Kerala Inspiration Women : 104ರ ಇಳಿ ವಯಸ್ಸಲ್ಲೂ ಬತ್ತದ ಜೀವನೋತ್ಸಾಹ; ದೃಷ್ಟಿ ಹಾಗೂ ಶ್ರವಣ ದೋಷದ ನಡುವೆಯೇ ಕೇರಳದ ವೃದ್ಧೆಯ ಸಾಧನೆ

ಕೇರಳದ ಈ ಅಜ್ಜಿ ಕಥೆ ಓದಿದ್ರೆ ನೀವೂ ಆಶ್ಚರ್ಯಪಡ್ತೀರ. ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಈ ಹಿಂದೆ ಕೇಳಿದ್ದೇವೆ, ನೋಡಿದ್ದೇವೆ. ಯೌವನ ದಲ್ಲಿ ಏನಾದರೂ ಮಾಡಬಹುದು, ಆದರೆ ವಯಸ್ಸಾದ ಬಳಿಕ ಸಾಧ್ಯವೇ ಇಲ್ಲ ಅನ್ನುವ ಮಾತಿದೆ. ಕೇರಳದ 104ರ ಹರೆಯದ ಕುಟ್ಟಿಯಮ್ಮ (Kerala Inspiration Women) ಎಲ್ಲರಿಗಿಂತ ಭಿನ್ನ. ಯಾಕಂತೀರ, ಈ ಸ್ಟೋರಿ ಓದಿ.

ಕೇರಳದ ತಿರುವಂಚೂರ್ ಹಳ್ಳಿಯ ದಿನಚರಿ ಉಳಿದ ಮಹಿಳೆಯರಂತೆ ಬೆಳಗೆದ್ದು ಅಡುಗೆ, ಕ್ಲಿನಿಂಗ್, ಹಸುಗಳಿಗೆ ಹುಲ್ಲು ನೀಡುವುದು ಆಗಿತ್ತು. ಆದರೆ, ಅದರಲ್ಲಿಗ ಸಣ್ಣ ಬದಲಾವಣೆ ಉಂಟಾಗಿದೆ. ಈಗ ದಿನಪತ್ರಿಕೆ ಓದದೇ ತನ್ನ ಯಾವುದೇ ಇತರ ಮನೆ ಕೆಲಸ ಮಾಡುವುದಿಲ್ಲಂತೆ ಇವರು. ಒಂದೆರಡು ನಿಮಿಷಗಳಲ್ಲ, ಬರೋಬ್ಬರಿ ಎರಡು ಗಂಟೆ ಪೇಪರ್ ಓದಿ ಕರೆಂಟ್ ಅಫೇರ್ಸ್ ಬಗ್ಗೆ ತಿಳಿಯುತ್ತಾರೆ. ಈ ಸಡನ್ ಚೇಂಜ್ ಆಗಲು ಕಾರಣ, ಕುಟ್ಟಿಯಮ್ಮ ಏಪ್ರಿಲ್ ತಿಂಗಳಲ್ಲಿ ಓದು ಬರಹ ಕಲಿತದ್ದು.

“ಪ್ರಪಂಚದ ವಿವರಗಳನ್ನು ತಿಳಿಯಬೇಕೆಂಬ ಆಸೆ ಮೊದಲಿಂದಲೂ ಇತ್ತು. ಆದರೆ ಓದಲು ಗೊತ್ತಿಲ್ಲದೆ ಸುಮ್ಮನಿದ್ದೆ. ಎಷ್ಟೋ ಬಾರಿ ಇದೆ ವಿಷಯಕ್ಕೆ ನೊಂದದ್ದು ಇದೆ. ಕನಿಷ್ಟ ಪಕ್ಷ ನನ್ನ ಹೆಸರು ಮತ್ತು ವಿಳಾಸ ಬರೆಯಲು ಕಲೀಬೇಕು ಎಂಬ ಕನಸಿತ್ತು” ಅನ್ನುತ್ತಾರೆ ಕುಟ್ಟಿಯಮ್ಮ. ಇದಕ್ಕಾಗಿ ಅವರು ಆಯ್ಕೆ ಮಾಡಿದ್ದು ಇವನಿಂಗ್ ಕ್ಲಾಸ್‌ಗಳನ್ನು. ಅದಾದ ಬಳಿಕ ಕೇರಳ ಸರಕಾರ ನಡೆಸುವ ಲಿಟರಸಿ ಪರೀಕ್ಷೆ ಬರೆಯುತ್ತಾರೆ. ಅಷ್ಟೇ ಅಲ್ಲ ಸಾಕ್ಷರತೆಯಲ್ಲಿ89% ಹಾಗೂ ಗಣಿತದಲ್ಲಿ100% ಅಂಕವನ್ನೂ ಪಡೆಯುತ್ತಾರೆ. ಕೇರಳದಲ್ಲೇ ಪ್ರಪ್ರಥಮ ಬಾರಿಗೆ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದು, ಅಲ್ಲಿನ ಎಜುಕೇಷನ್ ಮಿನಿಸ್ಟರ್ ಗಮನ ಸೆಳೆಯುತ್ತದೆ.

