Lenovo M10 Plus Tablet : ಭಾರತದಲ್ಲಿ ಬಿಡುಗಡೆಯಾದ ಲೆನೊವೊ M10 ಪ್ಲಸ್‌ ಥರ್ಡ್‌ ಜನರೇಶನ್‌ ಟ್ಯಾಬ್ಲೆಟ್‌; ಬೆಲೆ, ಲಭ್ಯತೆ ಮತ್ತು ವಿಶೇಷತೆ ಹೀಗಿದೆ

Lenovo M10 Plus Tablet : ಚೀನಾದ ಟೆಕ್‌ ದೈತ್ಯ ಕಂಪನಿ ಲೆನೊವೊ ಥರ್ಡ್‌ ಜನರೇಶನ್‌ ಟ್ಯಾಬ್ಲೆಟ್‌ ಅನ್ನು ಬಿಡುಗಡೆ ಮಾಡಿದೆ. M10 ಪ್ಲಸ್‌ ಟ್ಯಾಬ್ಲೆಟ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕಂಪನಿಯ ಪೋರ್ಟ್‌ ಫೋಲಿಯೊಗೆ ಇತ್ತಿಚೆಗೆ ಸೇರ್ಪಡೆಯಾಗಿದೆ. ಹೊಸದಾಗಿ ಬಿಡುಗಡೆಯಾದ M10 ಪ್ಲಸ್‌ ಆಂಡ್ರಾಯ್ಡ್ ಟ್ಯಾಬ್ಲೆಟ್ 10.61-ಇಂಚಿನ 2K IPS LCD ಡಿಸ್ಪ್ಲೇ ಜೊತೆಗೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಚಿಪ್ಸೆಟ್ ಹೊಂದಿದೆ. ಈ ಟ್ಯಾಬ್ಲೆಟ್‌ ಶಕ್ತಿಯುತ ಪ್ರೊಸೆಸರ್‌ನೊಂದಿಗೆ ಅತ್ಯುತ್ತಮ-ಇನ್-ಕ್ಲಾಸ್ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತಿದೆ.

ಬೆಲೆ, ಲಭ್ಯತೆ :
ಲೆನೊವೊ ಟ್ಯಾಬ್‌ M10 ಪ್ಲಸ್‌ ಎರಡು ರೂಪಾಂತರಗಳಲ್ಲಿ Wi-Fi ಮತ್ತು LTE ಎಂದು ಬಿಡುಗಡೆಯಾಗಿದೆ. ಇದರ Wi-Fi ರೂಪಾಂತರಕ್ಕೆ ರೂ 19,999 ರೂಪಾಯಿಗಳಾದರೆ, LTE ರೂಪಾಂತರಕ್ಕೆ 21,999 ರೂಪಾಯಿ ಆಗಿದೆ.

ಲೆನೊವೊನ ಹೊಸ ಆಂಡ್ರಾಯ್ಡ್‌ ಟ್ಯಾಬ್ಲೆಟ್ ಅನ್ನು ಅಮೆಜಾನ್‌ ಇಂಡಿಯಾ ಮತ್ತು ಲೆನೊವೊನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ. ಈ ಟ್ಯಾಬ್ಲೆಟ್‌ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಲಭ್ಯವಿರುತ್ತದೆ.

ಬಣ್ಣಗಳ ಆಯ್ಕೆ :
ಲೆನೊವೊ M10 ಪ್ಲಸ್‌ ಟ್ಯಾಬ್ಲೆಟ್‌ ಎರಡು ಬಣ್ಣಗಳ ಆಯ್ಕೆಯನ್ನು ನೀಡುತ್ತದೆ. ಸ್ಟಾರ್ಮ್ ಗ್ರೇ ಮತ್ತು ಫ್ರಾಸ್ಟ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ವೈಶಿಷ್ಟ್ಯತೆಗಳು :
15:9 ಅನುಪಾತದ 10.61-ಇಂಚಿನ 2K IPS LCD ಡಿಸ್ಪ್ಲೇ ಹೊಂದಿರುವ ಲೆನೊವೊ M10 ಪ್ಲಸ್‌ ಟ್ಯಾಬ್ಲೆಟ್‌ 2,000 x 1,200 ಪಿಕ್ಸೆಲ್‌ ರೆಸಲ್ಯೂಷನ್‌, 10-ಪಾಯಿಂಟ್ ಮಲ್ಟಿ ಟಚ್ ಮತ್ತು 400 nits ಪೀಕ್ ಬ್ರೈಟ್‌ನೆಸ್ ಹೊಂದಿದೆ. ಈ ಟ್ಯಾಬ್ಲೆಟ್ 4GB ಯ LPDDR4x RAM ಮತ್ತು 128GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್ ಅನ್ನು ಹೊಂದಿದೆ. ಮೈಕ್ರೊ SD ಕಾರ್ಡ್‌ ಹೊಂದಿರುವ ಇದನ್ನು 1TB ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಕ್ಯಾಮೆರಾದ ವಿಷಯದಲ್ಲಿ, ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 8MP ಯದ್ದಾಗಿದೆ. ಲೆನೊವೊ ಟ್ಯಾಬ್‌ M10 ಪ್ಲಸ್‌ ಸುಮಾರು 465g ತೂಕ ಹೊಂದಿದೆ. ಕಂಪನಿಯು ಹೇಳಿಕೊಂಡಂತೆ 7,700 mAh ಬ್ಯಾಟರಿ ಹೊಂದಿರುವ ಟ್ಯಾಬ್ಲೆಟ್‌ 4 ವಾರಗಳ ಸ್ಟ್ಯಾಂಡ್‌ಬೈ ನೀಡುತ್ತದೆ. 60 ಗಂಟೆಗಳ ಕಾಲ ಸಂಗೀತ ಪ್ಲೇಬ್ಯಾಕ್‌, 12 ಗಂಟೆಗಳ ಕಾಲ ಆನ್‌ಲೈನ್ ವೀಡಿಯೊ ಪ್ಲೇಬ್ಯಾಕ್ ಮತ್ತು 14 ಗಂಟೆಗಳ ಕಾಲ ವೆಬ್ ಬ್ರೌಸಿಂಗ್ ಅನ್ನು ನೀಡುತ್ತದೆ.

‌ಇದನ್ನೂ ಓದಿ : Instagram : ಹೊಸ ‘ನೋಟ್ಸ್‌’ ವೈಶಿಷ್ಟ್ಯ ಪರಿಚಯಿಸಿದ ಇನ್‌ಸ್ಟಾಗ್ರಾಮ್‌; ಬಳಸುವುದು ಹೇಗೆ ಅಂತೀರಾ…

(Lenovo M10 Plus Tablet launched in India. Know the price and specification)

Comments are closed.