ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ( MLC election ) ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಬೆಳಗಾವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಸೋಲಿನ ರುಚಿ ಕಂಡಿವೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಇಲ್ಲಿ ವಿಜಯದ ಬಾವುಟ ಹಾರಿಸಿದ್ದಾರೆ. ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿಯನ್ನು ಕಡಗಣನೆ ಮಾಡಿದ್ದು ಹಾಗೂ ಲಖನ್ ಜಾರಕಿಹೊಳಿಗೆ (Sathish Jarakiholi) ಟಿಕೆಟ್ ನೀಡದೇ ಇದ್ದದ್ದು ಬಿಜೆಪಿಗೆ ದೊಡ್ಡ ಮಟ್ಟಿಗಿನ ಹೊಡೆತ ನೀಡಿದೆ. ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿಯ ತಪ್ಪಿನಿಂದಲೇ ಲಖನ್ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಹೇಳಿದ್ರು.
ಬಿಜೆಪಿ ಮಾಡಿಕೊಂಡ ಯಡವಟ್ಟುಗಳಿಂದಾಗಿ ಬಯಸದೇ ಬಂದ ಭಾಗ್ಯ ಎಂಬಂತೆ ಲಖನ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಲಖನ್ ಗೆಲುವು ಕೇವಲ ಆಕಸ್ಮಿಕ ಮಾತ್ರ. ಆದರೆ ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಾದದ್ದು ಲಖನ್ ಕೈಯಲ್ಲಿದೆ ಎಂದು ಹೇಳಿದ್ರು.
ಲಖನ್ಗೆ ಎಲ್ಲಾ ಸೇರಿ ಕೈ ಹಿಡಿದು ದಡ ಸೇರಿಸಿದಂತೆ ಆಗಿದೆ. ಸಣ್ಣ ಸಣ್ಣ ಜನರ ನಡುವೆ ಬಾಂಬ್ ಎಸೆದ ಹಾಗೆ ದೊಡ್ಡವರ ಮಧ್ಯೆ ಬಾಂಬ್ ಎಸೆದರೆ ಅನಾಹುತ ಹೆಚ್ಚೇ ಆಗುತ್ತದೆ. ಜನಸೇವೆ ಮಾಡೋದು ಅಂದರೆ ಬೇವಿನ ಗಿಡದ ಕೆಳಗೆ ಕೂತು ಜನರನ್ನು ಟೀಕೆ ಮಾಡಿದಂತೆ ಅಲ್ಲ. ರಮೇಶ್ ಹಾಗೂ ಲಖನ್ ಇಬ್ಬರೂ ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು. ಲಖನ್ ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಚುನಾವಣಾ ಫಲಿತಾಂಶದ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ ರಮೇಶ್ ಜಾರಕಿಹೊಳಿ
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸಿಕ್ಕ ಸೋಲು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಸಿದೆ. ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲೇ ಕೇಸರಿ ಪಾಳಯ ಸೋಲಲು ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಪಿತೂರಿ ಕಾರಣವೇ ಎಂಬ ಗುಮಾನಿ ಕೂಡ ಎದ್ದಿದೆ. ಆದರೆ ಈ ಎಲ್ಲಾ ಅಪವಾದಗಳಿಗೆ ಸ್ವತಃ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು ಅನವಶ್ಯಕವಾಗಿ ನನ್ನ ತಲೆ ಮೇಲೆ ಬಿಜೆಪಿ ಸೋಲಿನ ಹೊರೆಯನ್ನು ಹೇರುತ್ತಿದ್ದಾರೆ. ನನಗೆ ಕಾಂಗ್ರೆಸ್ನ್ನು ಸೋಲಿಸಬೇಕು ಎಂಬ ಅಭಿಲಾಷೆ ದೊಡ್ಡ ಮಟ್ಟದಲ್ಲಿ ಇತ್ತು. ಆದರೆ ನಾನೆಂದಿಗೂ ಬಿಜೆಪಿಯನ್ನು ಸೋಲಿಸಬೇಕು ಎಂದು ಯೋಚನೆ ಕೂಡ ಮಾಡಿಲ್ಲ. ಆದರೂ ನನ್ನ ಮೇಲೆ ವಿನಾಕಾರಣ ಸೋಲಿನ ಅಪವಾದ ಕಟ್ಟಲಾಗ್ತಿದೆ ಎಂದು ಹೇಳಿದರು.
ಅಲ್ಲದೇ ಇದೇ ವೇಳೆ ಹೊಸ ಬಾಂಬ್ ಸಿಡಿಸಿದ ಗೋಕಾಕ್ ಸಾಹುಕಾರ, ವಿಧಾನ ಪರಿಷತ್ ಚುನಾವಣೆಗೂ ಕೇವಲ ನಾಲ್ಕೇ ದಿನಗಳು ಮುಂಚಿತವಾಗಿ ಇಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಬೆಳವಣಿಗೆ ನಡೆದಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಈ ರಾಜಕೀಯ ವಿದ್ಯಮಾನವೇ ಕಾರಣ. ನಾನು ಪಕ್ಷದ ನಾಯಕರ ಜೊತೆ ಆಂತರಿಕವಾಗಿ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಮಾರ್ಮಿಕವಾಗಿ ಮಾತನಾಡಿದರು. ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಇದೇ ವೇಳೆ ಆಕ್ರೋಶ ಹೊರಹಾಕಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಯಾವುದೇ ಪ್ರಯೋಜನವಿಲ್ಲ. ಅವರೊಬ್ಬ ವೇಸ್ಟ್ ಬಾಡಿ ಎಂದು ಕುಟುಕಿದರು.
ಇದನ್ನೂ ಓದಿ : ಪಕ್ಷಕ್ಕೆ ಸೋಲು, ಸಹೋದರನಿಗೆ ಗೆಲುವು : ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡದ್ರಾ ರಮೇಶ್ ಜಾರಕಿಹೊಳಿ
ಇದನ್ನೂ ಓದಿ : Omicron patient discharge : ಕೊರೋನಾಂತಕದ ನಡುವೆ ಸಮಾಧಾನದ ಸುದ್ದಿ: ಓಮೈಕ್ರಾನ್ ಸೋಂಕಿತ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್
Sathish Jarakiholi statement regarding MLC election