Mangalore Lokayukta :ಮಂಗಳೂರಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ, ಮೊದಲ ದಾಳಿಯಲ್ಲೇ ಮಂಗಳೂರು ತಹಸೀಲ್ದಾರ್​​​ ಲಾಕ್

ಮಂಗಳೂರು :Mangalore Lokayukta : ಇತ್ತಿಚೇಗಷ್ಟೆ ರಾಜ್ಯದಲ್ಲಿ ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿ ಮರಳಿ ಶಕ್ತಿ ತುಂಬಲಾಗಿದೆ. ಇದಾದ ಬಳಿಕ ಮೊದಲ ಬಾರಿ ಮಂಗಳೂರಿನಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ ನಡೆಸಿದೆ. ಮೊದಲ ದಾಳಿಯಲ್ಲೇ ಮಂಗಳೂರು ತಹಶೀಲ್ದಾರ್ ನನ್ನು ಲಾಕ್ ಮಾಡಿ ಜೈಲಿಗೆ ಅಟ್ಟಿದೆ.

ಹೌದು..ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಮರಳಿ ಅಧಿಕಾರ ನೀಡಿದ ಬಳಿಕ ಭ್ರಷ್ಟರ ಭೇಟೆಯಾಡುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಶುರು ಮಾಡಿದ್ದಾರೆ.‌ ಕಡಲ ನಗರಿ ಮಂಗಳೂರಿನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ವಿರುದ್ಧ ಸಮರ ಶುರು ಮಾಡಿದ್ದಾರೆ.‌ ಮೊದಲ ದಾಳಿಯಲ್ಲೇ ಮಂಗಳೂರು ತಹಶೀಲ್ದಾರ್ ಹಾಗೂ ಎಫ್.ಡಿ.ಎ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಫೋಟೋದಲ್ಲಿರುವ ಆರೋಪಿ ತಹಶೀಲ್ದಾರ್ ಪುರಂದರ ಹೆಗ್ಡೆ, ಪ್ರಥಮ ದರ್ಜೆ ಸಹಾಯಕ ಶಿವಾನಂದ ನಾಟ್ಯಾಕರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಜಾಗವೊಂದರ ಮಾರಾಟಕ್ಕೆ ಎನ್.ಓ.ಸಿ ನೀಡಲು 4,700 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದಾರೆ‌.

ಮಂಗಳೂರು ನಗರದ ಕಾವೂರು ನಿವಾಸಿಯೊಬ್ಬರು ತಮ್ಮ ಜಾಗವೊಂದನ್ನು ಮಾರಾಟ ಮಾಡಲು ಎನ್ ಒ ಸಿ ಪಡೆಯಲು ಮಂಗಳೂರು ತಹಶೀಲ್ದಾರ್ ಗೆ ಮೂರು‌ ತಿಂಗಳ‌ ಹಿಂದೆ ಅರ್ಜಿ‌ ಸಲ್ಲಿಸಿದ್ದರು. ಎನ್ ಒಸಿ ನೀಡಲು ಎಫ್ ಡಿ‌ಎ ಶಿವಾನಂದ ನಾಟೇಕರ್ 5,700 ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಂತ್ರಸ್ಥ ವ್ಯಕ್ತಿ ಲೋಕಾಯುಕ್ತಕ್ಕೆ ದೂರು‌ ನೀಡಿದ್ದರು. ಹೀಗಾಗಿ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ದೂರುದಾರರಿಂದ 4,700 ಲಂಚದ ಹಣ ತೆಗೆದುಕೊಳ್ಳುವಾಗ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ‌ ಹಿಡಿದಿದ್ದಾರೆ. ವಿಚಾರಣೆ ಸಂದರ್ಭ ತನಗೆ ಹಾಗೂ ತಹಶೀಲ್ದಾರ್ ಪುರಂದರ ಹೆಗ್ಡೆ ಪರವಾಗಿ ಹಣ ತೆಗೆದುಕೊಳ್ಳುತ್ತಿರುವುದಾಗಿ ಶಿವಾನಂದ ಬಾಯ್ಬಿಟ್ಟಿದ್ದಾನೆ. ಹೀಗಾಗಿ ತಹಶೀಲ್ದಾರ್ ಹಾಗೂ ಶಿವಾನಂದನನ್ನು ಲಂಚದ ಹಣ ಸಹಿತ ಲೋಕಾಯುಕ್ತ ಅಧಿಕಾರಿಗಳು ತಮ್ಮ ವಶಕ್ಕೆ ‌ಪಡೆದಿದ್ದಾರೆ.

ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ‌. ಒಟ್ಟಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಬೋರ್ಡ್ ಹಾಕಿಕೊಂಡಿದ್ದರು ಸಹ ಲಂಚದ ಹಣಕ್ಕೆ ಆಸೆ ಪಡುವ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರ ಎಂದು ಕಾದುನೋಡಬೇಕಾಗಿದೆ.

ಇದನ್ನು ಓದಿ : Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ

ಇದನ್ನೂ ಓದಿ : Virat Kohli Retirement : ನಿವೃತ್ತಿಗೂ ಮೊದಲು ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡ್ಬೇಕಂತೆ

Tahsildar arrested by Mangalore Lokayukta

Comments are closed.