ಭಾರತದ ಸೇನಾ ಸೀಕ್ರೆಟ್‌ ಕದ್ದ ISI ಸುಂದರಿ : ಪಾಕ್‌ ಗೂಢಾಚಾರಿ ಜಿತೇಂದ್ರ ಸಿಂಗ್‌ ಬಾಯ್ಬಿಟ್ಟ ಸ್ಪೋಟಕ ಮಾಹಿತಿ

ಬೆಂಗಳೂರು : ಪಾಪಿ ಪಾಕಿಸ್ತಾನ ಇದೀಗ ಸುಂದರಿಯನ್ನು ಮುಂದಿಟ್ಟುಕೊಂಡು ಭಾರತದ ಆಂತರಿಕ, ಸೇನಾ ಮಾಹಿತಿಯನ್ನು ಕದಿಯುವ ನೀಚ ಕಾರ್ಯಕ್ಕೆ ಮುಂದಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಲ್ಲಿ ಅರೆಸ್ಟ್‌ ಆಗಿರುವ ದೇಶದ್ರೋಹಿ ಜಿತೇಂದ್ರ ಸಿಂಗ್‌ ಬಾಯ್ಬಿಟ್ಟ ಸ್ಪೋಟಕ ಹೇಳಿಕೆ ದೇಶದ ಭದ್ರತೆಗೆ ಆತಂಕವನ್ನು ತಂದಿದ್ದು, ಸಿಸಿಬಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ccb-arrest-pak-isi-agent-bangalore

ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ನಕಲಿ ಆರ್ಮಿ ಆಫೀಸರ್‌ ಜಿತೇಂದ್ರ ಸಿಂಗ್‌ ವಿರುದ್ದ ಇದೀಗ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಇನ್‌ಸ್ಪೆಕ್ಟರ್‌ ಶಿವಪ್ರಸಾದ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಅಫಿಷಿಯಲ್ ಸಿಕ್ರೇಟ್ ಆ್ಯಕ್ಟ್ -1933 ಯ ಸೆ. 3,6,9, ಐಪಿಸಿ 120(ಬಿ)ಅಡಿ ದೂರು ದಾಖಲು ದಾಖಲು ಮಾಡಲಾಗಿದೆ. ಸೇನೆಯ ಆಂತರಿಕ ಮಾಹಿತಿಯನ್ನು‌ ಕಳುಹಿಸಲು ಮೊಬೈಲ್‌ ಸಂಖ್ಯೆಯನ್ನು ಬಳಕೆ ಮಾಡುತ್ತಿದ್ದ. ರಾಜಸ್ತಾನ ಮೂಲದ ಜಿತೇಂದ್ರ ಸಿಂಗ್ ಕರಾಚಿಯ ಇಂಟಲಿಜೆನ್ಸ್ ಆಪರೇಟಿವ್ ಜೊತೆ ನೇರ ಸಂಪರ್ಕ ಹೊಂದಿದ್ದಾನೆ ಅನ್ನೋದು ತನಿಖೆಯಿಂದ ಬಯಲಾಗಿದೆ.

ಬೆಂಗಳೂರಿನ ಜಾಲಿ ಮೊಹಲ್ಲಾದ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಪೊಲೀಸರು ಹಾಗೂ ಮಿಲಿಟರಿ ಇಂಟೆಲಿಜೆನ್ಸಿ ತಂಡ ಕಾರ್ಯಚರಣೆ ಯನ್ನು ನಡೆಸಿತ್ತು. ಭಾರತದ ಮಿಲಿಟರಿ ಡ್ರೆಸ್‌ ಹಾಕಿಕೊಂಡು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ಮಾಹಿತಿಯನ್ನು ರವಾನಿಸುತ್ತಿರೋದು ಇದೀಗ ತನಿಖೆಯಿಂದ ಬಯಲಾಗಿದೆ. ಅಲ್ಲದೇ ಪಾಕಿಸ್ತಾನ ಮೂಲದ ಮೊಬೈಲ್‌ ನಂಬರಿನ ಜೊತೆ ನಿರಂತವಾಗಿ ಸಂಪರ್ಕವಿದ್ದ. ಈ ಸಂಖ್ಯೆಯನ್ನು ಪೂಜಾಜಿ ಎಂದು ಸೇವ್‌ ಮಾಡಿಕೊಂಡಿದ್ದಾನೆ. ಈ ನಂಬರ್‌ಗೆ ಸೇನೆಗೆ ಸಂಬಂಧಿಸಿದ ಪೋಟೋ, ವಿಡಿಯೋಗಳನ್ನು ಕಳುಹಿಸಿರುವುದು ತಿಳಿದುಬಂದಿದೆ. ಅಲ್ಲದೇ ಹಲವು ಚಾಟ್‌ಗಳನ್ನು ಡಿಲೀಟ್‌ ಮಾಡಿದ್ದಾನೆ.

