ಮಂಗಳವಾರ, ಏಪ್ರಿಲ್ 29, 2025
HomeBreakingCD Case Twist : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಟ್ವಿಸ್ಟ್…..! ಪ್ರಕರಣ ದಿಕ್ಕು...

CD Case Twist : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಟ್ವಿಸ್ಟ್…..! ಪ್ರಕರಣ ದಿಕ್ಕು ಬದಲಿಸಬಲ್ಲ ಘಟನೆಗೆ ಮೂಲವಾದ ನರೇಶ್ ಗೌಡ…!!

- Advertisement -

ತುಮಕೂರು: ರಾಜ್ಯ ರಾಜಕಾರಣದ ದಿಕ್ಕು ಬದಲಾಯಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ರಾಜಕೀಯ ಬದುಕನ್ನೇ ಬದಲಾಯಿಸಿತು ಸಿಡಿ ಪ್ರಕರಣ. ಆದರೆ ಆರಂಭದಿಂದಲೂ ಈ ಪ್ರಕರಣದಲ್ಲಿ ರಾಜಕೀಯ ಕೈವಾಡ ಆರೋಪ ಬಂದಿತ್ತು. ಈಗ ಅದಕ್ಕೆ ಸಾಕ್ಷಿ ಸಿಕ್ಕಂತಾಗಿದೆ.

ಪ್ರಕರಣದ ಪ್ರಮುಖ ಆರೋಪಿ ನರೇಶ್ ಗೌಡ ಸಂಪೂರ್ಣ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಸಿಡಿ ಪ್ರಕರಣ ಹೊರಬಂದ ಬಳಿಕ ಅರೋಪ ನರೇಶ್ ಗೌಡ ಮೇಲೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನರೇಶ್ ಗೌಡ ನಾಪತ್ತೆಯಾಗಿದ್ದರು. ಅಜ್ಞಾತ ಸ್ಥಳದಿಂದಲೇ ಜಾಮೀನಿಗಾಗಿ ಸರ್ಕಸ್ ನಡೆಸಿದ ನರೇಶ್ ಜಾಮೀನು ಪಡೆದುಕೊಂಡು ಹೊರಬಂದು ಕುಟುಂಬದ ಜೊತೆ ಸಮಯ ಕಳೆಯಲಾರಂಭಿಸಿದ್ದರು.

ಈ ಎಲ್ಲ ಬೆಳವಣಿಗೆ ಹಿಂದೆ ನರೇಶ್ ಗೌಡಗೆ ಬಲ ತುಂಬುವ ಕಾಣದ ಕೈಗಳಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸುತ್ತ ಬಂದಿದ್ದರು. ಆದರೆ ಈ ಆರೋಪಕ್ಕೆ ಬಲ ಬಂದಿರಲಿಲ್ಲ. ಆದರೆ ಈಗ ನರೇಶ್ ಗೌಡ ಸ್ವತಃ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದಾರೆ.

ಇದನ್ನೂ ಓದಿ : ಯಾರಿಗೂ ಹೇಳ್ಬೇಡಿ ಹೊಸ ಟೀಂ ಮಾಡ್ತೇವೆ : 3 ಜನರಲ್ಲಿ ಒಬ್ಬರು ಸಿಎಂ : ಕಟೀಲ್‌ ಆಡಿಯೋ ವೈರಲ್‌

ಪ್ರಕರಣ ಬೆಳಕಿಗೆ ಬಂದಾಗಿನಿಂದ ನಾಪತ್ತೆಯಾಗಿದ್ದ ನರೇಶ್ ಗೌಡ ದಿಢೀರ ತಮ್ಮ ಸ್ವಂತ ಊರಾದ ತುಮಕೂರಿನ ಭುವನಹಳ್ಳಿಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ನರೇಶ್ ಗೌಡ ಸ್ವಾಗತ ಕ್ಕೆ ಭುವನಹಳ್ಳಿ ಗ್ರಾಮಸ್ಥರೇ ಹಾಜರಾಗಿದ್ದು ಹಾರತುರಾಯಿ ಹಾಕಿ ಯುವ ಕಾಂಗ್ರೆಸ್‌ ಮುಖಂಡ ಎಂಬ ಘೋಷಣೆಯೊಂದಿಗೆ ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ.

ಮಾತ್ರವಲ್ಲ ಊರಿನ ತುಂಬ ನರೇಶ್ ಗೌಡ ಪ್ಲೆಕ್ಸ್ ಹಾಕಿ ಸ್ವಾಗತಿಸಲಾಗಿದೆ. ಈ ಪ್ಲೆಕ್ಸ್ ಗಳಲ್ಲಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪೋಟೋಗಳು ರಾರಾಜಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳು ರಮೇಶ್ ಜಾರಕಿಹೊಳಿ ಪ್ರಕರಣದ ಹಿನ್ನೆಲೆಯ ಶಕ್ತಿ ಯಾವುದು ಎಂಬುದಕ್ಕೆ ಬೆಳಕಿನಂತ ಸಾಕ್ಷಿ ಒದಗಿಸಿದೆ.

ಇದನ್ನೂ ಓದಿ : ಮಗ ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವ…! ಹೆತ್ತವರು ಕೃಷಿಕೂಲಿ ಕಾರ್ಮಿಕರು…!!

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಗೌಡಗೆ ಸಿಕ್ಕ ಅದ್ದೂರಿ ಸ್ವಾಗತ ಈ ಸಂಪೂರ್ಣ ಪ್ರಕರಣದ ಹಿಂದೆ ಇರುವ ಕೈಗಳ್ಯಾವುದು ಎಂಬುದನ್ನು ರಾಜ್ಯದ ಜನತೆಗೆ ತೋರಿದ್ದು. ಈ ಬೆಳವಣಿಗೆ ಪ್ರಕರಣದ ತನಿಖೆ,ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯ ಸೇರಿದಂತೆ ಸಂಪೂರ್ಣ ಪ್ರಕರಣದ ಮೇಲೆ ಅಚ್ಚರಿಯ ಪರಿಣಾಮ ಬೀರಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular