Sandalwood is producer K Manju: ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್‌ ವುಡ್‌ ನಿರ್ಮಾಪಕ

ಬೆಂಗಳೂರು : (Sandalwood is producer K Manju) ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದ್ದು, ರಾಜ್ಯ ರಾಜಕಾರಣಕ್ಕೆ ಎಂಟ್ರಿ ನೀಡುವುದಾಗಿ ಸ್ಯಾಂಡಲ್‌ ವುಡ್‌ ನ ಖ್ಯಾತ ನಿರ್ಮಾಪಕ ಕೆ. ಮಂಜು ತಿಳಿಸಿದ್ದಾರೆ. ಈ ಬಗ್ಗೆ ಅಧೀಕೃತ ಮಾಹಿತಿಯನ್ನು ಸದ್ಯದಲ್ಲೇ ಘೋಷಣೆ ಮಾಡುವುದಾಗಿ ತಿಳಿಸಿದ್ದು, ಕ್ಷೇತ್ರ ಕೂಡ ಫೈನಲ್‌ ಆಗಿದೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ನಿರ್ಮಾಪಕ ಕೆ. ಮಂಜು ಜೆಡಿಎಸ್‌ ಆಕಾಂಕ್ಷಿ ಎಂದು ಹೇಳಲಾಗುತ್ತಿದ್ದು, ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ ದಿಲ್‌ ದಾರ್‌ ಸಿನಿಮಾದ ಮುಹೂರ್ತದ ವೇಳೆ ರಾಜಕೀಯಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ. ” ಸದ್ಯದಲ್ಲೇ ರಾಜಕಾರಣಕ್ಕೆ ಬರುವುದಾಗಿ ಘೋಷಣೆ ಮಾಡಲಿದ್ದೇನೆ. ಈ ಸಂಬಂಧ ನಮ್ಮ ಕೆಲವು ನಾಯಕರನ್ನು ಭೇಟಿ ಮಾಡಬೇಕು. ಅವರಲ್ಲಿ ಚರ್ಚಿಸಿದ ನಂತರ ನಿರ್ಧಾರ ತಿಳಿಸುತ್ತೇನೆ. ಆದಷ್ಟು ಬೇಗನೇ ಈ ವಿಷಯವನ್ನು ಫೈನಲ್‌ ಮಾಡುತ್ತೇನೆ ಎಂದಿದ್ದಾರೆ.

ಇನ್ನೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆಗಳು ಹೆಚ್ಚಿದ್ದು, ವೋಟ್‌ ಗಳು ಜಾಸ್ತಿ ಬೀಳುತ್ತವೆ. ಹೀಗಾಗಿ ಈ ಕ್ಷೇತ್ರದಲ್ಲಿ ಹಲವು ನಾಯಕರ ಬೆಂಬಲ ಮಂಜು ಅವರಿಗೆ ಸಿಗುವ ಸಾಧ್ಯತೆಯಿದೆ. ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಾ ಬಂದಿರುವ ಅವರು ” ಹಿರಿಯರ ಆಶೀರ್ವಾದ ಪಡೆದು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಇದಕ್ಕಾಗಿ ಹಲವಾರು ವರ್ಷದಿಂದ ಸಾಮಾಜಿಕ ಸೇವೆ ಮಾಡುತ್ತಾ ಬಂದಿದ್ದೇನೆ. ” ಎಂದಿದ್ದಾರೆ.

ಇದನ್ನೂ ಓದಿ : ಶಾಸಕ ಎನ್ ವೈ ಗೋಪಾಲಕೃಷ್ಣ ಬಿಜೆಪಿಗೆ ರಾಜೀನಾಮೆ : ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಕೆ. ಮಂಜು ಅವರು ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಈಗ ಅವರು ರಾಜಕೀಯದ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಆರ್​. ಅಶೋಕ್​ ಅವರ ಪ್ರಾಬಲ್ಯ ಇರುವಂತಹ ಕ್ಷೇತ್ರ. ಈ ಬಾರಿ ಕೂಡ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತ. ಅಶೋಕ್​ ವಿರುದ್ಧ ಕಾಂಗ್ರೆಸ್​ನಿಂದ ಪಿಜಿಆರ್ ಸಿಂಧ್ಯಾ ಅವರು ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು, ಒಕ್ಕಲಿಗರ ಮತಗಳನ್ನು ಸೆಳಯಲು ಜೆಡಿಎಸ್​ನಿಂದ ಕೆ. ಮಂಜು ಸ್ಪರ್ಧಿಸಿದರೆ ಮೂರೂ ಪಕ್ಷಗಳ ನಡುವೆ ಹಣಾಹಣಿ ಜೋರಾಗಲಿದೆ.

ಇದನ್ನೂ ಓದಿ : Health department guidelines for elections: ಸದ್ದಿಲ್ಲದೇ ಏರುತ್ತಿದೆ ಕೊರೋನಾ ಸಂಖ್ಯೆ: ಚುನಾವಣೆಗೂ ಆರೋಗ್ಯ ಇಲಾಖೆ ಗೈಡ್ ಲೈನ್ಸ್ ರಿಲೀಸ್

Sandalwood is producer K Manju: Sandalwood producer entered state politics

Comments are closed.