ಸೋಮವಾರ, ಏಪ್ರಿಲ್ 28, 2025
HomekarnatakaRajya Sabha Election : ಮೂರನೇ ಅಭ್ಯರ್ಥಿ ಗೆಲ್ಲಿಸಲು ಬಿಜೆಪಿ ರಣತಂತ್ರ : ಈ ಬಾರಿಯೂ...

Rajya Sabha Election : ಮೂರನೇ ಅಭ್ಯರ್ಥಿ ಗೆಲ್ಲಿಸಲು ಬಿಜೆಪಿ ರಣತಂತ್ರ : ಈ ಬಾರಿಯೂ ನಡೆಯುತ್ತಾ ಆಪರೇಶನ್ ಕಮಲ

- Advertisement -

ಬೆಂಗಳೂರು : ಸದ್ಯ ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ (Rajya Sabha Election) ಸದ್ದು ಮಾಡಲಾರಂಭಿಸಿದೆ. ಬಿಜೆಪಿ ರಾಜ್ಯಸಭೆ ಗೆ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೇ, ಕಾಂಗ್ರೆಸ್ ಎರಡು ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದೆ. ಇನ್ನು ಮತಗಳ ಕೊರತೆ ಎದುರಾಗೋದು ಖಚಿತವಾದರೂ ಓರ್ವ ಅಭ್ಯರ್ಥಿಯನ್ನು ಅದೃಷ್ಟ ಪರೀಕ್ಷೆಗೆ ಒಡ್ಡಿದೆ. ಈ ಮಧ್ಯೆ ರಾಜ್ಯದಿಂದ ರಾಜ್ಯಸಭೆಗೆ ಬಿಜೆಪಿ ಮೂವರು ಸದಸ್ಯರನ್ನು ಆಯ್ಕೆಮಾಡಲು ಮುಂದಾಗಿರೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಬಿಜೆಪಿ ತನ್ನ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿ ವಿಭಿನ್ನ ಲೆಕ್ಕಾಚಾರ ನಡೆಸಿದೆ ಎನ್ನಲಾಗ್ತಿದೆ.

ಬಿಜೆಪಿಯು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಯಾವ ಪ್ಲ್ಯಾನ್ ಮಾಡಿದೆ ಅನ್ನೋದನ್ನು ಗಮನಿಸೋದಾದರೇ, ವಿಭಿನ್ನವಾದ ಲೆಕ್ಕಾಚಾರವೊಂದನ್ನು ಬಿಜೆಪಿ ಮಾಡಿದೆ. ಬಿಜೆಪಿ ಮೂವರು ಆಭ್ಯರ್ಥಿಗಳು ರಾಜ್ಯಸಭಾ ಚುನಾವಣೆಯ ಕಣದಲ್ಲಿದ್ದಾರೆ. ಸದ್ಯ ಬಿಜೆಪಿಯಲ್ಲಿರೋದು 122 ಮತಗಳು. ಈ ಪೈಕಿ ಒಬ್ಬ ರಾಜ್ಯಸಭಾ ಅಭ್ಯರ್ಥಿ ಗೆಲ್ಲಿಸಲು 45 ಮತಗಳು ಬೇಕು. ಆದರೆ ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗಲೇ ಬೇಕಾಗಿರೋ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಆಯ್ಕೆಗೆ ಅಗತ್ಯ ಮತಗಳಿಗಿಂತ ಒಂದು ಮತ ಹೆಚ್ಚುವರಿಯಾಗಿ ಹಾಕಿಸಲು ಸಿದ್ದತೆ ನಡೆದಿದೆ.

