ಭಾನುವಾರ, ಏಪ್ರಿಲ್ 27, 2025
HomepoliticsMallikarjuna Kharge's political life :ಪಕ್ಷ ನಿಷ್ಠೆ, ಹುಟ್ಟು ಹೋರಾಟದ ಗುಣಗಳು : ಗಾಂಧಿ ಕುಟುಂಬದ...

Mallikarjuna Kharge’s political life :ಪಕ್ಷ ನಿಷ್ಠೆ, ಹುಟ್ಟು ಹೋರಾಟದ ಗುಣಗಳು : ಗಾಂಧಿ ಕುಟುಂಬದ ಮನಗೆದ್ದಿದ್ದು ಮಲ್ಲಿಕಾರ್ಜುನ ಖರ್ಗೆಯ ಈ ಗುಣಗಳು

- Advertisement -

Mallikarjuna Kharge’s political life : ಕಾಂಗ್ರೆಸ್​ ಪಾಳಯದಲ್ಲಿಂದು ಬರೋಬ್ಬರಿ 23 ವರ್ಷದ ಬಳಿಕ ಗಾಂಧಿಯೇತರ ಅಲೆಯೊಂದು ಬೀಸಿದೆ. ಕಾಂಗ್ರೆಸ್​ ಹಿರಿಯ ರಾಜಕಾರಣಿ ಹಾಗೂ ಸಂಸದ ಶಶಿ ತರೂರ್​ ನಡುವೆ ನಡೆದ ಪ್ರಬಲ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಇಂದು ಎಐಸಿಸಿ ಅಧ್ಯಕ್ಷನಾಗಿ ಜಯಭೇರಿ ಬಾರಿಸಿದ್ದಾರೆ. ಇಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಒಟ್ಟು 9500 ಮತಗಳಲ್ಲಿ ಮಲ್ಲಿಕಾರ್ಜುನ ಖರ್ಗೆ 7897 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎದುರಾಳಿ ಶಶಿ ತರೂರ್​ ಕೇವಲ 1072 ಮತಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದಾರೆ .


ಮಲ್ಲಿಕಾರ್ಜುನ ಖರ್ಗೆ ಅಧಿಕಾರದ ಆಸೆಗೆ ಕಾಂಗ್ರೆಸ್​ ಪಕ್ಷ ಸೇರಿದವರಲ್ಲ. ಕಾಂಗ್ರೆಸ್​ ಸಿದ್ಧಾಂತವನ್ನು ಅಪ್ಪಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಪಕ್ಷ ತನಗೆ ಸೂಕ್ತ ಸ್ಥಾನಮಾನ ನೀಡಲಿ , ಬಿಡಲಿ ಪಕ್ಷಕ್ಕೆ ತನ್ನ ನಿಷ್ಠೆಯನ್ನು ಎಂದಿಗೂ ಕಡಿಮೆ ಮಾಡಿದವರಲ್ಲ. ಬೇರೆ ಪಕ್ಷದಲ್ಲಿ ಅಧಿಕಾರ ಸಿಗುತ್ತೆ ಎಂಬ ಆಸೆಗೆ ಪಕ್ಷ ತೊರೆದ ವ್ಯಕ್ತಿಯೂ ಅಲ್ಲ. ಬರೋಬ್ಬರಿ ನಾಲ್ಕು ದಶಕಗಳ ಕಾಂಗ್ರೆಸ್​ಗಾಗಿ ಸೇವೆ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆಗೆ ಇಂದು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರಕಿದಂತಾಗಿದೆ.


ಕರ್ನಾಟಕದ ಅತ್ಯಂತ ಹಿರಿಯ ಕಾಂಗ್ರೆಸ್​ ರಾಜಕಾರಣಿ ಎನಿಸಿರುವ ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯ ರಾಜಕಾರಣದಲ್ಲಿ ಎಂದಿಗೂ ಹೇಳಿಕೊಳ್ಳುವಂತಹ ದೊಡ್ಡ ಪಟ್ಟ ಸಿಗಲೇ ಇಲ್ಲ. ದಲಿತ ಸಿಎಂ ಎಂಬ ಕೂಗು ಕೇಳಿ ಬಂದರೂ ಸಹ ಮಲ್ಲಿಕಾರ್ಜುನ ಖರ್ಗೆ ಪಾಲಿಗೆ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಎಂದಿಗೂ ಸಿಎಂ ಪಟ್ಟ ಎಂಬುದು ಒಲಿದು ಬರಲೇ ಇಲ್ಲ. ಹುಟ್ಟು ಹೋರಾಟಗಾರನಾದ ಮಲ್ಲಿಕಾರ್ಜುನ ಖರ್ಗೆ ಇಲ್ಲಿಯವರೆಗೆ ಶಾಸಕನಾಗಿ, ಸಚಿವನಾಗಿ ಹಾಗೂ ಕೇಂದ್ರದ ಸಂಪುಟದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.


ಮಪ್ಪಣ್ಣ ಖರ್ಗೆ ಹಾಗೂ ಸಾಬ್ವವ್ವ ದಂಪತಿಯ ಪುತ್ರ ಮಪ್ಪಣ್ಣ ಮಲ್ಲಿಕಾರ್ಜುನ ಖರ್ಗೆ 1942ರ ಜುಲೈ 12ರಂದು ಬೀದರ್​ ಜಿಲ್ಲೆಯ ವರವಟ್ಟಿಯಲ್ಲಿ ಜನಿಸಿದರು. ಗುಲ್ಬರ್ಗಾದಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಪದವಿಯನ್ನೂ ಪೂರೈಸಿದರು. ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗದ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದು ಬಳಿಕ ನ್ಯಾಯಮೂರ್ತಿ ಶಿವರಾಜ್​ ಪಾಟೀಲ್​ ಅಧೀನದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ವಕೀಲ ವೃತ್ತಿಯಿಂದ ಕ್ರಮೇಣವಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್​ ಇತಿಹಾಸದಲ್ಲಿ ಹೊಸ ಕತೆಯನ್ನು ಬರೆದಿದ್ದಾರೆ.


