Secret behind the photo: ಉರಿಗೌಡ ನಂಜೇಗೌಡ ಕಿತ್ತಾಟಕ್ಕೆ ಬಿಗ್ ಟ್ವಿಸ್ಟ್ : ಪೋಟೋ ಹಿಂದಿನ ರಹಸ್ಯ ಬಯಲು

ಮಂಡ್ಯ: (Secret behind the photo) ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಉರಿಗೌಡ ನಂಜೇಗೌಡ ಅವರನ್ನು ಮತಯುದ್ದದ ರಣರಂಗಕ್ಕೆ ಬಿಜೆಪಿ ನುಗ್ಗಿಸಿದೆ. ಇಬ್ಬರ ಹೆಸರು ಫೋಟೋ ಇಟ್ಟುಕೊಂಡು ಲಾಭದ ಲೆಕ್ಕ ಹಾಕುತ್ತಿದ್ದ ಬಿಜೆಪಿ ಈಗ ಕೈಸುಟ್ಟುಕೊಂಡಿದೆ. ಶತಮಾನಗಳು ಉರುಳಿದ ನಂತರದಲ್ಲಿ ಈ ಇಬ್ಬರ ಫೋಟೋ ಬಗ್ಗೆ ಯುದ್ದ ಶುರುವಾಗಿದೆ.

ಆದರೆ ಸತ್ಯವೇನೆಂದರೆ ಉರಿಗೌಡ ಹಾಗೇ ನಂಜೇಗೌಡ ಎನ್ನುವವರ ಅಸ್ತಿತ್ವ ಇದೆ ಎನ್ನುವುದಕ್ಕೆ ಸಾಕ್ಷಿಗಳು ಕಡಿಮೆ. ಇವರಿಬ್ಬರು ಹೆಸರುಗಳು ನಾಟಕಗಳಲ್ಲಿ ಉಲ್ಲೇಖವಾಗಿದೆ ಎಂದು ಬಿಜೆಪಿ ಶಾಸಕರು ಸಮರ್ಥಿಸಿಕೊಂಡರೇ, ಬೇರೆ ಪಕ್ಷಗಳು ಇವರಿಬ್ಬರಿಗೆ ಅಸ್ತಿತ್ವವೇ ಇಲ್ಲ ಎಂಬುದಾಗಿ ಹೇಳಿಕೊಂಡಿವೆ. ಇದರ ಮಧ್ಯೆ ಈ ಫೋಟೋ ಯಾರದ್ದು, ಅವರಿಬ್ಬರು ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಹಾಗಿದ್ದರೆ ಬಿಜೆಪಿ ಬಳಸಿಕೊಂಡಿರುವ ಫೋಟೋ ಯಾರದ್ದು? ಇದರ ಹಿಂದಿನ ಇತಿಹಾಸವೇನು ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಹೀಗೆ. ಈ ವರೆಗೆ ಇವರಿಬ್ಬರನ್ನೂ ನೋಡಿದವರು ಯಾರಿಲ್ಲ. ಅಸಲಿಗೆ ಈ ಫೋಟೋಗಳು ಪಾಂಡಿಯಾರ್‌ ಸಹೋದರರದ್ದು ಎಂಬ ಸತ್ಯ ಈಗ ಬಯಲಾಗಿದೆ.

ಉರಿಗೌಡ ಹಾಗೂ ನಂಜೇಗೌಡ ಎಂಬ ಹೆಸರನ್ನಿಟ್ಟುಕೊಂಡು ಮೈಸೂರು ಭಾಗದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ಉಪಾಯ ಮಾಡಿತ್ತು. ಈ ಕಾರಣಕ್ಕೆ ಉರಿಗೌಡ, ನಂಜೇಗೌಡ ಎಂಬ ಹೆಸರನ್ನು ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಇಬ್ಬರ ಪ್ರತಿಮೆ ನಿರ್ಮಾಣ ಮಾಡೋದಿಕ್ಕೂ ಕೂಡ ಪಕ್ಷ ಸಿದ್ದವಾಗಿತ್ತು. ಇದೇ ವೇಳೆ ಇವರಿಬ್ಬರ ಬಗ್ಗೆ ಸಿನಿಮಾ ಮಾಡೋದಿಕ್ಕೂ ಕೂಡ ತಯಾರಿ ನಡೆಸಲಾಗಿತ್ತು. ಆದರೆ ಆದಿಚುಂಚನಗಿರಿ ಶ್ರೀಗಳ ಮಧ್ಯ ಪ್ರವೇಶದಿಂದಾಗಿ ಸಿನಿಮಾ ಉಪಾಯವನ್ನು ಕೈಬಿಡಲಾಯಿತು.

ಇದನ್ನೂ ಓದಿ : Amit Shah in Bangalore: ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಅಮಿತ್ ಶಾ ; ಸಂಚಾರ ಮಾರ್ಗದಲ್ಲಿ ಬದಲಾವಣೆ

ಒಟ್ಟಾರೆ ಹೇಳಬೇಕೆಂದರೆ ಅಭಿವೃದ್ದಿ ಮಾಡಿ ಮತಯುದ್ದ ನಡೆಸಬೇಕಿದ್ದ ಪಕ್ಷಗಳಿಗೆ ವಿವಾದಗಳೇ ಮುಖ್ಯವಾಗಿದೆ. ಉರಿಗೌಡ, ನಂಜೇಗೌಡ ಎಂಬ ಹೆಸರನ್ನು ಅಸ್ತ್ರವಾಗಿಸಿಕೊಂಡ ಬಿಜೆಪಿ ಇದೀಗ ಮೌನಕ್ಕೆ ಜಾರಿದೆ. ಒಟ್ಟಾರೆಯಾಗಿ ಪಕ್ಷಗಳ ಮತಯುದ್ದ, ಹೊಡೆದಾಟ ವಿವಾದಗಳಲ್ಲೇ ಮುಗಿಯುವಂತೆ ಕಾಣುತ್ತಿದೆ.

Secret behind the photo: Big twist to the Urigowda Nanjegowda story: The secret behind the photo is revealed

Comments are closed.