ರಾಮನಗರ :hd kumaraswamy :ರಾಜ್ಯದಲ್ಲಿ ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಾಕಷ್ಟು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಸಿಐಡಿ ಖೆಡ್ಡಾಗೆ ಬೀಳುತ್ತಲೇ ಇದ್ದಾರೆ. ಈ ಎಲ್ಲದರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಪ್ರಕರಣ ಸಂಬಂಧ ಹೊಸ ಬಾಂಬ್ ಸಿಡಿಸಿದ್ದಾರೆ. ಪೊಲೀಸರೇ ಈ ಅಕ್ರಮವನ್ನು ಹೊರತಂದಿದ್ದಾರೆ. ಬಿಜೆಪಿ ನಾಯಕರು ಪೊಲೀಸ್ ಕಮಿಷನರ್ ಕಮಲ್ ಪಂತ್ ವಿರುದ್ಧ ಮಾತನಾಡಿದ ಪರಿಣಾಮವಾಗಿ ಈ ಹಗರಣ ಹೊರ ಬಂದಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ನಿಷ್ಠಾವಂತ ಪೊಲೀಸ್ ಅಧಿಕಾರಿ ಕಮಲ್ ಪಂತ್ ವಿರುದ್ಧ ಮಾತನಾಡಿದ್ದರು. ಚಂದ್ರು ಕೊಲೆ ಪ್ರಕರಣದಲ್ಲಿ ಕಮಲ್ ಪಂತ್ ಸುಳ್ಳು ಹೇಳುತ್ತಿದ್ದಾರೆ ಎಂಬುದು ಬಿಜೆಪಿಯ ಆರೋಪವಾಗಿತ್ತು. ಕಮಲ್ ಪಂತ್ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಟ್ಟುಕೊಂಡ ಅಧಿಕಾರಿಯಲ್ಲ. ಆದರೆ ಬಿಜೆಪಿಯ ಈ ಸುಳ್ಳು ಆರೋಪದಿಂದ ಕೆರಳಿದ ಕಮಲ್ ಪಂತ್ ಬೆಂಬಲಿತ ಅಧಿಕಾರಿಗಳು ಈ ಹಗರಣವನ್ನು ಹೊರ ತಂದಿದ್ದಾರೆ. ಇಲ್ಲವಾದಲ್ಲಿ ಬಿಜೆಪಿ ಸರ್ಕಾರವು ಈ ಹಗರಣವನ್ನು ಮುಚ್ಚಿ ಹಾಕುತ್ತಿತ್ತು ಎಂದು ಹೇಳಿದ್ದಾರೆ.
ಈ ಹಿಂದೆ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದವರೂ ಕೂಡ ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಒಂದು ಪಕ್ಷಕ್ಕೆ ನಿಷ್ಟಾವಂತರಾಗಿ ಇದ್ದವರನ್ನು ಆಯ್ಕೆ ಮಾಡಲು ಹುನ್ನಾರ ನಡೆದಿತ್ತು. ಹಿಂದೂ ಹಿಂದೂ ಎಂದ ಜಪ ಮಾಡುವವರೇ ಸೇರಿ ಈ ಅಕ್ರಮಕ್ಕೆ ಯತ್ನಿಸಿದ್ದರು. ಸಚಿವ ಅಶ್ವತ್ಥ ನಾರಾಯಣ ಬಗ್ಗೆಯಂತೂ ಬಿಜೆಪಿಯಲ್ಲಿ ಇದ್ದವರೇ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ರು.
ಇದನ್ನು ಓದಿ : Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ
ಇದನ್ನೂ ಓದಿ : Pooja Hegde : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ
psi scam revealed for bjp leaders speak against police commissioner kamal pant says hd kumaraswamy