Praveen Nettar’s Nuthana Kumari : ಪ್ರವೀಣ್‌ ನೆಟ್ಟಾರು ಪತ್ನಿಯನ್ನು ಕೆಲಸದಿಂದ ವಜಾಗೊಳಿಸಿದ ಕಾಂಗ್ರೆಸ್‌ ಸರಕಾರ

ಮಂಗಳೂರು : ಕಳೆದ ವರ್ಷ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರ್‌ ಪತ್ನಿ ನೂತನ ಕುಮಾರಿ (Praveen Nettar’s Nuthana Kumari) ಅವರಿಗೆ ಅನುಕಂಪದ ಆಧಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿದಲ್ಲಿ ಸರಕಾರಿ ಉದ್ಯೋಗಕ್ಕೆ ನೇಮಕ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತತ್ಕಾಲಿಕ ನೇಮಕಾತಿಯನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರವೀನ್‌ ನೆಟ್ಟಾರು ಪತ್ನಿ ಉದ್ಯೋಗ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರ ಮಾಡಿದ ಬೆನ್ನಲ್ಲೇ, ಈ ಹಿಂದಿನ ಸರಕಾರ ಮಾಡಿದ ಎಲ್ಲಾ ರೀತಿಯ ತಾತ್ಕಾಲಿಕವಾಗಿ ನೇಮಕಾತಿಗಳನ್ನು ರದ್ದುಪಡಿಸುವುದು ವಾಡಿಕೆ. ಹೀಗಾಗಿ ನೂತನ ಕುಮಾರಿ ಅವರ ಉದ್ಯೋಗಕ್ಕೂ ಕುತ್ತು ಬಂದಿದೆ. ಪ್ರವೀಣ್‌ ನೆಟ್ಟಾರು ಪತ್ನಿಯನ್ನು ಕೂಡ ತಕ್ಷಣದಿಂದಲೇ ಕರ್ತವ್ಯದಿಂದ ತೆಗೆದು ಹಾಕುವ ಆದೇಶವನ್ನು ಕಾಂಗ್ರೆಸ್‌ ಸರಕಾರ ಹೊರಡಿಸಿದೆ. ಇದರಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ನಿರ್ವಹಿಸುತ್ತಿದ್ದ ಕರ್ತವ್ಯದಿಂದ ನೂತನ ಕುಮಾರಿ ಕೆಲಸದಿಂದ ವಜಾಗೊಂಡಿದ್ದಾರೆ.

ಇದನ್ನೂ ಓದಿ : Dk Shivakumar vs Siddaramaiah : ಸಿಎಂ ಮಾತ್ರವಲ್ಲ ಸಚಿವ ಸ್ಥಾನಕ್ಕೂ ಪಟ್ಟು: ಸಂಪುಟದಲ್ಲಿ ಸಿದ್ಧು ಆಪ್ತ ರಿಗೆ ಮಣೆ, ಡಿಕೆಶಿಗೆ ಹಿನ್ನಡೆ

ಇದನ್ನೂ ಓದಿ : Karnataka Cabinet : ನಾಳೆ 24 ಸಚಿವರ ಪ್ರಮಾಣ ವಚನ, ಇಲ್ಲಿದೆ ನೂತನ ಸಚಿವರ ಪಟ್ಟಿ

ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಬಳಿಕ ಕಾರ್ಯಕರ್ತರ ಆಕ್ರೋಶ ಬಿಜೆಪಿ ಮುಖಂಡರ ಕಡೆಗೆ ತಿರುಗಿತ್ತು. ಹೀಗಾಗಿ ಈ ವೇಳೆ ಘಟನೆಯ ಸಮಗ್ರ ತನಿಖೆಯನ್ನು ಅಂದಿನ ಬಸವರಾಜ್‌ ಬೊಮ್ಮಾಯಿ ಬಿಜೆಪಿ ಸರಕಾರ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ವಹಿಸಿದೆ. ಅಲ್ಲಿಂದ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿತ್ತು. ಸದ್ಯ ಗಂಡನನ್ನು ಕಳೆದುಕೊಂಡ ಪ್ರವೀಣ್‌ ನೆಟ್ಟಾರ್‌ ಪತ್ನಿ ನೂತನ ಕುಮಾರಿಗೆ ನೀಡಿದ ಕೆಲಸ ಆಧಾರವಾಗಿತ್ತು. ಇದೀಗ ನೂತನ ಸರಕಾರ ಅದಕ್ಕೂ ಕತ್ತರಿ ಹಾಕಿ, ಸಂಕಷ್ಟಕ್ಕೆ ತಳ್ಳಿದ್ದಾರೆ.

Praveen Nettar’s Nuthana Kumari: Praveen Nettar’s wife was fired by the Congress government.

Comments are closed.