Woman Battling For Life : ಐವರು ಕಾಮುಕರಿಂದ ಮಹಿಳೆ ಮೇಲೆ ಸತತ 2 ದಿನ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶ : Woman Battling For Life: ದೆಹಲಿ ಮೂಲದ ಮಹಿಳೆಯನ್ನು ಅಪಹರಿಸಿದ ಐವರು ಕಾಮುಕರು ಸತತ 2 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವನ್ನೆಸಗಿದ ಅಮಾನವೀಯ ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯು ದೆಹಲಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಅತ್ಯಾಚಾರವೆಸಗಿದ ಬಳಿಕ ಮಹಿಳೆಯನ್ನು ಕಾಮುಕರು ಗೋಣಿಚೀಲದಲ್ಲಿ ಕೈ ಕಾಲನ್ನು ಕಟ್ಟಿ ರಸ್ತೆಯಲ್ಲಿ ಎಸೆದು ಹೋಗಿದ್ದರು ಎನ್ನಲಾಗಿದೆ.


ಸಹೋದರನ ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದ ಸಂತ್ರಸ್ತೆಯು ಬಳಿಕ ಗಾಜಿಯಾಬಾದ್​ನಿಂದ ಮರಳುತ್ತಿದ್ದಳು ಎಂದು ವರದಿಯಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅದೇ ಸ್ಥಳಕ್ಕೆ ಬಂದ ಐವರು ಕಾಮುಕರು ಆಕೆಯನ್ನು ಸ್ಕಾರ್ಪಿಯೋ ಕಾರಿನೊಳಗೆ ಎಳೆದುಕೊಂಡಿದ್ದಾರೆ ಹಾಗೂ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.


ಈ ಘಟನೆಯ ಬಗ್ಗೆ ವಿವರಣೆ ನೀಡಿದ ಗಾಜಿಯಾಬಾದ್​ ನಗರದ ಎಸ್ಪಿ ನಿಪುನ್​ ಅಗರ್ವಾಲ್​, ಅಕ್ಟೋಬರ್​ 18ರಂದು ನಂದಗ್ರಾಮ್​ ಪೊಲೀಸರಿಗೆ ಆಶ್ರಮ ರಸ್ತೆ ಬಳಿಯಲ್ಲಿ ಮಹಿಳೆಯೊಬ್ಬಳು ಮಲಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಕೆ ದೆಹಲಿಯ ನಿವಾಸಿಯಾಗಿದ್ದು, ನಂದಗ್ರಾಮದಲ್ಲಿರುವ ತನ್ನ ಸಹೋದರನ ನಿವಾಸಕ್ಕೆ ಆಗಮಿಸಿದ್ದಳು. ಆಕೆಯ ಸಹೋದರ ಆಕೆಯನ್ನು ಡ್ರಾಪ್​ ಮಾಡಿದ ಬಳಿಕ ಮಹಿಳೆಯಿದ್ದ ಸ್ಥಳಕ್ಕೆ ಬಂದ ಕಾಮುಕರು ಆಕೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಈ ಸಂಬಂಧ ಎಫ್​ಐಆರ್​ ಕೂಡ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತರ ಟ್ವಿಟರ್​ನಲ್ಲಿ ದೆಹಲಿ ಮಹಿಳಾ ಆಯೋದ ಅಧ್ಯಕ್ಷೆ ಸ್ವಾತಿ ಮಲಿವಾಲ್​ ವಿಡಿಯೋ ಶೇರ್​ ಮಾಡಿದ್ದು, ಗಾಜಿಯಾಬಾದ್​ ಪೊಲೀಸರಿಗೆ ಈ ಸಂಬಂಧ ನೋಟಿಸ್​ ನೀಡಿದ್ದಾಗಿ ಎಂದು ಮಾಹಿತಿ ನೀಡಿದ್ದಾರೆ. ಮಹಿಳೆಯ ಖಾಸಗಿ ಭಾಗಗಳಿಗೆ ಕಾಮುಕರು ರಾಡ್​ ತೂರಿಸಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ನೋಡಿದ ಸಂದರ್ಭದಲ್ಲಿ ಆಕೆಯ ಖಾಸಗಿ ಅಂಗದಲ್ಲಿ ರಾಡ್​ ತೂರಿಸಲಾಗಿತ್ತು ಎಂದು ಹೇಳಿದ್ದಾರೆ .

ಇದನ್ನು ಓದಿ : Third FIR registered :ಮುರುಘಾ ಶರಣರಿಗೆ ಮತ್ತೊಂದು ಆಘಾತ : ಗ್ರಾಮೀಣ ಠಾಣೆಯಲ್ಲಿ ಶ್ರೀಗಳ ವಿರುದ್ಧ ದಾಖಲಾಯ್ತು ಮೂರನೇ ಎಫ್​ಐಆರ್​

ಇದನ್ನೂ ಓದಿ : ಹೋಟ‌ಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

Ghaziabad Shocker: 38-Year-Old Woman Battling For Life After Being Gangraped, Tortured by 5 Men For 2 Days

Comments are closed.