Twitter : ಟ್ವಿಟರ್​ ಎಲ್ಲರಿಗೂ ಉಚಿತವಲ್ಲ: ಎಲಾನ್ ಮಸ್ಕ್​ ಮಹತ್ವದ ಸೂಚನೆ

Twitter  : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಟೆಸ್ಲಾ ಕಂಪನಿ ಸಿಇಓ ಎಲಾನ್​ ಮಾಸ್ಕ್​​ ಸಾಮಾಜಿಕ ಜಾಲತಾಣದ ಬಹುಮುಖ್ಯ ವೇದಿಕೆ ಟ್ವಿಟರ್ ಖರೀದಿ ಮಾಡಿರುವುದು ಎಲ್ಲರಿಗೂ ತಿಳಿದೇ ಇದೆ. ಎಲಾನ್​ ಮಸ್ಕ್​ ಟ್ವಿಟರ್ ವೇದಿಕೆಯನ್ನು ಖರೀದಿ ಮಾಡಿದ ಬಳಿಕ ಟ್ವಿಟರ್​ನಲ್ಲಿ ಬಹುತೇಕ ಬದಲಾವಣೆಗಳು ಆಗಲಿವೆ ಎಂಬುದನ್ನು ಬಹುತೇಕ ಎಲ್ಲರೂ ನಿರೀಕ್ಷಿಸಿದ್ದರು. ಅದರಂತೆ ಎಲಾನ್​ ಮಸ್ಕ್​ ಕೂಡ ಈ ವಿಚಾರವಾಗಿ ಅನೇಕ ಸುಳಿವುಗಳನ್ನೂ ನೀಡಿದ್ದರು. ಅದೇ ರೀತಿ ಇದೀಗ ಎಲಾನ್​ ಮಸ್ಕ್​ ಟ್ವಿಟರ್​​ ಖಾತೆಯ ನಿರ್ವಹಣೆಯು ಸಾಮಾನ್ಯ ಜನತೆಗೆ ಉಚಿತವಾಗಿಯೇ ಇರಲಿದೆ. ಆದರೆ ವಾಣಿಜ್ಯ ಬಳಕೆಗೆ ಹಾಗೂ ಸರ್ಕಾರದ ಬಳಕೆಗೆ ಕೊಂಚ ಹಣ ಪಾವತಿ ಮಾಡಬೇಕಾಗಬಹುದು ಎಂದು ಎಲಾನ್​ ಮಸ್ಕ್​ ಹೇಳಿದ್ದಾರೆ.


ಸಾಮಾಜಿಕ ಮಾಧ್ಯಮದ ಈ ವೇದಿಕೆಯು ಪ್ರಭಾವಿ ವರ್ಗಕ್ಕೆ ಸೇರಿದ್ದು ಎಂಬ ಅಭಿಪ್ರಾಯವನ್ನು ಹೋಗಲಾಡಿಸಿ ಟ್ವಿಟರ್​ ಎಲ್ಲರಿಗೂ ಸೇರಿದ ಮಾಧ್ಯಮವಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಎಲಾನ್​ ಮಸ್ಕ್​ ಈ ಹಿಂದೆ ಹೇಳಿದ್ದರು. ಅದರಂತೆ ಇದೀಗ ಟ್ವೀಟ್​ ಮಾಡಿರುವ ಎಲಾನ್​ ಮಾಸ್ಕ್​ ಸಾಮಾನ್ಯ ಜನತೆಗೆ ಟ್ವಿಟರ್​ ಉಚಿತ

ಸೇವೆ ನೀಡಲಿದೆ . ಆದರೆ ವಾಣಿಜ್ಯ ಹಾಗೂ ಸರ್ಕಾರದ ಬಳಕೆದಾರರು ಸ್ವಲ್ಪ ಶುಲ್ಕ ಪಾವತಿ ಮಾಡಬೇಕಾಗಿ ಬರಬಹುದು ಎಂದು ಹೇಳಿದ್ದಾರೆ.


ಇನ್ನು ಈ ವಿಚಾರವಾಗಿ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯು ಪ್ರತಿಕ್ರಿಯೆಗಾಗಿ ಟ್ವಿಟರ್​ನ್ನು ಸಂಪರ್ಕಿಸಿದರೂ ಸಹ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕಂಪನಿಯು ನಿರಾಕರಿಸಿದೆ ಎನ್ನಲಾಗಿದೆ.
ಟೆಸ್ಲಾ ಮಾಲೀಕ ಎಲಾನ್​ ಮಸ್ಕ್​ ಕಳೆದ ತಿಂಗಳಿನಿಂದ ಟ್ವಿಟರ್​ನಲ್ಲಿ ಅನೇಕ ಬದಲಾವಣೆಗಳ ಮುನ್ಸೂಚನೆಗಳನ್ನು ನೀಡುತ್ತಲೇ ಇದ್ದಾರೆ. ಇತ್ತೀಚಿಗೆ ಕಂಪನಿಯನ್ನು ಕೊಂಡುಕೊಂಡ ಬಳಿಕ ಮಸ್ಕ್​ ತನ್ನದೇ ಆದ ರೀತಿಯಲ್ಲಿ ಈ ಸಾಮಾಜಿಕ ಮಾಧ್ಯಮದ ವೇದಿಕೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಟ್ವಿಟರ್​ನ ಅಲ್ಗೊರಿದಂನ್ನು ಸಾರ್ವಜನಿಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ .ಹೊಸ ಫೀಚರ್​ಗಳನ್ನು ಬಳಕೆಗೆ ತರುವ ಮೂಲಕ ಸ್ಪ್ಯಾಮ್​ಗಳನ್ನು ತಡೆಯುವುದು ಹಾಗೂ ನಂಬಿಕೆಯನ್ನು ಗಳಿಸಿಕೊಳ್ಳುವುದು ನಮ್ಮ ಧ್ಯೇಯವಾಗಿದೆ ಎಂದು ಎಲಾನ್​ ಮಸ್ಕ್​ ಹೇಳುತ್ತಲೇ ಬಂದಿದ್ದಾರೆ.

ಇದನ್ನು ಓದಿ : Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ

ಇದನ್ನೂ ಓದಿ : Pooja Hegde : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ

“Maybe A Slight Cost For…”: Elon Musk On Whether Twitter Will Stay Free

Comments are closed.