ಸೋಮವಾರ, ಏಪ್ರಿಲ್ 28, 2025
HomepoliticsBJP-Congress : ಬಿಜೆಪಿ - ಕಾಂಗ್ರೆಸ್​ ನಡುವೆ ಜೋರಾಯ್ತು QR ಕೋಡ್ ಯುದ್ಧ

BJP-Congress : ಬಿಜೆಪಿ – ಕಾಂಗ್ರೆಸ್​ ನಡುವೆ ಜೋರಾಯ್ತು QR ಕೋಡ್ ಯುದ್ಧ

- Advertisement -

ಬೆಂಗಳೂರು : BJP-Congress : ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರು 40 ಪರ್ಸೆಂಟ್​ ಕಮಿಷನ್​ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣ ಸಂದರ್ಭದಲ್ಲಂತೂ ಈ ಆರೋಪ ಬಿಜೆಪಿ ಸರ್ಕಾರದ ವಿರುದ್ಧ ಹೆಚ್ಚಾಗಿ ಕೇಳಿ ಬಂದಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರಿದಿರುವ ಕಾಂಗ್ರೆಸ್​ ಸರ್ಕಾರವು ಪೇಟಿಎಂ ಕ್ಯೂ ಆರ್​ ಕೋಡ್ (QR code war )​ ಮಾದರಿಯಲ್ಲಿ ನಗರದ ಹಲವೆಡೆಗಳಲ್ಲಿ ಪೇ ಸಿಎಂ ಎಂದು ಬರೆಯಲಾದ ಪೋಸ್ಟರ್​ನ್ನು ಎಲ್ಲೆಡೆ ಅಂಟಿಸುವ ಕಾರ್ಯವನ್ನು ಮಾಡಿದೆ.

ಕಾಂಗ್ರೆಸ್​ನಿಂದ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಆರೋಪ ಎದುರಾಗಿರುವ ಬೆನ್ನಲ್ಲೇ ಇದೀಗ ಬಿಜೆಪಿ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಕಾಂಗ್ರೆಸ್​ ನಾಯಕರನ್ನು ವರ್ಚಸ್ಸನ್ನು ಕಡಿಮೆ ಮಾಡುವಂತಹ ಕೌಂಟರ್​ಗಳನ್ನು ನೀಡುತ್ತಿದೆ. ಡಿ,ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯರನ್ನು ರಾಜ್ಯವನ್ನು ಹಾಳುಗೆಡವುವ ಭ್ರಷ್ಟ ಜೋಡಿ ಎಂದು ಬಿಜೆಪಿ ಬಣ್ಣಿಸಿದೆ. ರಾಜ್ಯವನ್ನು ಯಾವ ರೀತಿ ಹಾಳು ಮಾಡಬೇಕು ಹಾಗೂ ಅಶಾಂತಿಯನ್ನು ಹೇಗೆ ಕದಡಬೇಕು ಎಂದು ರಿಡೊ ಸಿದ್ದರಾಮಯ್ಯ ಹಾಗೂ ಇಡಿ ಡಿಕೆಶಿ ಗಹನ ಚರ್ಚೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಣುಕು ಮಾಡಿದೆ.

ಇನ್ನು ಕಾಂಗ್ರೆಸ್​ನ ಈ ಅಭಿಯಾನದ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್​, ನಮ್ಮ ರಾಜ್ಯದಲ್ಲಿರುವುದು 40 ಪರ್ಸೆಂಟ್​ ಕಮಿಷನ್​ ಸರ್ಕಾರ ಎನ್ನುವುದು ಎಲ್ಲರಿಗೂ ತಿಳಿದಿದೆ. ಬೇರೆ ರಾಜ್ಯಗಳಲ್ಲಿಯೂ ನಮ್ಮ ರಾಜ್ಯದ ಸರ್ಕಾರವನ್ನು 40 ಪರ್ಸೆಂಟ್​ ಕಮಿಷನ್​ ಸರ್ಕಾರ ಅಂತಲೇ ಕರೆಯುತ್ತಾರೆ. ಇಡೀ ರಾಷ್ಟ್ರದಲ್ಲಿಯೇ ಇಷ್ಟು ಭ್ರಷ್ಟಾಚಾರವನ್ನು ಎಸಗುತ್ತಿರುವ ಮತ್ತೊಂದು ಸರ್ಕಾರ ನಿಮಗೆ ಸಿಗಲಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್​ ನಡೆಸುತ್ತಿರುವ ಈ ಅಭಿಯಾನವು ಜನ ಪ್ರೇರಿತವಾಗಿದೆ. ಕಾಂಗ್ರೆಸ್​ ಎಂದಿಗೂ ಜನ ಪರವಾದ ಕಾರ್ಯವನ್ನೇ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : PAYCM ಅಭಿಯಾನ ; ಕಾಂಗ್ರೆಸ್ ನಿಂದ PAYTM ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘನೆ ?

ಇದನ್ನು ಓದಿ : SIIMA Award 2022:ಸೈಮಾ ಪಾರ್ಟಿ ವಿರುದ್ದ ದೂರು : ವೈರಲ್‌ ಆಯ್ತು ಸೆಲೆಬ್ರಿಟಿಗಳ ಮೋಜು ಮಸ್ತಿ

ಇದನ್ನೂ ಓದಿ : CM Basavaraj Bommai :ಮಾಜಿ ಪ್ರಧಾನಿ ದೇವೇಗೌಡ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

QR code war raging between BJP-Congress

RELATED ARTICLES

Most Popular