ಉಡುಪಿ : Shobha Karandlaje : ದೇಶದಲ್ಲಿ ಐದು ವರ್ಷಗಳ ಕಾಲ ಪಿಎಫ್ಐ ಬ್ಯಾನ್ ಮಾಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಿಎಫ್ಐ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಪಿಎಫ್ಐ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, ಪಿಎಫ್ಐ ಹಿಂದೂ ಯುವಕರ ಕೊಲೆಯಲ್ಲಿ ಭಾಗಿಯಾಗಿದೆ. ಎನ್ಐಎ ಮೂರು ವರ್ಷ ದಾಖಲೆ ಸಂಗ್ರಹ ಮಾಡಿದೆ.ಎಸ್ಡಿಪಿಐ ಒಂದು ರಾಜಕೀಯ ಪಕ್ಷ. ಹೀಗಾಗಿ ಎಸ್ಡಿಪಿಐ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಎಸ್ಡಿಪಿಐನಲ್ಲಿರುವ ಪಿಎಫ್ಐ ಕಾರ್ಯಕರ್ತರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ಗೃಹ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ದೇಶಾದ್ಯಂತ ಜಿಲ್ಲಾಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ. ಬಾಂಬ್ ತಯಾರಿಕೆ,ಶಸ್ತ್ರಾಸ್ತ್ರ ಬಳಕೆ ಮಾಡಲು ಪಿಎಫ್ಐ ತರಬೇತಿ ನೀಡುತ್ತಿತ್ತು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗುತ್ತಿತ್ತು. ಶಿವಮೊಗ್ಗದಲ್ಲಿ ಮೂವರು ಇಂಜಿನಿಯರ್ಗಳನ್ನು ಬಂಧಿಸಿದ ಬಳಿಕ ಈ ಮಾಹಿತಿ ಸಿಕ್ಕಿದೆ. ತುಂಗಾ ನದಿ ತೀರದಲ್ಲಿ ಬಾಂಬ್ ಪ್ರಯೋಗ ಯಶಸ್ವಿಯಾದ ಬಳಿಕ ರಾಷ್ಟ್ರಧ್ವಜವನ್ನು ಅರ್ಧ ಸುಟ್ಟು ಸಂಭ್ರಮಿಸಿದ್ದಾರೆ ಎಂದು ಗುಡುಗಿದ್ದಾರೆ .
ಭಾರತವನ್ನು ದುರ್ಬಲಗೊಳಿಸಬೇಕು ಎನ್ನುವುದು ಪಿಎಫ್ಐ ಉದ್ದೇಶವಾಗಿತ್ತು. ಭಾರತದ ಎಲ್ಲಾ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ದೇಶದ ವಿರುದ್ಧ ಇರುವವರ ಮಾನಸಿಕತೆಯನ್ನು ಬದಲಿಸುವುದು ಪಿಎಫ್ಐ ಉದ್ದೇಶವಾಗಿತ್ತು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಆರ್ಎಸ್ಎಸ್ ಬ್ಯಾನ್ ಮಾಡುವಂತೆ ಕಾಂಗ್ರೆಸ್ ಬೇಡಿಕೆ ಇಟ್ಟಿರುವ ವಿಚಾರವಾಗಿಯೂ ಇದೇ ವೇಳೆ ಟಾಂಗ್ ನೀಡಿದ ಅವರು, ಕಾಂಗ್ರೆಸ್ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ನಾವಿಕನಿಲ್ಲದ ದೋಣಿಯೆಂದರೆ ಅದು ಕಾಂಗ್ರೆಸ್ . ಆರ್ಎಸ್ಎಸ್ ನಿಷೇಧ ಮಾಡಿದಾಗ ಕಾಂಗ್ರೆಸ್ಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಆರ್ಎಸ್ಎಸ್ ಬ್ಯಾನ್ ಮಾಡಿದ ಇಂದಿರಾ ಗಾಂಧಿಯನ್ನು ಜನತೆ ಸೋಲಿಸಿದ್ದರು. ಆರ್ಎಸ್ಎಸ್ ಯಾವ ದೇಶದ್ರೋಹಿ ಚಟುವಟಿಕೆ ಮಾಡಿದೆ..? ಒಂದು ಬಾರಿ ಆರ್ಎಸ್ಎಸ್ ಶಾಖೆಗೆ ಭೇಟಿ ಕೊಡಿ. ಮುಸಲ್ಮಾನರನ್ನು ಓಲೈಸಲು ಈ ರೀತಿ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ಭಾರತವನ್ನು ಎಲ್ಲೆಲ್ಲಿ ವಿಭಜನೆ ಮಾಡಿದ್ದೀರೋ ಅಲ್ಲೆಲ್ಲ ಹೋಗಿ ಭಾರತ್ ಜೋಡೋ ಯಾತ್ರೆ ಮಾಡಿ. ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ..? ಹಿಮಾಲಯ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯೋದಿಲ್ಲ ಅಂತಾ ನೆಹರೂ ಹೇಳಿದ್ದರು. ಹಾಗಾಗಿ ಹಿಮಾಲಯನ್ನು ಬಿಟ್ಟುಕೊಟ್ಟಿದ್ದೆವು. ರಾಹುಲ್ ಗಾಂಧಿ ಪಾಕ್, ಚೀನಾ ಹಾಗೂ ಬಾಂಗ್ಲಾ ಗಡಿಗಳಲ್ಲಿ ಭಾರತ್ ಜೋಡೋ ಯಾತ್ರೆ ಮಾಡಲಿ ಎಂದು ಗುಡುಗಿದ್ದಾರೆ.
ಇದನ್ನು ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್
ಇದನ್ನೂ ಓದಿ : Sabbakki Paddu : ಉಪವಾಸದ ದಿನದಂದು ಮನೆಯಲ್ಲೇ ಮಾಡಿ ಸಬ್ಬಕ್ಕಿ ಪಡ್ಡು
RSS ban statement by Congress for Muslim vote bank :shobha Karandlaje Gudugu