ಕಾಂಗ್ರೆಸ್​ ಪಕ್ಷದಲ್ಲಿ ಗುಲಾಂ ನಬಿ ಆಜಾದ್​ ಇದ್ದ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ಅವರಿಗೆ ಹೋಗುವುದು ಪಕ್ಕಾ ಆಗಿತ್ತು. ಆದರೆ ಪಕ್ಷದಲ್ಲಿ ತಮಗೆ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಗುಲಾಂ ನಬಿ ಆಜಾದ್​ ಕಾಂಗ್ರೆಸ್​ ಪಕ್ಷವನ್ನು ತೊರೆದರು. ಹೀಗಾಗಿ ಎಐಸಿಸಿ ಅಧ್ಯಕ್ಷಗಾದಿ ಮಲ್ಲಿಕಾರ್ಜುನ ಖರ್ಗೆ ಪಾಲಾಯಿತು. 80 ವರ್ಷ ಪ್ರಾಯದ ಮಲ್ಲಿಕಾರ್ಜುನ ಖರ್ಗೆ ಬರೋಬ್ಬರಿ ನಾಲ್ಕು ದಶಕಗಳ ಕಾಲ ಕಾಂಗ್ರೆಸ್​ ಪಾಳಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್​ನಿಂದ ಈ ಆಫರ್​ ಬರುವ ಸಂದರ್ಭದಲ್ಲಿ ರಾಜ್ಯಸಭೆಯ ಪ್ರತಿಪಕ್ಷ ನಾಯಕನಾಗಿದ್ದ ಖರ್ಗೆ ಬಳಿಕ ತಮ್ಮ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಕಾಲೇಜು ದಿನಗಳಿಂದಲೂ ವಿದ್ಯಾರ್ಥಿ ಸಂಘಗಳಲ್ಲಿ ನಾಯಕನೆನಿಸಿದ್ದ ಮಲ್ಲಿಕಾರ್ಜುನ ಖರ್ಗೆ 1969ರಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಸ್ಪಷ್ಟ ನಿಲುವು ಹಾಗೂ ಸಿದ್ಧಾಂತಗಳನ್ನು ಹೊಂದಿದ್ದ ಖರ್ಗೆ ಬಹುಬೇಗನೇ ಕಾಂಗ್ರೆಸ್​ನ ಪ್ರಬಲ ನಾಯಕ ಎನಿಸಿದರು. ದಲಿತ ನಾಯಕಾಗಿದ್ದ ಮಲ್ಲಿಕಾರ್ಜುನ ಖರ್ಗೆ 1972 ರಿಂದ 2009ರವರೆಗೆ ರಾಜ್ಯ ವಿಧಾನಸಭೆಯಲ್ಲಿ ಸರಣಿ ಗೆಲುವು ದಾಖಲಿಸಿದ್ದಾರೆ. 2009ರಿಂದ 2019ರವರೆಗೆ ಲೋಕಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಉಮೇಶ್​ ಜಾಧವ್​​ ವಿರುದ್ಧ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. ಸೋಲಿರಲಿ – ಗೆಲುವಿರಲಿ ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಪಕ್ಷ ತೊರೆಯುವ ನಿರ್ಧಾರ ಮಾಡಿದವರಲ್ಲ. ಪಕ್ಷ ತನಗೆ ಸ್ಥಾನ ಮಾನ ಕೊಡಲಿ ಬಿಡಲಿ ಖರ್ಗೆ ಎಂದಿಗೂ ಸ್ವಪಕ್ಷದ ಬಗ್ಗೆ ಅಸಮಾಧಾನ ಹೊರ ಹಾಕಿದವರಲ್ಲ. ಈ ಎಲ್ಲಾ ಕಾರಣಗಳಿಂದ ಗಾಂಧಿ ಕುಟುಂಬದ ಮನಸ್ಸನ್ನು ಗೆದ್ದ ಮಲ್ಲಿಕಾರ್ಜುನ ಖರ್ಗೆ ಇಂದು ಎಐಸಿಸಿ ಅಧ್ಯಕ್ಷಗಾದಿಯನ್ನೇರಿದ್ದಾರೆ. ದೇಶದಲ್ಲಿ ಮುಳುಗುತ್ತಿರುವ ಹಡಗು ಎನಿಸಿರುವ ಕಾಂಗ್ರೆಸ್​​ ಪಕ್ಷವನ್ನು ಖರ್ಗೆ ಯಾವ ರೀತಿಯಲ್ಲಿ ಮೇಲಕ್ಕೆತ್ತುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ಓದಿ : Congress President Poll Results 2022:ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜಯಭೇರಿ

ಇದನ್ನೂ ಓದಿ : Woman Battling For Life : ಐವರು ಕಾಮುಕರಿಂದ ಮಹಿಳೆ ಮೇಲೆ ಸತತ 2 ದಿನ ಸಾಮೂಹಿಕ ಅತ್ಯಾಚಾರ

Senior Congress leader Mallikarjuna Kharge’s political life

RELATED ARTICLES

Most Popular