ಸರ್ಕಾರ ಒಪ್ಪಿದ್ರೂ ಬಾಗಿಲು ತೆರೆಯೋಕೆ ಥಿಯೇಟರ್ ಮಾಲೀಕರಿಗೆ ಮನಸ್ಸಿಲ್ಲ…! ಕಾರಣ ಏನು ಗೊತ್ತಾ…?!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಅನ್ ಲಾಕ್ 4.0 ಅಡಿಯಲ್ಲಿ ಥಿಯೇಟರ್ ಗಳ ಬಾಗಿಲು ತೆರೆಯಲು ರಾಜ್ಯ ಸರ್ಕಾರ ಅನುಮತಿ‌ ನೀಡಿದೆ. ಆದರೆ ಸಿಎಂ ಅನುಮತಿ ಕೊಟ್ರು ಥಿಯೇಟರ್ ಗಳ ಮಾಲೀಕರು ಮಾತ್ರ ಸದ್ಯ ಸಿನಿಮಾ ಹಾಲ್‌ ಬಾಗಿಲು ತೆರೆದು ಫಿಲ್ಮ್ ತೋರಿಸೋಕೆ ಸಿದ್ಧವಿಲ್ಲ.

ಕಳೆದ‌ ಮೂರು ತಿಂಗಳಿನಿಂದ ರಾಜ್ಯದಲ್ಲಿ ಕೊರೋನಾದಿಂದ ಥಿಯೇಟರ್ ಗಳು ಬಾಗಿಲ ತೆರೆದಿಲ್ಲ. ಈಗ ಕೊರೋನಾ ಎರಡನೆ ಅಲೆ ಪ್ರಭಾವ ತಗ್ಗಿರುವ ಹಿನ್ನೆಲೆಯಲ್ಲಿ ಥಿಯೇಟರ್ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಇದನ್ನೂ ಓದಿ : ಹಾಟ್ ಪೋಟೋಸ್ ಮೂಲಕ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ ಮಾದಕ ಬೆಡಗಿ ತಾನ್ಯಾ ಹೋಪ್..!!

ಕೇವಲ 50 ರಷ್ಟು ಪ್ರೇಕ್ಷಕರ ಜೊತೆ ಥಿಯೇಟರ್ ಬಾಗಿಲು ತೆರೆಯಲು ಸರ್ಕಾರ ಅನುಮತಿ‌ ನೀಡಿದ್ದರೂ ರಾಜ್ಯದಲ್ಲಿ ಸದ್ಯ ಥಿಯೇಟರ್ ಬಾಗಿಲು ತೆರೆಯೋದು ಅನುಮಾನ. ಯಾಕೆಂದ್ರೆ ದಿಢೀರ್ ಥಿಯೇಟರ್ ಬಾಗಿಲು ತೆರೆಯಲು ಸಾಧ್ಯವಿಲ್ಲ. ಇದಕ್ಕೂ ಮುನ್ನ ಥಿಯೇಟರ್ ಗಳಿಗೆ ಸ್ಯಾನಿಟೈಶೆನ್ ಮಾಡಬೇಕು. ಅಲ್ದೇ ಸೀಟ್ ಗಳನ್ನು ಸ್ವಚ್ಛಗೊಳಿಸಬೇಕು. ಹೀಗಾಗಿ ತಕ್ಷಣ ಸಿನಿಮಾ ಪ್ರದರ್ಶನ ಸಾಧ್ಯವಿಲ್ಲ. ಅಷ್ಟೇ ಅಲ್ಲ ಸಿನಿಮಾ ಹಾಲ್ ನಲ್ಲಿ ಕೇವಲ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿರೋದರಿಂದ ಯಾವುದೇ ಬಿಗ್ ಬಜೆಟ್ ಸಿನಿಮಾಗಳು ಸದ್ಯ ರಿಲೀಸ್ ಗೆ ಸಿದ್ದವಿಲ್ಲ.

ಯಾವುದೇ ಸಿನಿಮಾ ರಿಲೀಸ್ ಡೇಟ್ ಗಳು ಅನೌನ್ಸ್ ಆಗಿಲ್ಲ. ಕೊರೋನಾ ಭಯದ ಹಿನ್ನೆಲೆಯಲ್ಲಿ ಯಾವ ನಿರ್ದೇಶಕ,ನಿರ್ಮಾಪಕರು ಸಿನಿಮಾ ರಿಲೀಸ್ ಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಥಿಯೇಟರ್ ಬಾಗಿಲು ತೆರೆದರೂ ಸಿನಿಮಾ ರಿಲೀಸ್ ಅಗದೇ ಏನು ಪ್ರಯೋಜನವಿಲ್ಲ ಎಂಬ ಸ್ಥಿತಿ ಇದೆ.

ಇದನ್ನೂ ಓದಿ : Karnataka Unlock 4.0: ಪದವಿ ಕಾಲೇಜು, ಸಿನಿಮಾ ಥಿಯೇಟರ್‌ ತೆರೆಯಲು ಗ್ರೀನ್‌ ಸಿಗ್ನಲ್‌

ಹೀಗಾಗಿ ಸಧ್ಯದಲ್ಲೇ ಥಿಯೇಟರ್ ಮಾಲಿಕರ ಸಂಘ ಸಿಎಂ ಭೇಟಿ ಮಾಡಲಿದ್ದು ನೂರಕ್ಕೆ ನೂರರಷ್ಟು ಆಸನಗಳನ್ನು ಭರ್ತಿ ಮಾಡಿ ಸಿನಿಮಾ ತೋರಿಸಲು ಅವಕಾಶ ಕೋರಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ದೇವರು ಕೊಟ್ರು ಪೂಜಾರಿ ಕೊಡಲ್ಲ ಅನ್ನೋ ಹಾಗೇ ಸರ್ಕಾರ ಅನುಮತಿ ಕೊಟ್ರು ಸಿನಿಮಾ ನೋಡುವ ಪ್ರೇಕ್ಷಕರ ಆಸೆ ಸದ್ಯ ಈಡೇರೋ ಸಾಧ್ಯತೆಗಳಿಲ್ಲ.

Comments are closed.