ಮಿಲಿಟರಿ ಆಫೀಸರ್‌ ಎಂದು ಪೋಸ್‌ ಕೊಡ್ತಿದ್ದ ಬಟ್ಟೆ ವ್ಯಾಪಾರಿ

ದೇಶದ್ರೋಹಿ ಜಿತೇಂದ್ರ ಸಿಂಗ್‌ ಪ್ರಮುಖವಾಗಿ ಪಾಕಿಸ್ತಾನದ ISI ಏಜೆಂಟ್‌ ಎನಿಸಿಕೊಂಡಿರುವ ಮಹಿಳೆಯ ಹೆಸರನ್ನು ತನ್ನ ಮೊಬೈಲ್‌ನಲ್ಲಿ ಪೂಜಾಜಿ ಎಂದು ಸೇವ್‌ ಮಾಡಿಕೊಂಡಿ ದ್ದಾನೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಜಿತೇಂದ್ರ ಸಿಂಗ್‌, ಬಟ್ಟೆ ವ್ಯಾಪಾರವನ್ನು ಮಾಡಿಕೊಂಡು ಊರೆಲ್ಲಾ ಸುತ್ತುತ್ತಿದ್ದ. ಇನ್ನೂ ಹಲವರ ಬಳಿಯಲ್ಲಿ ತಾನೂ ಮಿಲಿಟರಿ ಆಫೀಸರ್‌ ಅಂತಾನೂ ಹೇಳಿಕೊಂಡಿದ್ದಾನೆ. ಸುಂದರಿಯ ಜೊತೆಯಲ್ಲಿ ಜಿತೇಂದ್ರ ಹಲವು ಸಮಯಗಳಿಂದಲೂ ಸಂಪರ್ಕ ಇಟ್ಟುಕೊಂಡಿದ್ದು, ನಿರಂತರವಾಗಿ ದೇಶದ ಮಾಹಿತಿ ಯನ್ನು ಪಾಕಿಸ್ತಾನಕ್ಕೆ ರವಾನಿಸುವ ಕಾರ್ಯವನ್ನು ಮಾಡಿದ್ದಾನೆ ಅನ್ನೋದು ತನಿಖೆಯಿಂದ ಬಯಲಾಗಿದೆ.

ಅಂಗಡಿ ಮಾಲೀಕರ ಖಾತೆಗೆ ISI ಹಣ ಪಡೆದ ಜಿತೇಂದ್ರ ಸಿಂಗ್‌ !

ತಾನು ದೇಶದ್ರೋಹದ ಕೃತ್ಯವನ್ನು ಮಾಡುತ್ತಿದ್ದೇನೆ ಅನ್ನೋದು ಅರಿವಿದ್ದರೂ ಕೂಡ ಸುಂದರಿಯ ಮೋಹ ಪಾಷಕ್ಕೆ ಬಿದ್ದಿದ್ದ ಜಿತೇಂದ್ರ ಸಿಂಗ್‌ ತನ್ನ ದೇಶದ ಸೀಕ್ರೆಟ್‌ಗಳನ್ನು ಪಾಪಿ ಪಾಕಿಸ್ತಾನ ಗೂಡಾಚಾರಿ ISI ಗೆ ನೀಡುವ ಕಾರ್ಯವನ್ನು ಮಾಡಿದ್ದಾನೆ. ಫೇಸ್‌ಬುಕ್‌ ನಲ್ಲಿ ಪರಿಚಯವಾಗಿದ್ದ ಪಾಕಿಸ್ತಾನ ISI ಏಜೆಂಟ್‌ ನೇಹಾ @ ಪೂಜಾಜಿಯಿಂದ ಬರುತ್ತಿದ್ದ ಹಣವನ್ನು ತನ್ನ ಖಾತೆಗೆ ಈತ ನೇರವಾಗಿ ಪಡೆಯುತ್ತಿರಲಿಲ್ಲ. ಬದಲಾಗಿ ಅಕ್ಕಪಕ್ಕದ ಅಂಗಡಿ ಮಾಲೀಕರ ಖಾತೆಗಳಿಗೆ ವರ್ಗಾವಣೆ ಮಾಡಿಸುತ್ತಿದ್ದ. ನಂತರ ಗೂಗಲ್‌ ಪೇ, ಪೋನ್‌ ಪೇ ಮೂಲಕ ಹಣವನ್ನು ಪಡೆದುಕೊಳ್ಳುತ್ತಿದ್ದ ಅನ್ನೋದು ತನಿಖೆಯಿಂದ ಬಯಲಾಗಿದೆ. 2016ರಿಂದಲೂ ಈತ ಸಾವಿರಾರು ಸಂದೇಶಗಳನ್ನ ಕಳುಹಿಸಿದ್ದಾನೆ. ಅಲ್ಲದೇ ISI ಜೊತೆ ನೇರ ಸಂಪರ್ಕ ಹೊಂದಿರುವುದು ತನಿಖೆಯಿಂದ ಬಯಲಾಗಿದೆ. 15 ರಿಂದ 20 ಸಾವಿರ ರೂಪಾಯಿಗೆ ಈ ಕಾರ್ಯವನ್ನು ಮಾಡಿದ್ದಾನೆ ಅನ್ನೋದು ಬಯಲಾಗಿದೆ.