ಈ ಲೆಕ್ಕಾಚಾರದ ಪ್ರಕಾರ ಒಂದು‌ ಅಭ್ಯರ್ಥಿಗೆ‌ ಅಂದರೆ ನಿರ್ಮಲಾ ಸೀತರಾಮನ್ ಗೆ ಬಿಜೆಪಿ ನಾಯಕರು 46 ಮತ ಹಾಕಿಸ್ತಾರೆ. ಇನ್ನೂ ಉಳಿಯೋದು‌ 76 ಮತಗಳು. ಈ ಮತಗಳನ್ನು ಉಳಿದ ಇಬ್ಬರೂ ಅಭ್ಯರ್ಥಿಗಳಾದ ಲೆಹರ್ ಸಿಂಗ್ ಮತ್ತು ಜಗ್ಗೇಶ್ ಗೆ ಹಂಚಿಕೆ ಮಾಡೋದು. ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಗೆ ಮತಗಳ ಹಂಚಿಕೆಯನ್ನು ಗಮನಿಸೋದಾದರೇ ಇಬ್ಬರಿಗೂ 38-38 ಮತಗಳು ಹಂಚಿಕೆಯಾಗುತ್ತೆ.

ಇನ್ನೂ ಎರಡನೇ ಪ್ರಾಶಸ್ತ್ಯ ದಲ್ಲಿ 12 ಮತಗಳು‌ ಬರಲಿವೆ. ಈ ಮತಗಳನ್ನು ಇಬ್ಬರಿಗೆ 6-6 ಹಂಚಿಕೆ ಮಾಡಿದ್ರೆ. ಒಟ್ಟು 44+44 ಮತಗಳು ಇಬ್ಬರಿಗೂ ಬರುತ್ತೆ. ಇನ್ನೂ ಇಬ್ಬರಿಗೂ 1-1 ಮತಗಳು ಬೇಕಾಗುತ್ತೆ. ಇದೀಗ ಆ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ನಡೆಸಿದೆ. ಅಗತ್ಯವಿರೋ ಎರಡು ಮತಕ್ಕಾಗಿ ಬಿಜೆಪಿ ಅನ್ಯಪಕ್ಷದ ಶಾಸಕರ ಸೆಳೆಯಲು ಸ್ಟಾಟಜಿ ರೂಪಿಸಲು ಆರಂಭಿಸಿದೆ. ಮುಖ್ಯವಾಗಿ ಬಿಜೆಪಿ ಬೇಕಾಗಿರೋ ಎರಡು ಮತಕ್ಕಾಗಿ ಜೆಡಿಎಸ್ ಬುಟ್ಟಿಗೆ ಕೈ ಹಾಕಿರುವ‌ ಬಿಜೆಪಿ ನಾಯಕರು ಎರಡು ಶಾಸಕರನ್ನು ತಮ್ಮ ಪರವಾಗಿ ಮತದಾನ ಮಾಡುವಂತೆ ಮನವೊಲಿಸಲಿದ್ದಾರಂತೆ.

ರಾಜ್ಯಸಭಾ ಚುನಾವಣೆಯಲ್ಲಿ ನಾವು ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸುವ ಉದ್ದೇಶದಿಂದಲೇ ನಿಲ್ಲಿಸಿದ್ದೇವೆ.‌ ಗೆಲ್ಲಿಸಿಕೊಳ್ಳುತ್ತೇವೆ ಎಂದು ಈಗಾಗಲೇ ಆರ್.ಅಶೋಕ್ ಹೇಳಿದ್ದು ಆ ಮೂಲಕ ಬಿಜೆಪಿ ತಮಗೆ ಓಟ ಮಾಡಲು ಇಬ್ಬರನ್ನೂ ಈಗಾಗಲೇ ಹುಡುಕಿಕೊಂಡಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : Dalit cm in Karnataka : ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಲ್ಲಾ : ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮುಂದಿನ ಸಿಎಂ

ಇದನ್ನೂ ಓದಿ : krishna pandey : 6 ಎಸೆತ 6 ಸಿಕ್ಸ್‌ : 15 ವರ್ಷದ ಕ್ರಿಕೆಟಿಗn ವಿಶಿಷ್ಟ ಸಾಧನೆ : ಯುವರಾಜ್‌ ಸಿಂಗ್‌ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ

Rajya Sabha Election BJP Master Plan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular