ಕೊರೋನಾ ಮೂರನೇ ಅಲೆ ತಡೆಯಲು ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ?!

ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ವಿಸ್ತರಣೆಯಾಗುವ ಲಕ್ಷಣವಿದ್ದು, ಕೊರೋನಾ ಸೋಂಕಿನ ಚೈನ್ ಲಿಂಕ್ ತಪ್ಪಿಸಲು 6 ರಿಂದ 12 ವಾರಗಳ ಲಾಕ್ ಡೌನ್ ಸೂಕ್ತ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ ಏರಿಕೆಯಾಗುತ್ತಿದ್ದು, ಮಹಾರಾಷ್ಟ್ರವನ್ನು ಮೀರಿಸುವಷ್ಟು ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ.

ಬಿಹಾರ್, ಗೋವಾ,ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಮಾಡಿದ್ದು, ಕರ್ನಾಟಕದಲ್ಲಿ ಇನ್ನೂ ಒಂದು ವಾರಗಳ ಕಾಲ ಸೆಮಿಲಾಕ್ ಡೌನ್ ಜಾರಿಯಲ್ಲಿದೆ.

ಈ ಮಧ್ಯೆ ಆಯ್ ಸಿ ಎಂ ಆರ್ ಕೂಡ ದೇಶದಲ್ಲಿ 6-8ವಾರಗಳ ಲಾಕ್ ಡೌನ್ ಮಾಡುವುದು ಉತ್ತಮ ಎಂದು ಅಭಿಪ್ರಾಯಿಸಿದೆ. ಮೆಡಿಕಲ್ ರಿಸರ್ಚ್ ಡೈರೈಕ್ಟ್ ಜನರಲ್ ಡಾ. ಬಲರಾಮ್ ಭಾರ್ಗವ್ ನೇರವಾಗಿ ಮೋದಿ ಸರ್ಕಾರವನ್ನು ಟೀಕಿಸಿಲ್ಲ.ಆದರೆ ದೇಶದ ಹಿತ ದೃಷ್ಟಿಯಿಂದ ಸರ್ಕಾರದ ಈಗಿನ ನಿರ್ಧಾರ ಸರಿಯಲ್ಲ. 4-8 ವಾರಗಳ ಲಾಕ್ ಡೌನ್ ಅಗತ್ಯ ಎಂದಿದ್ದಾರೆ.

https://kannada.newsnext.live/sandalwood-workers-helphand-upendra-grocerykit-vegetables-help-formers/

ಆದರೆ ಪರಿಸ್ಥಿತಿ ನಿಯಂತ್ರಣದ ದೃಷ್ಟಿಯಿಂದ  ಲಾಕ್ ಡೌನ್ ಸೂಕ್ತ ಎಂದಿದ್ದಾರೆ. ರಾಜ್ಯಗಳಲ್ಲಿ  ಈಗಾಗಲೇ ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷ ಮೀರಿದ್ದು, ಔಷಧಗಳ ಕೊರತೆ ಕೂಡ ಇನ್ನಷ್ಟು ಪ್ರಕರಣಗಳನ್ನು ಹೆಚ್ಚಿಸುವಲ್ಲಿ ಕಾರಣವಾಗುತ್ತಿದೆ.

https://kannada.newsnext.live/india-corona-covid-19-upsc-exam-postponed-upsc-exam/

ಏಪ್ರಿಲ್ 22 ರಿಂದ ದೇಶದಲ್ಲಿ ಪ್ರತಿನಿತ್ಯ 3 ಲಕ್ಷ ಕ್ಕೂ ಅಧಿಕ  ಪ್ರಕರಣಗಳು ದಾಖಲಾಗುತ್ತಿದ್ದು, ಮೇದಲ್ಲಿ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕೇರಿದೆ.

https://kannada.newsnext.live/sslc-exams-postpone-karnataka-minister-sureshkumar/

ಹೀಗಾಗಿ ರಾಜ್ಯಗಳಲ್ಲಿ ಕೊರೋನಾ ಸಂಖ್ಯೆಯ ದೃಷ್ಟಿಯಿಂದಲೂ ದೇಶದಲ್ಲಿ ಲಾಕ್ ಡೌನ್ ಸೂಕ್ತ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಕೂಡ  ಈ ಬಗ್ಗೆ ತಜ್ಞರ ವರದಿ ಕೇಳಿದ್ದು ಹೀಗಾಗಿ ದೇಶದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಜಾರಿಯಾಗೋ ಸಾಧ್ಯತೆ ಇದೆ.

Comments are closed.