. ಅದರಿಂದಲೂ ಆರೋಗ್ಯಕ್ಕೆ ಉತ್ತಮವಾದ ತಿಂಡಿಗಳನ್ನು ಮಾಡಬಹುದು. ಆದರೆ ಮೊಟ್ಟ ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆಯಬೇಕು ಏಕೆಂದರೆ ಮಣ್ಣು, ಧೂಳು ಅದರಲ್ಲಿ ಇರುತ್ತದೆ.

ಆಲೂಗಡ್ಡೆಯ ಸಿಪ್ಪೆಯಿಂದ(Potato Peels) ಮಾಡಬಹುದಾದ 5 ತಿಂಡಿಗಳು:

ಇದನ್ನೂಓದಿ : Potato Health Benefits : ಆಲೂಗಡ್ಡೆ ಎಂದು ದೂರುವ ಮುನ್ನ ಇದನ್ನೊಮ್ಮೆ ಓದಿ

ಆಲೂಗಡ್ಡೆ ಸಿಪ್ಪೆಯ ಚಿಪ್ಸ್‌ :
ಯಾವಾಗಲೂ ಆಲೂಗಡ್ಡೆಯ ಗರಿ ಗರಿಯಾದ ಚಿಪ್ಸ್‌ ಮಾಡಲು ಸಿಪ್ಪೆ ತೆಗೆಯುತ್ತೀರಲ್ಲವೇ? ಮುಂದಿನ ಸಲ ಅದರ ಸಿಪ್ಪೆ ತೆಗೆದು ಎಸೆಯಬೇಡಿ. ಅದರಿಂದ ಚಿಪ್ಸ್‌ ಮಾಡಿ. ಸಂಜೆಯ ಸ್ನಾಕ್ಸ್‌ಗೆ ಉತ್ತಮವಾಗಿರುತ್ತದೆ. ಆಲೀವ್‌ ಎಣ್ಣೆಯಲ್ಲಿ ಆಲೂಗಡ್ಡೆ ಸಿಪ್ಪೆಯನ್ನು ಕರಿದು ಅದಕ್ಕೆ ನಿಮ್ಮಷ್ಟದ ಖಾರ ಸೇರಿಸಿ.

ಆಲೂಗಡ್ಡೆ ಸಿಪ್ಪೆ ಸೂಪ್‌:
ನಿಮಗೆಲ್ಲಾ ತಿಳಿದಿರುವಂತೆ ಸೂಪ್‌ ಅನ್ನು ಯಾವುದೇ ತರಕಾರಿಗಳನ್ನು ಉಪಯೋಗಿಸಿ ಮಾಡಬಹುದು. ಅದಕ್ಕೆ ಆಲೂಗಡ್ಡೆಯ ಸಿಪ್ಪೆ ಸೀರಿಸಿ. ಆಲೂಗಡ್ಡೆ ಸಿಪ್ಪೆ, ಬೆಳ್ಳುಳ್ಳಿ, ಶುಂಠಿ, ಈರುಳ್ಳಿ ಮತ್ತು ಟೊಮೆಟೋ ಎಲ್ಲಾವನ್ನು ಸೇರಿಸಿ ಬೇಯಿಸಿ. ನಂತರ ಅದನ್ನು ಮಿಕ್ಸರ್‌ನಲ್ಲಿ ನುಣ್ಣಗೆ ರುಬ್ಬಿ. ನಂತರ ಕುದಿಸಿ. ಅದಕ್ಕೆ ಕ್ರೀಮ್‌ ಅಥವಾ ಕೊತ್ತಂಬರಿ ಸೊಪ್ಪು ಮತ್ತು ಲಿಂಬು ರಸ ಹಾಕಿ ಅಲಂಕರಿಸಿ.

ಆಲೂಗಡ್ಡೆ ಸಿಪ್ಪೆಯ ಬ್ರೋತ್‌(ತಿಳಿ ಸಾರು) :
ವಿವಿಧ ಪಾಕ ವಿಧಾನಗಳನ್ನು ತಯಾರಿಸಲು ಹಲವು ಬಗೆಯ ತರಕಾರಿಗಳು ಯಾವಾಗಲೂ ಸೂಕ್ತವಾಗಿ ಇರುತ್ತವೆ. ಆಲೂಗಡ್ಡೆ ಸಿಪ್ಪೆಯ ಬ್ರೋತ್‌ ಕೂಡಾ ಉತ್ತಮ ಪದಾರ್ಥವಾಗಬಲ್ಲದು. ಆಲೂಗಡ್ಡೆಯ ಸಿಪ್ಪೆಯನ್ನು ಉಪ್ಪು ಮತ್ತು ಕರಿ ಮೆಣಸಿನ ಜೊತೆ ಕುದಿಸಿ. ನೀರನ್ನು ಸೋಸಿ ಆ ನೀರಿನಿಂದ ಒಂದು ಒಳ್ಳೆಯ ಬ್ರೋತ್‌ (ತಿಳಿ ಸಾರಿ)ಮಾಡಿ.

ಆಲೂಗಡ್ಡೆ ಸಿಪ್ಪೆಯ ಗಾರ್ನಿಶ್‌ :
ಸಲಾಡ್‌, ರಾಯ್ತಾ, ಅಥವಾ ಬಿರಿಯಾನಿಗಳಿಗೆ ಮೇಲಿನಿಂದ ಕ್ರಿಸ್ಪಿಯಾಗಿರುವುದನ್ನು ಗಾರ್ನಿಶ್‌ ಮಾಡಿದರೆ ಅದರ ಟೇಸ್ಟ್‌ ಬಹಳ ರುಚಿಯಾಗಿರುತ್ತದೆ. ಆಲೂಗಡ್ಡೆಯ ಸಿಪ್ಪಿಯನ್ನು ಗರಿಗರಿಯಾಗಿ ಕರಿದು ಪುಡಿ ಮಾಡಿ. ಅದನ್ನು ನಿಮ್ಮಷ್ಟದ ಅಡುಗೆ ಅಲಂಕರಿಸಲು ಬಳಸಿ.

ಬೇಯಿಸಿದ ಆಲೂಗಡ್ಡೆಯ ಸಿಪ್ಪೆ:
ಬೇಯಿಸಿದ ಆಲೂಗಡ್ಡೆ ಅತ್ಯಂತ ಜನಪ್ರಿಯ ತಿಂಡಿ ಪದಾರ್ಥಗಳಲ್ಲಿ ಒಂದು. ಬೇಯಿಸಿದ ಆಲೂಗಡ್ಡೆಯಿಂದ ಸಿಪ್ಪೆ ತೆಗೆಯಿರಿ, ಅದಕ್ಕೆ ಸಾಸಿವೆ ಸಾಸ್‌ ಮತ್ತು ಚೀಸ್‌ನಿಂದ ತುಂಬಿಸಿ. ನಂತರ ಅದನ್ನು ಪುನಃ ಬೇಯಿಸಿ.

ಇದನ್ನೂಓದಿ :Benefits of Sweet Potatoes : ಗೆಣಸಿನ ಸೇವನೆಯಿಂದ ನಿಮ್ಮ ದೇಹಕ್ಕೆ ಸಿಗಲಿದೆ ಇಷ್ಟೆಲ್ಲ ಲಾಭ..!

(Potato peels make these 5 genius recipes using potato peels)

Comments are closed.