Kanyakumari actress Rashmitha : ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕನ್ಯಾಕುಮಾರಿ ಖ್ಯಾತಿಯ ನಟಿ ರಶ್ಮಿತಾ ಜೆ ಶೆಟ್ಟಿ

Kanyakumari actress Rashmitha : ಕನ್ನಡ ಕಿರುತೆರೆಯಲ್ಲಿ ಸಧ್ಯ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ರಾಜಾ – ರಾಣಿ ಧಾರವಾಹಿ ಖ್ಯಾತಿಯ ಲಾವಣ್ಯ ಹಾಗೂ ಶಶಿ ಹೆಗ್ಡೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ಯಾ ಕುಮಾರಿ ಧಾರವಾಹಿ ಖ್ಯಾತಿಯ ರಶ್ಮಿತಾ ಜೆ ಶೆಟ್ಟಿ ನಿರ್ದೇಶಕ ಹೊನ್ನೇಶ್​ ಜೊತೆಯಲ್ಲಿ ವಿವಾಹವಾಗಿದ್ದಾರೆ. ಬೆಂಗಳೂರಿನ ಕನ್ವೆನ್ಶನ್​ ಹಾಲ್​ನಲ್ಲಿ ನಡೆದ ರಶ್ಮಿತಾ ಹಾಗೂ ಹೊನ್ನೇಶ್​ ವಿವಾಹ ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ ಧಾರವಾಹಿ ತಂಡ ಸೇರಿದಂತೆ ಸಾಕಷ್ಟು ಕಿರುತೆರೆ ತಾರೆಯರು ಕಾಣಿಸಿಕೊಂಡರು.


ರಶ್ಮಿತಾ ಹಾಗೂ ಹೊನ್ನೇಶ್​ ದಂಪತಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಆರತಕ್ಷತೆ ಕಾರ್ಯಕ್ರಮದಲ್ಲಿ ಹೊನ್ನೇಶ್​ ಸೂಟ್​ನಲ್ಲಿ ಕಾಣಿಸಿಕೊಂಡರೆ ನಟಿ ರಶ್ಮಿತಾ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು.


ರಶ್ಮಿತಾ ಹಾಗೂ ಹೊನ್ನೇಶ್​ ಆರತಕ್ಷತೆ ಕಾರ್ಯಕ್ರಮದ ಫೋಟೋಗಳು ಹೊರಬೀಳುವವರೆಗೂ ಇವರಿಬ್ಬರೂ ಮದುವೆಯ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಂತೆ ಕಂಡಿಲ್ಲ. ರಶ್ಮಿತಾ ಹಾಗೂ ಹೊನ್ನೇಶ್​ ಈವರೆಗೆ ಸೋಶಿಯಲ್​ ಮೀಡಿಯಾದಲ್ಲಿ ಯಾವುದೇ ಫೋಟೋಗಳನ್ನು ಶೇರ್​ ಮಾಡಿಲ್ಲ. ಆದರೆ ಕನ್ಯಾಕುಮಾರಿ ಧಾರವಾಹಿಯ ಕೆಲ ತಾರೆಯರು ಆರತಕ್ಷತೆಯ ಫೋಟೋಗಳನ್ನು ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡುತ್ತಿದ್ದು ಇದನ್ನು ನೋಡಿದರೆ ಆರತಕ್ಷತೆ ಸಖತ್​ ಗ್ರ್ಯಾಂಡ್​ ಆಗಿ ನಡೆದಿರುವಂತೆ ಕಾಣುತ್ತಿದೆ.


ರಶ್ಮಿತಾ ಹಾಗೂ ಹೊನ್ನೇಶ್​ ನಿನ್ನೆ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡರೆ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕನ್ಯಾಕುಮಾರಿ ಧಾರವಾಹಿಯ ತಾರೆಯರು ಆಕರ್ಷಕ ಉಡುಪಿನಲ್ಲಿ ಕಂಗೊಳಿಸಿದರು.


ಕನ್ನಡ ಟೆಲಿ ಇಂಡಸ್ಟ್ರಿಯಲ್ಲಿ ಮದುವೆ ಸೀಸನ್​ ನಡೆಯುತ್ತಿದೆ. ಕಳೆದ ಕೆಲ ತಿಂಗಳಲ್ಲಿ ಅನೇಕ ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದಿನ ವಾರ ಸಾಗರ್​-ದೀಪಾ, ನಿನಾದ್​ ಹರಿತ್ಸಾ – ರಮ್ಯಾ, ಐಶ್ವರ್ಯ – ವಿನಯ್​, ಲಾವಣ್ಯ – ಶಶಿ ಹೆಗ್ಡೆ ಸೇರಿದಂತೆ ಸಾಕಷ್ಟು ತಾರೆಯರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಇದನ್ನು ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್​

ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

Kanyakumari actress Rashmitha J Shetty gets married to director Honnesh

Comments are closed.