ಮಂಗಳವಾರ, ಏಪ್ರಿಲ್ 29, 2025
HomekarnatakaCM Bommai Warning : ಬಿಜೆಪಿ ಶಾಸಕಾಂಗ ಸಭೆ : ಶಾಸಕರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ...

CM Bommai Warning : ಬಿಜೆಪಿ ಶಾಸಕಾಂಗ ಸಭೆ : ಶಾಸಕರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಸಿಎಂ ಬೊಮ್ಮಾಯಿ

- Advertisement -

ಬೆಂಗಳೂರು : ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಅಲ್ಲದೇ ಸಭೆಯಲ್ಲಿ ಶಾಸಕರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ಸಂಸದರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸೇರ್ಪಡೆ !

ಸದನದಲ್ಲಿ ಸಚಿವರು, ಶಾಸಕರು ಯಾವ ರೀತಿ ಭಾಗಿಯಾಗಬೇಕು ? ವಿಪಕ್ಷಗಳ ಪ್ರಶ್ನೆಗೆ ಯಾವೆಲ್ಲ ರೀತಿ ಉತ್ತರ ನೀಡಬೇಕು. ಬೆಲೆ ಏರಿಕೆ ವಿಚಾರವಾಗಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಬಗೆ ಹಾಗೂ ವಿಪಕ್ಷಗಳ ತಂತ್ರಕ್ಕೆ ಹೇಗೆಲ್ಲ ಪ್ರತಿತಂತ್ರಗಳನ್ನು ಹೂಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೇ ಸಭೆಯಲ್ಲಿ ಪ್ರತಿ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: DVS : ವೈರಲ್‌ ವಿಡಿಯೋದಲ್ಲಿರುವುದು ನಾನಲ್ಲ : ಸ್ಪಷ್ಟನೆ ಕೊಟ್ಟ ಡಿ.ವಿ.ಸದಾನಂದ ಗೌಡ

(BJP Legislative Assembly: CM Bommai Warning MLAs)

RELATED ARTICLES

Most Popular