” ಜ್ಞಾನ ಸಂಪಾದನೆಗೆ ವಯಸ್ಸಿನ ಹಂಗಿಲ್ಲ. ಅವರಿಗೆ ಅತ್ಯಂತ ಗೌರವ ಹಾಗೂ ಪ್ರೀತಿಯಿಂದ ಶುಭಾಶಯಗಳು. ಕುಟ್ಟಿಯಮ್ಮ ಇನ್ನು ಮುಂದಕ್ಕೆ ಎಲ್ಲವನ್ನೂ ಓದುವಂತೆ ಆಗಲಿ” ಎಂದು ಟ್ವಿಟ್ ಮಾಡುತ್ತಾರೆ.

ಈ ವಯಸ್ಸಿನಲ್ಲಿ ಸಾಧನೆ ಮಾಡಿದ ಕುಟ್ಟಿಯಮ್ಮನಿಗೆ ಬಾಲ್ಯದಲ್ಲೂ ಓದುವ ಆಸೆ ಇತ್ತು. ಆದರೆ ಕೇರಳದ ಒಂದು ಬಡ ಹಿಂದುಳಿದ ಕುಟುಂಬದಲ್ಲಿ ಜನಿಸಿದ ಇವರಿಗೆ ಶಾಲೆ ಕನಸಿನ ಮಾತು. ಹುಡುಗರಿಗೂ ಆಗಿನ ಕಾಲದಲ್ಲಿ 9ರ ಬಳಿಕ ಓದಲು ಬಿಡುತ್ತಿರಲಿಲ್ಲ. ಹುಡುಗಿ ಎಂದಮೇಲೆ ಹೇಳಬೇಕೆ? ಮನೆಯಲ್ಲೇ ಇದ್ದು ತನ್ನ ಹನ್ನೊಂದು ಜನ ಸಹೋದರರನ್ನು ಸಾಕುವುದೇ ಕುಟ್ಟಿಯಮ್ಮರ ಕೆಲಸವಾಗಿತ್ತು.16ನೇ ವಯಸ್ಸಿಗೇ ಟಿ ಕೆ ಕೋಂತಿಯನ್ನು ಮದುವೆಯಾದ ಇವರು, ನಂತರ ಐದು ಮಕ್ಕಳ ತಾಯಿಯಾಗುತ್ತಾರೆ. ಆದರೂ ಏನೋ ಕೊರತೆ ಇದೆ ಎಂದು ಅವರಿಗೆ ಅನ್ನಿಸಲು ಪ್ರಾರಂಭವಾಗುತ್ತದೆ.

ಹೀಗೆ ಇರುವಾಗ ಪಕ್ಕದ ಮನೆಯ ಲಿಟರಸಿ ಟ್ರೈನರ್ ರೆಹನ ಜಾನ್ ಇವರ ಓದುವ ಆಸೆಗೆ ಸಾಥ್ ನೀಡುತ್ತಾರೆ. ಅವರಿಗೆ ಕೆಲವು ಪುಸ್ತಕಗಳನ್ನು ನೀಡಿ ಓದುವಂತೆ ಹುರಿದುಂಬಿಸುತ್ತಾರೆ. ದೃಷ್ಟಿ ಹಾಗೂ ಶ್ರವಣ ದೋಷ ಇದ್ದರೂ, ಅವರು ಈ ಸಾಧನೆ ಮಾಡಿದ್ದು ನಿಜಕ್ಕೂ ಗ್ರೇಟ್. ಕುಟ್ಟಿಯಮ್ಮ ಸ್ಟೂಡೆಂಟ್ ಅಷ್ಟೇ ಅಲ್ಲ, ನನ್ನ ತಾಯಿಯೂ ಹೌದು” ಎನ್ನುತ್ತಾರೆ ರೆಹನ ಜಾನ್.

ಇದನ್ನೂ ಓದಿ : marriage age of women : ಮಹಿಳೆಯರ ಮದುವೆಯ ಕನಿಷ್ಟ ವಯಸ್ಸು 18 ರಿಂದ 21 ವರ್ಷಕ್ಕೆ ಏರಿಸಲು ಸಂಪುಟ ಅಸ್ತು..!

ಇದನ್ನೂ ಓದಿ : Omicron Treatment : ಹಳೆ ತಪ್ಪಿನಿಂದ ಪಾಠ ಕಲಿತ ಬಿಬಿಎಂಪಿ : ನಗರದಲ್ಲಿ ಓಮೈಕ್ರಾನ್ ಚಿಕಿತ್ಸೆಗೆ ಆಸ್ಪತ್ರೆಗಳು ಸಿದ್ಧ

(Kerala Inspiration Women fulfilled her reading dream)

Comments are closed.