ವಿಮಾನದಲ್ಲಿ ಪ್ರಯಾಣಿಸಿ ಮಾಹಿತಿ ನೀಡಿದ್ದ ಆರೋಪಿ

ಇನ್ನು ಜಿತೇಂದ್ರ ಸಿಂಗ್‌ ದೇಶದ ದೆಹಲಿ, ಅಹಮದಾಬಾದ್‌ ಸೇರಿದಂತೆ ಹಲವು ಕಡೆಗಳಿಗೆ ವಿಮಾನದಲ್ಲಿಯೇ ಪ್ರಯಾಣಿಸಿದ್ದಾನೆ. ISI ಸೂಚನೆಯ ಹಿನ್ನೆಲೆಯಲ್ಲಿ ಈತ ದೇಶದ ಹಲವು ಭಾಗಗಳಿಗೆ ತೆರಳಿರೋದು ತನಿಖೆಯಿಂದ ಬಯಲಾಗಿದೆ. ಅಲ್ಲದೇ ಆತನ ಮೊಬೈಲ್‌ನಲ್ಲಿ ಸಿಕ್ಕಿರುವ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ : ಯುವತಿ ಹೆಸರಲ್ಲಿ ಯುವಕರಿಗೆ ಪಾಕ್ ISI ಗಾಳ : ಫೇಸ್‌ಬುಕ್‌ನಲ್ಲಿ ಮಿಲಿಟರಿ ಮಾಹಿತಿ ಲೀಕ್ ಮಾಡಿದ್ದಾತ ಅರೆಸ್ಟ್‌

6 ಸೇನಾ ನೆಲೆಗಳ ಮಾಹಿತಿ ರವಾನೆ !

ಆರೋಪಿ ಜಿತೇಂದರ್ ಸಿಂಗ್, ದೇಶದ 6 ಸೇನಾ ನೆಲೆಗಳ ರಹಸ್ಯ ಮಾಹಿತಿಯನ್ನು ಪಾಕ್ ಐಎಸ್‌ಐಗೆ ಕಳುಹಿಸಿದ್ದಾನೆ. ಇದೇ ಹಿನ್ನೆಲೆಯಲ್ಲಿ ಆತ ಯಾವೆಲ್ಲಾ ಫೋಟೋಗಳನ್ನು ಕಳುಹಿಸಿದ್ದಾನೆ ಅನ್ನೋ ಕುರಿತು ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಈಗಾಗಲೇ ಸಿಸಿಬಿ ಪೊಲೀಸರು ಆತನ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿ ಮಾಡಿರುವ ಕೆಲಸಕ್ಕೆ ಹಣವೂ ಸಂದಾಯವಾಗಿರುವ ದಾಖಲೆಗಳು ಸಿಕ್ಕಿವೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಹಲವರನ್ನು ಮೋಹದ ಬಲೆಗೆ ಬೀಳಿಸಿಕೊಂಡಿದ್ದ ಪಾಕ್‌ ಸುಂದರಿ

ಫೇಸ್‌ ಬುಕ್‌ನಲ್ಲಿ ಸುಂದರ ಯುವತಿಯೋರ್ವಳ ಫ್ರೆಂಡ್‌ ರಿಕ್ವೇಸ್ಟ್‌ ಬರುತ್ತಿದ್ದಂತೆಯೇ ಜಿತೇಂದ್ರ ಸಿಂಗ್‌ ಆಕೆಯ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದ. ಮಿಲಿಟರಿ ಡ್ರೆಸ್‌ನಲ್ಲಿ ಇದ್ದ ಹಲವು ಪೋಟೋಗಳನ್ನು ಆತ ಫೇಸ್‌ಬುಕ್‌ ನಲ್ಲಿ ಹಾಕಿಕೊಂಡಿದ್ದ. ಹೀಗಾಗಿಯೇ ಸುಂದರ ಯುವತಿ ತನ್ನನ್ನು ನೇಹಾ @ ಪೂಜಾಜಿ ಎಂದು ಪರಿಚಯ ಮಾಡಿಕೊಂಡಿದ್ದಳು. ನಂತರ ಭಾರತ ವನ್ನು ಹೊಗಳಿದ್ದ ಆಕೆ ತನಗೆ ಭಾರತವೆಂದರೆ ತುಂಬಾ ಪ್ರೀತಿ ಎಂದು ಹೇಳಿಕೊಂಡಿದ್ದಾಳೆ. ತನಗೆ ಭಾರತದ ಸೇನಾ ನೆಲೆ ಹಾಗೂ ಮಿಲಿಟರಿ ವಾಹನಗಳನ್ನು ನೋಡಬೇಕು. ಸೇನಾ ನೆಲೆಗೆ ತೆರಳಿ ಪೋಟೋಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾಳೆ. ಸುಂದರಿಯ ಮೋಹ ಪಾಷಕ್ಕೆ ಬಿದ್ದ ಜಿತೇಂದ್ರ ಸಿಂಗ್‌ ಸೇನಾಧಿಕಾರಿ ವೇಷ ತೊಟ್ಟು, ಆಕೆ ಹೇಳಿದ ಎಲ್ಲಾ ಪೋಟೋಗಳನ್ನೂ ಕಳುಹಿಸಿಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಜಿತೇಂದ್ರ ಸಿಂಗ್‌ ಮಾತ್ರವಲ್ಲ ಈಕೆ ಇನ್ನೂ ಹಲವರ ಜೊತೆಯಲ್ಲಿ ಸಂಪರ್ಕದಲ್ಲಿರುವ ಮಾಹಿತಿ ಲಭ್ಯವಾಗಿದೆ. ಲೂದಿಯಾನದಲ್ಲಿ ಬಂಧಿತನಾಗಿರುವ ವ್ಯಕ್ತಿಗೆ ಖುಷಿವಿಂದರ್‌ ಕೌರ್‌ ಹೆಸರಲ್ಲಿ ಚಾಟಿಂಗ್‌ ಮಾಡಲಾಗುತ್ತಿತ್ತು. ಹೀಗಾಗಿ ಐಎಸ್‌ಐ ಸುಂದರಿ ಇನ್ನೂ 8-10 ಮಂದಿಯ ಜೊತೆಗೆ ಸಂಪರ್ಕದಲ್ಲಿದ್ದು ಭಾರತದ ಮಿಲಿಟರಿ ಮಾಹಿತಿ ಪಡೆದುಕೊಂಡಿರುವುದು ತನಿಖೆಯಿಂದ ಬಯಲಾಗಿದೆ.

ಇದನ್ನೂ ಓದಿ : ಬುರ್ಖಾಧಾರಿ ಮಹಿಳೆಗೆ ಡ್ರಾಪ್‌ ವೇಳೆ ಹಲ್ಲೆ : ಆರೋಪಿಗಳ ವಿರುದ್ದ7 ಸೆಕ್ಷನ್ ಅಡಿ ಪ್ರಕರಣ ದಾಖಲು

ಇದನ್ನೂ ಓದಿ : ಸರಕಾರಿ ಕಚೇರಿಯಲ್ಲಿ ಹಲ್ಲೆ ಪ್ರಕರಣ : ಉಪನ್ಯಾಸಕರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆಂದ ಆರೋಪಿ !

( Pakistan beauty steals India’s army secret: Pak spy Jitendra Singh explosive information )

Comments are closed.