Protest by JDS leaders :ಹಿಂದಿ ದಿವಸ್​ ವಿರೋಧಿಸಿ ಜೆಡಿಎಸ್​ ನಾಯಕರ ಪ್ರತಿಭಟನೆ : ಕಪ್ಪು ಪಟ್ಟಿ ಧರಿಸಿ ಸದನ ಪ್ರವೇಶಕ್ಕೆ ಯತ್ನಿಸಿದ ತೆನೆ ಶಾಸಕರು

ಬೆಂಗಳೂರು : Protest by JDS leaders : ವಿಧಾನಸಭೆಯಲ್ಲಿ ನಿನ್ನೆಯಿಡೀ ಬೆಂಗಳೂರು ನೆರೆ ವಿಚಾರ ಹಾಗೂ ರಾಜಕಾಲುವೆ ಒತ್ತುವರಿ ತೆರವು ವಿಚಾರ ಭಾರೀ ಚರ್ಚೆಯಾಗಿತ್ತು. ಕಾಂಗ್ರೆಸ್​ ನಾಯಕರ ಎಲ್ಲಾ ಪ್ರಶ್ನೆಗಳಿಗೆ ರಾಜ್ಯ ಸರ್ಕಾರದ ನಾಯಕರು ಉತ್ತರವನ್ನು ನೀಡಲು ಯತ್ನಿಸಿದ್ದರು. ಇಂದು ಹಿಂದಿ ದಿವಸ ವಿರೋಧ ವಿಚಾರವಾಗಿ ವಿಧಾನಸಭೆಯಲ್ಲಿ ಗದ್ದಲ ನಡೆದಿದೆ. ಹಿಂದಿ ದಿವಸ್​ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಜೆಡಿಎಸ್​ ಇಂದು ವಿಧಾನಸೌಧದ ಪ್ರತಿಭಟನೆ ನಡೆಸಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಹಾಗೂ ಹಳದಿ ಕೆಂಪು ಶಾಲನ್ನು ಧರಿಸಿ ಪ್ರತಿಭಟಿಸಿದ್ದಾರೆ.


ಪ್ರತಿಭಟನೆಯ ಭಾಗವಾಗಿ ಜೆಡಿಎಸ್​ ನಾಯಕರು ಕಪ್ಪು ಪಟ್ಟಿ ಹಾಗೂ ಹಳದಿ ಕೆಂಪು ಬಣ್ಣದ ಶಾಲನ್ನು ಧರಿಸಿ ಸದನದ ಒಳಗೆ ಬರಲು ಯತ್ನಿಸಿದರು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಮಾರ್ಷಲ್​​ಗಳು ಸದನಕ್ಕೆ ಪ್ರವೇಶಿಸಲು ಜೆಡಿಎಸ್​ ಶಾಸಕರನ್ನು ತಡೆದಿದ್ದಾರೆ. ಬಲತೋಳಿಗೆ ಕಪ್ಪು ಬಣ್ಣದ ಪಟ್ಟಿಯನ್ನು ಧರಿಸಿದ್ದ ಜೆಡಿಎಸ್​ ಶಾಸಕರು ವಿಧಾನಸೌಧದ ಪಶ್ಚಿಮ ದ್ವಾರದಿಂದ ಸದನಕ್ಕೆ ಆಗಮಿಸಲು ಮುಂಧಾಗಿದ್ದರು.


ಕಪ್ಪು ಪಟ್ಟಿಯನ್ನು ಧರಿಸಿ ಸದನ ಪ್ರವೇಶ ಮಾಡಲು ಜೆಡಿಎಸ್​ ಶಾಸಕರಿಗೆ ಅವಕಾಶ ನೀಡದ ಮಾರ್ಷಲ್​ಗಳು ಕಪ್ಪು ಪಟ್ಟಿಯನ್ನು ಕಳಚಿಟ್ಟು ಸದನದ ಒಳಗೆ ಪ್ರವೇಶಿಸಿ ಎಂದು ಜೆಡಿಎಸ್​ ನಾಯಕರಲ್ಲಿ ಮನವಿ ಮಾಡಿದರು. ಕಪ್ಪು ಪಟ್ಟಿ ಧರಿಸಿದರೆ ಸದನದ ಒಳಗೆ ಪ್ರವೇಶ ಸಿಗುವುದಿಲ್ಲ ಎಂಬುದು ಅರಿವಾದ ಬಳಿಕ ಜೆಡಿಎಸ್​ ನಾಯಕರು ಕಪ್ಪು ಪಟ್ಟಿಯನ್ನು ಕಳಚಿಟ್ಟು ಸದನಕ್ಕೆ ಪ್ರವೇಶಿಸಿದರು.


ಜೆಡಿಎಸ್​ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಸಿಎಂ ಹೆಚ್​​,ಡಿ ಕುಮಾರಸ್ವಾಮಿ, ದೇಶದಲ್ಲಿ ಜನತೆ ನೆರೆ ಪ್ರವಾಹಗಳಿಂದಾಗಿ ತತ್ತರಿಸಿ ಹೋಗಿದ್ದಾರೆ. ಆದರೆ ಕೇಂದ್ರ ಸರ್ಕಾರವು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೇಂದ್ರದ ಗೃಹ ಸಚಿವರಂತೂ ಪದೇ ಪದೇ ಹಿಂದಿ ಭಾಷೆ ಹೇರಿಕೆಯ ಮಾತುಗಳನ್ನಾಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರುತ್ತಿಲ್ಲ. ಭಾಷೆಯ ವಿಚಾರದಲ್ಲಿ ಇವರು ದೇಶದಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯವಾಗಿ ಒಂದು ಭಾಷೆ ಒಂದು ದೇಶ ಎಂಬ ಹೇಳಿಕೆ ನೀಡುತ್ತಾರೆ. ಆದರೆ ಇವರು ಪ್ರಾದೇಶಿಕ ಭಾಷೆಗಳ ಕತ್ತು ಹಿಸುಕವ ಕೆಲಸ ಮಾಡುವ ಮೂಲಕ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಇದಕ್ಕೆ ಜೆಡಿಎಸ್​ ಅವಕಾಶ ಮಾಡಿಕೊಡುವುದಿಲ್ಲ. ಕೇಂದ್ರದ ನಾಯಕರ ಹಿಂದಿ ಹೇರಿಕೆ ಹಿಡನ್​ ಅಜೆಂಡಾ ವಿರುದ್ಧ ನಮ್ಮ ಪ್ರತಿಭಟನೆ ಎಂದಿಗೂ ಇರುತ್ತೆ ಎಂದು ಹೇಳಿದರು.

ಇದನ್ನು ಓದಿ : Hospital In JCB :ಸರಿಯಾದ ಸಮಯಕ್ಕೆ ಬಾರದ ಆ್ಯಂಬುಲೆನ್ಸ್​ : ಜೆಸಿಬಿಯಲ್ಲಿ ಗಾಯಾಳುವನ್ನು ಸಾಗಿಸಿದ ಗ್ರಾಮಸ್ಥರು, ವಿಡಿಯೋ ವೈರಲ್​

ಇದನ್ನೂ ಓದಿ : India Women Vs England Women: ಇಂಗ್ಲೆಂಡ್ ವನಿತೆಯರ ವಿರುದ್ಧ ಸ್ಮೃತಿ ಮಂಧನ ಅಬ್ಬರದ ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ

Protest by JDS leaders against Hindi Divas

Comments are closed.