ದಾವಣಗೆರೆ: MLA MP Renukacharya : ರಾಹುಲ್ ಗಾಂಧಿ ನೇತ್ರತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ತಲುಪಿ ಎರಡನೇ ದಿನದ ಯಾತ್ರೆ ನಡೆದಿದೆ. ಆದ್ರೆ ಈ ಭಾರತ್ ಜೋಡೋ ಯಾತ್ರೆಗೆ ಜನರು ಬರ್ತಾ ಇಲ್ಲ ಪೇಮೆಂಟ್ ಕೊಟ್ಟು ಕರೆತರುತ್ತಿದ್ದಾರೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಗೋ ಬ್ಯಾಕ್ ರಾಹುಲ್ ಗಾಂಧಿ ಎಂದು ಜನರು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದು ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆ ಎಂದ ರೇಣುಕಾಚಾರ್ಯ, ನರೇಂದ್ರ ಮೋದಿಯವರು ಒಂದು ದೈತ್ಯ ಬಂಡೆ. ಆ ಬಂಡೆಯ ವಿರುದ್ದ ಹೋಗ್ತಾರಲ್ಲ ಇದು ಚೈಲ್ಡಿಶ್ ಎಂದರು. ರಾಹುಲ್ ಗಾಂಧಿ ಫನ್ನಿಬಾಯ್ ಎಂದ ಎಂಪಿ ರೇಣುಕಾಚಾರ್ಯ, ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೂ ಜನರು ಗೋ ಬ್ಯಾಕ್ ಎಂದು ಜನ ರಾಹುಲ್ ಗಾಂಧಿಯನ್ನು ಓಡಿಸುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ದತೆ ಇಲ್ಲ. ದೇಶವನ್ನು ಓಟಿಗಾಗಿ ಸ್ವಾರ್ಥಕ್ಕಾಗಿ ಛಿದ್ರ ಮಾಡಿದವರು. ರಾಜಸ್ಥಾನ ದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಅದ್ಯಕ್ಷರಾಗಲು ಯಾರು ಸಿದ್ದರಿಲ್ಲ ಎಂದು ರೇಣುಕಾಚಾರ್ಯ ಹೇಳಿದರು. ರಾಹುಲ್ ಗಾಂಧಿ ಏನಾದ್ರೂ ಅದ್ಯಕ್ಷರಾದ್ರೆ ಕಾಂಗ್ರೆಸ್ ದೂಳಿಪಟವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿಯವರು ಇದ್ದಿದ್ದ ಕಾಂಗ್ರೆಸ್ ಅದು ದೇಶ ಭಕ್ತಿ ಕಾಂಗ್ರೆಸ್. ಈಗ ನಕಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿದೆ ಎಂದು ಕಿಡಿಕಾರಿದರು.
ಭಾರತ್ ಜೋಡೋ ಯಾತ್ರೆ ಐಷಾರಾಮಿ ಯಾತ್ರೆಯಾಗಿದೆ ಎಂದು ಆರೋಪಿಸಿದ ರೇಣುಕಾಚಾರ್ಯ ಅದಕ್ಕೆ ದಿನಕ್ಕೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಪ್ರಶ್ನಿಸಿದರು. ಸಿದ್ದರಾಮೋತ್ಸವ ದಲ್ಲಿ ಡಿಕೆಶಿ ಸಿದ್ದರಾಮಯ್ಯ ಬಲವಂತದ ಅಪ್ಪುಗೆ ಮಾಡಿದ್ರು,ಬೆಂಗಳೂರು ಹೋದ ನಂತರ ನಾನೊಂದು ತೀರಾ ನೀನೊಂದು ತೀರಾ ಆಗಿದ್ದಾರೆ ಎಂದರು.
2023 ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರೇಣುಕಾಚಾರ್ಯ ಸೂರ್ಯ ಚಂದ್ರರೂ ಇರುವುದು ಎಷ್ಟು ಸತ್ಯವೋ ನಾವು ಅಧಿಕಾರಿಕ್ಕೆ ಬರುವುದು ಅಷ್ಟೇ ಸತ್ಯ ಎಂದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಗಲು ಯಾರು ಮುಂದೆ ಬರುತ್ತಿಲ್ಲ. ಅದ್ದರಿಂದ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಖರ್ಗೆಯವರ ಮೇಲೆ ಅಪಾರವಾದ ಗೌರವ ಇದೆ. ಈ ವಿಚಾರದಲ್ಲಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಇದೇ ಸಂದರ್ಭ ಹೇಳಿದರು.
ಇದನ್ನೂ ಓದಿ : Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ
People are not coming for Bharat Jodo Yatra, they are bringing them on payment: MLA MP Renukacharya