ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಜನರು ಸಾಯುತ್ತಿದ್ದರು ಸಾಯುತ್ತಿದ್ದಾರೆಂದು ಹೇಳಬಾರದು. ಜನರ ಹಸಿವಿನಿಂದ ಬಳಲುತ್ತಿದ್ದರು ಹಸಿವಿನಲ್ಲಿ ಇದ್ದಾರೆ ಎಂದು ಹೇಳಬಾರದೆಂಬ ಮನಸ್ಥಿತಿ ಬಿಜೆಪಿ ಸರಕಾರವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರಕಾರದ ವಿರುದ್ದ ಟ್ವೀಟರ್ ಮೂಲಕ ಗುಡುಗಿದ್ದಾರೆ. ಸರಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಈ ಮನಸ್ಥಿತಿ ಬಿಟ್ಟು ಹೊರಬರಬೇಕು. ರಾಜಕೀಯ ಬಿಟ್ಟು ಮಾನವೀಯ ದೃಷ್ಟಿಯಿಂದ ಯೋಚಿಸಬೇಕಾದ ಸಂದರ್ಭದಲ್ಲಿ ನಾವಿದ್ದೇವೆ ಎಂದು ಕಿವಿ ಹಿಂಡಿದ್ದಾರೆ.
ನಾವು ರಾಜಕೀಯ ಮಾಡುತ್ತಿಲ್ಲ ಆದರೆ ಜನರ ಅಭಿಪ್ರಾಯಗಳನ್ನು ನೋವುಗಳನ್ನು ತಿಳಿಸಬೇಕಾಗುತ್ತದೆ. ಆದರೆ ಕೆಲವು ಬಿಜೆಪಿ ನಾಯಕ ರುಗಳು ಇದನ್ನೇ ತಪ್ಪು ಎಂದು ಬಿಂಬಿಸುತ್ತಿರುವುದು ಅವರ ಮನಸ್ಥಿತಿ ಏನು ಎಂಬುದನ್ನು ಇದು ತೋರಿಸುತ್ತದೆ ಎಂದು ರೈ ಬಿಜೆಪಿ ನಾಯಕ ರುಗಳ ವಿರುದ್ಧ ಹರಿಹಾಯ್ದಿದ್ದಾರೆ.
