ಬೆಳಗಾವಿ : ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದ್ದು, ಘೋಷಣೆಯೊಂದೇ ಬಾಕಿ ಇದೆ. ಬೆಳಗಾವಿಯಲ್ಲಿ ಬರೊಬ್ಬರಿ 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಚಿನ್ಹೆಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆಗೆ ಇಳಿದಿದ್ದರು.
ಇದೀಗ ಅದರ ಫಲಿತಾಂಶ ಪ್ರಕಟವಾಗುತ್ತಿದ್ದು, ಬೆಳಗಾವಿ ನಗರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರುವುದು ಖಚಿತವಾಗಿದೆ. ಬೆಳಗಾವಿಯ ಒಟ್ಟು 58 ವಾರ್ಡ್‌ಗಳ ಪೈಕಿ ಈಗಾಗಲೇ ಬಿಜೆಪಿ 33 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಇಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 28 ಆಗಿದೆ. ಹೀಗಾಗಿ ಬಹುಮತ ನಂಬರ್‌ನ್ನು ದಾಟಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಇದನ್ನೂ ಓದಿ: ದೆಹಲಿಗೆ ಹೊರಡಲು ಸಜ್ಜಾದ ಸಿಎಂ ಬೊಮ್ಮಾಯಿ : ಶಾಸಕರಿಗೆ ಶುರುವಾಗಿದ್ಯಾಕೆ ತಳಮಳ
ಉಳಿದಂತೆ ಕಾಂಗ್ರೆಸ್ ಪಕ್ಷ 5 ವಾರ್ಡ್‌ಗಳಲ್ಲಿ ಮತ್ತು ಎಂಇಎಸ್ 2 ವಾರ್ಡ್‌ಗಳಲ್ಲಿ ಜಯ ಸಾಧಿಸಿವೆ. 1 ವಾರ್ಡ್‌ನಲ್ಲಿ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಜಯ ಸಾಧಿಸಿದೆ. 15ನೇ ವಾರ್ಡ್ ನಲ್ಲಿ ಬಿಜೆಪಿಯ ನೇತ್ರಾವತಿ ವಿನೋದ ಭಾಗವತ್, ವಾರ್ಡ್ ನಂಬರ್ 14 ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಶಿವಾಜಿ ಮಂಡೋಳಕರ್ ಮತ್ತು ವಾರ್ಡ್ ನಂಬರ್ 40ರಲ್ಲಿ ಬಿಜೆಪಿಯ ಹೇಮಾ ಕಾಮ್ಕರ್ ಗೆಲುವು ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.
(After 17 years in Belgaum, the lotus bloomed!)