wife killed her husband :ಪತಿಯನ್ನು ಕೊಂದು ಅಪಘಾತದ ಕತೆ ಕಟ್ಟಿದ್ದ ಐನಾತಿ ಪತ್ನಿ ಅಂದರ್​​

ಬೆಳಗಾವಿ : wife killed her husband : ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ ಘಟನೆಯು ಬೆಳಗಾವಿಯ ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರು ಪೂಲ್​ ಬಳಿಯಲ್ಲಿ ಪಾಂಡಪ್ಪ ಜಟಕನ್ನವರ್​​ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಟಕೋಳ ಠಾಣಾ ಪೊಲೀಸರು ಇದೀಗ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಂಡಪ್ಪ ಜಟಕನ್ನವರ್​ ಪತ್ನಿ ಲಕ್ಷ್ಮೀ ತನ್ನ ಪ್ರಿಯಕರ ರಮೇಶ್​ ಬಡಿಗೇರ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದಳು, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ಇಬ್ಬರೂ ಸೇರಿ ಪ್ಲಾನ್​ ಮಾಡಿದ್ದಾರೆ. ಅದರಂತೆ ಪ್ರಿಯಕರ ರಮೇಶ್​ ಬಡಿಗೇರ್​ ಜೊತೆ ಸೇರಿದ ಪತ್ನಿ ಲಕ್ಷ್ಮೀ ಕೃಷಿ ಉಪಕರಣವನ್ನು ಬಳಸಿ ಪಾಂಡಪ್ಪನನ್ನು ಕೊಲೆ ಮಾಡಿದ್ದಾರೆ.


ಬಳಿಕ ಪಾಂಡಪ್ಪ ಶವವನ್ನು ಬೈಕ್ ಮೇಲೆ ಹೊತ್ತೊಯ್ದ ಲಕ್ಷ್ಮೀ ಹಾಗೂ ರಮೇಶ್​ ಹೊಸೂರು ಪೂಲ್​ ಬಳಿಯಲ್ಲಿ ಶವವನ್ನು ಬಿಸಾಡಿದ್ದರು. ಬಳಿಕ ಹಗ್ಗದ ಸಹಾಯದಿಂದ ಕಿರುಸೇತುವೆ ಬಳಿಯಲ್ಲಿ ಬೈಕ್​ನ್ನು ಬಿಸಾಡಿದ್ದರು. ಇದನ್ನು ಒಂದು ಅಪಘಾತದ ರೀತಿಯಲ್ಲಿ ಬಿಂಬಿಸಬೇಕು ಎನ್ನವುದು ರಮೇಶ್​ ಹಾಗೂ ಲಕ್ಷ್ಮೀಯ ಪ್ಲಾನ್​ ಆಗಿತ್ತು. ತಾನೇ ಪತಿಯನ್ನು ಕೊಂದಿದ್ದರೂ ಸಹ ಪತ್ನಿ ಲಕ್ಷ್ಮೀ ಪೊಲೀಸರ ಎದುರು ತನಗೇನು ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದಳು.
ಮಾರನೇ ದಿನ ತನ್ನ ಪತಿ ಕಾಣೆಯಾಗಿದ್ದಾನೆ ಎಂದು ಲಕ್ಷ್ಮೀ ನಾಟಕವಾಡಿದ್ದಳು. ಆದರೆ ಪತ್ನಿ ಲಕ್ಷ್ಮೀಯ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ಈಕೆಯನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ರಮೇಶ್​ ಬಡಿಗೇರ (36) ಹಾಗೂ ಲಕ್ಷ್ಮೀ ಜಟಕನ್ನವರ್​ರನ್ನ ಬಂಧಿಸಲಾಗಿದೆ.


ಹೊಸೂರು ಗ್ರಾಮದವನೇ ಆಗಿದ್ದ ರಮೇಶ್​ ಬಡಿಗೇರ ಲಕ್ಷ್ಮೀ ಜಟಕನ್ನವರ್​ ಜೊತೆಯಲ್ಲಿ ಅತಿಯಾದ ಸಲುಗೆಯನ್ನು ಹೊಂದಿದ್ದ. ಲಕ್ಷ್ಮೀ ವರ್ತನೆಯು ಪತಿ ಪಾಂಡಪ್ಪ ಕೋಪಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಮೊನ್ನೆ ರಾತ್ರಿ ಕೂಡ ಇದೇ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ್ದ ಲಕ್ಷ್ಮೀ ಈ ಬಗ್ಗೆ ರಮೇಶ್​ ಬಳಿ ಹೇಳಿಕೊಂಡಿದ್ದಳು. ಇದಾದ ಬಳಿಕ ರಮೇಶ್​ ಬಡಿಗೇರ ಹಾಗೂ ಪಾಂಡಪ್ಪ ನಡುವೆ ದೊಡ್ಡ ಜಗಳ ಏರ್ಪಟ್ಟಿದೆ.


ರಮೇಶ್​ ಹಾಗೂ ಪಾಂಡಪ್ಪ ಪರಸ್ಪರ ಜಗಳವಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ಲಕ್ಷ್ಮಿಯು ಪತಿಯ ತಲೆಗೆ ಕೃಷಿ ಉಪಕರಣದಿಂದ ಹೊಡೆದಿದ್ದಳು. ತೀವ್ರ ರಕ್ತಸ್ರಾವದಿಂದಾಗಿ ಪಾಂಡಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಇದಾದ ಬಳಿಕ ಬೈಕ್​ನಲ್ಲಿ ಪಾಂಡಪ್ಪನ ಶವವನ್ನು ಇಬ್ಬರೂ ಸೇರಿ ಹೊತ್ತೊಯ್ದು ಕಾಲುವೆಯಲ್ಲಿ ಪಾಂಡಪ್ಪನ ಶವ ಹಾಗೂ ಬೈಕ್​ ಎರಡನ್ನೂ ಎಸೆಯುವ ಮೂಲಕ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು.

ಇದನ್ನು ಓದಿ : CM Basavaraj Bommai :ಮಾಜಿ ಪ್ರಧಾನಿ ದೇವೇಗೌಡ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಇದನ್ನೂ ಓದಿ : BJP-Congress :ಬಿಜೆಪಿ – ಕಾಂಗ್ರೆಸ್​ ನಡುವೆ ಜೋರಾಯ್ತು QR ಕೋಡ್ ಯುದ್ಧ

Arrest of wife killed her husband

Comments are closed.