ಸೋಮವಾರ, ಏಪ್ರಿಲ್ 28, 2025
Homekarnatakaಆರ್‌ಎಸ್‌ಎಸ್‌ ವಿರುದ್ಧ ಮುಂದುವರಿದ ಸಮರ : ಪ್ರತಿಯೊಬ್ಬ ಭಾರತಿಯನಿಗೂ RSS ಅಂದ್ರೆ ಭಯ ಎಂದ ಸಿದ್ದರಾಮಯ್ಯ

ಆರ್‌ಎಸ್‌ಎಸ್‌ ವಿರುದ್ಧ ಮುಂದುವರಿದ ಸಮರ : ಪ್ರತಿಯೊಬ್ಬ ಭಾರತಿಯನಿಗೂ RSS ಅಂದ್ರೆ ಭಯ ಎಂದ ಸಿದ್ದರಾಮಯ್ಯ

- Advertisement -

ಬೆಂಗಳೂರು : ಒಂದೆಡೆ ಕಾಂಗ್ರೆಸ್ ಪಕ್ಷದ ಒಳಗೆ ಸಿಎಂ ಸ್ಥಾನಕ್ಕಾಗಿ ಮುಸುಕಿನ‌ ಗುದ್ದಾಟ ತೀವ್ರಗೊಂಡಿದ್ದರೇ ಇನ್ನೊಂದೆಡೆ ಮುಂದಿನ ಎಲೆಕ್ಷನ್ ನಲ್ಲಿ ಗೆದ್ದು ಸಿಎಂ ಸ್ಥಾನಕ್ಕೇರೋ ಕನಸಿನಲ್ಲಿರೋ ಮಾಜಿ ಸಿಎಂ ಸಿದ್ಧು ಬಿಜೆಪಿ ವಿರುದ್ಧ ಕೆಂಡಕಾರುವುದನ್ನು ಮುಂದುವರೆಸಿದ್ದಾರೆ. ಆರ್.ಎಸ್.ಎಸ್.ವಿರುದ್ಧ (RSS vs Siddaramaiah tweet war) ನಿರಂತರ ಸಮರ ಸಾರಿರುವ ಸಿದ್ಧು ಸಾಲು ಸಾಲು ಟ್ವೀಟ್ ನಲ್ಲಿ ಟಾಂಗ್ ನೀಡಿದ್ದಾರೆ.

ಆರ್‌ಎಸ್‌ಎಸ್‌ ನಮ್ಮ ದೇಶದಲ್ಲ ಎಂದು ಅರ್.ಎಸ್.ಎಸ್. ಮೂಲದ ಬಗ್ಗೆ ಸಿದ್ದರಾಮಯ್ಯ ವಿವಾದ ಎಬ್ಬಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ ಸಿದ್ದುಗೆ RSS ಕಂಡ್ರೆ ಭಯ ಎಂದಿದ್ದರು. ಡಿವಿಎಸ್ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರೋ ಸಿದ್ಧರಾಮಯ್ಯ, ಮಾಜಿ‌ ಮುಖ್ಯಮಂತ್ರಿ ಡಿವಿ ಸದಾನಂದಗೌಡರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ RSS ಸಂಘಟನೆ ಕಂಡರೆ ಭಯ ಇದೆ ಎಂದಿದ್ದಾರೆ.

ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು ಎನ್ನಲಾಗುತ್ತಿದೆ.ಡಿವಿಎಸ್ ಯಾಕೆ ಮಾತೃ ಸಂಸ್ಥೆಯ ಮೇಲೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಭಯದ ಕಾರಣದಿಂದಾಗಿಯೇ ಗಾಂಧೀಜಿಯವರ ಹತ್ಯೆಯ ನಂತರ ಸಂಘಟನೆಗೆ ನಿಷೇಧ ಹೇರಿದ್ದು ಎಂದು ಸಿದ್ಧು ಕುಟುಕಿದ್ದಾರೆ. RSS ಮೇಲೆ ದೇಶದ ಮೊದಲ ಗೃಹಸಚಿವ‌ ವಲ್ಲಭಭಾಯಿ‌ ಪಟೇಲ್ ನಿಷೇಧ ಹೇರಿದ್ದು ನೆನಪಿರಲಿ. ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು,ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ನನಗೂ RSS ಬಗ್ಗೆ ಭಯ ಇದೆ. ಸಾಮಾಜಿಕ ನ್ಯಾಯದ ಕಾನೂನುಗಳನ್ನೇ ವಿರೋಧಿಸುವ RSS ಬಗ್ಗೆ ಭಯವಲ್ಲದೆ ಪ್ರೀತಿ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಮಕ್ಕಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ ಸಮುದಾಯದ ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸುತ್ತಾರೆ ಬಡ ಮಕ್ಕಳನ್ನ ಜೈಲಿಗೆ ಅಟ್ಟುವ @RSSorg ಬಗ್ಗೆ ಭಯ ಸಹಜ ಅಲ್ಲವೇ @DVSadanandGowda ಅವರೇ ? ಯಾವುದೇ ವ್ಯಕ್ತಿ-ಸಿದ್ದಾಂತ- ಸಂಸ್ಥೆ ಇತರರಲ್ಲಿ ಗೌರವ ಹುಟ್ಟಿಸಬೇಕೇ ಹೊರತು ಭಯ ಹುಟ್ಟಿಸುವುದಲ್ಲ ಎಂದು ಗುಡುಗಿದ್ದಾರೆ.

ಈ ಬಗ್ಗೆ‌ ಆತ್ಮಾವಲೋಕನ‌ ಮಾಡಬೇಕಾದವರು ಭಯವನ್ನು ಉತ್ಪಾದಿಸುವವರೇ ಹೊರತು ಭಯ ಪಡುವವರಲ್ಲ.ಆರ್.ಎಸ್.ಎಸ್ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಯಾಕೆ ಅಲ್ಲಿ ಹಿಂದುಗಳೇ ಆಗಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಲ್ಲ?‌ ಈ ನನ್ನ ಸರಳ ಪ್ರಶ್ನೆಗೆ ಯಾಕೆ, ಯಾರೂ ಉತ್ತರಿಸುತ್ತಿಲ್ಲ? ಸರಣಿ ಟ್ವೀಟ್ ಮೂಲಕ ಮತ್ತೆ ಸಂಘ ಪರಿವಾರವನ್ನು ಕುಟುಕಿದ ಮಾಜಿ ಸಿಎಂ ಸಿದ್ಧು ಆರ್ ಎಸ್ ಎಸ್ ವಿಚಾರದಲ್ಲಿ ಬಿಜೆಪಿ ತನ್ನ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಯಾಕೆ ಎಂದು ಮತ್ತೆ ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಸಿದ್ಧು RSS ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

ಇದನ್ನೂ ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

ಇದನ್ನೂ ಓದಿ : ಕರಕುಶಲ ನಿಗಮದಲ್ಲಿ ಬೇಳೂರು ರಾಘವೇಂದ್ರ ಮತ್ತು ಡಿ.ರೂಪಾ ಫೈಟ್: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದೂರು

RSS vs Siddaramaiah tweet war

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular