siddaramaiah birthday rally :ಬೆಣ್ಣೆ ನಗರಿಯಲ್ಲಿ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ : ಭಾರಿ ಸಮಾರಂಭದ ಹಿಂದೆ ನೂರೆಂಟು ರಾಜಕೀಯ ಲೆಕ್ಕಾಚಾರ

ದಾವಣಗೆರೆ : siddaramaiah birthday rally :ವಿಪಕ್ಷಗಳು ಹಾಗೂ ಸ್ವಪಕ್ಷದ ವಿರೋಧಗಳ ನಡುವೆಯವೇ ಇಂದು ದಾವಣೆಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಜರಗುತ್ತಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 50 ಎಕರೆ ವ್ಯಾಪ್ತಿಯಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿದ್ದು 75ನೇ ವರ್ಷಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ಟಗರು ಜನ್ಮದಿನವನ್ನು ಇಂದು ಅದ್ಧೂರಿಯಾಗಿ ಆಚರಿಸೋಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ.

ಈ ಪ್ಲಾನ್​ ನಂದಲ್ಲ.ಇದರ ಹಿಂದೆ ಇರೋದು ಏನಿದ್ದರೂ ಬೆಂಬಲಿಗರು ಅನ್ನೋದು ಸಿದ್ದರಾಮಯ್ಯರ ಮಾತಾಗಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ರಂತೂ ವ್ಯಕ್ತಿ ಪೂಜೆ ಮಾಡಬೇಡಿ ಪಕ್ಷ ಪೂಜೆ ಮಾಡಿ ಎಂದು ಪದೇ ಪದೇ ಹೇಳ್ತಿದ್ದಾರೆ. ವಿಪಕ್ಷಗಳಂತೂ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯಗೆ ಇವೆಲ್ಲ ಬೇಕಿತ್ತಾ ಎಂದು ಪ್ರಶ್ನೆ ಮಾಡ್ತಿವೆ. ಹಾಗಾದ್ರೆ ಇಷ್ಟೆಲ್ಲ ವಿರೋಧಗಳ ನಡುವೆಯೂ ಯಾಕೆ ಈ ಸಿದ್ದರಾಮೋತ್ಸವವನ್ನು ಆಚರಿಸಲಾಗ್ತಿದೆ ಎಂಬ ಪ್ರಶ್ನೆ ಎದುರಾದಾಗ ಇದಕ್ಕೆ ಸಿಗುವ ಒಂದೇ ಉತ್ತರವೆಂದರೆ ಅದು ಸಿದ್ದು ರಾಜಕೀಯ ಲಾಭ..!

ಇನ್ನು ವಿಧಾನಸಭಾ ಚುನಾವಣೆ ಎದುರಾಗೋಕೆ ಹಲವಾರು ತಿಂಗಳು ಬಾಕಿ ಇದೆ.ಅಷ್ಟರಲ್ಲಾಗಲೇ ಕಾಂಗ್ರೆಸ್​ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ನಡುವೆ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಭಾರೀ ಪೈಪೋಟಿ ನಡೀತಾ ಇದೆ. ಹೀಗಾಗಿ ಹೈಕಮಾಂಡ್​ ಯಾರನ್ನು ಆಯ್ಕೆ ಮಾಡುತ್ತೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಈಗಾಗಲೇ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡ್ಬಿಟ್ಟಿದ್ದಾರೆ.ಹೀಗಾಗಿ ಶತಾಯ ಗತಾಯ ಮುಂದಿನ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದು ಬಿಟ್ಟರೆ ಕೊನೆಯ ಬಾರಿ ಸಿಎಂ ಆಗೋಣ ಎಂಬ ಲೆಕ್ಕಾಚಾರ ಸಿದ್ದುರದ್ದು.

ಆದರೆ ಹೈಕಮಾಂಡ್​ ತಲೆಯಲ್ಲಿ ಯಾರ ಹೆಸರಿದೆ ಅನ್ನೋದು ಇನ್ನೂ ನಿಗೂಢ. ಡಿ.ಕೆ ಶಿವಕುಮಾರ್ ಹಾಗೂ ಸಿದ್ರಾಮಯ್ಯ ಇಬ್ಬರೂ ಹೈಕಮಾಂಡ್​ಗೆ ಪ್ರಿಯರಾಗಿರೋದ್ರಿಂದ ಕಾಂಗ್ರೆಸ್​ ವರಿಷ್ಠರು ಯಾರ ಹೆಸರನ್ನು ಆಯ್ಕೆ ಮಾಡಿದರೂ ಆಶ್ಚರ್ಯವಿಲ್ಲ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮೇಕೆದಾಟು ಯೋಜನೆಯಲ್ಲಿ ಭಾರೀ ಪ್ರತಿಭಟನೆಯನ್ನು ಆಯೋಜಿಸುವ ಮೂಲಕ ಕೇವಲ ವಿಪಕ್ಷಗಳಿಗೆ ಮಾತ್ರವಲ್ಲದೇ ಹೈಕಮಾಂಡ್​ ಎದುರು ತನ್ನ ಬಲ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಆದರೆ ಸಿದ್ದರಾಮಯ್ಯಗೆ ಇಂತಹ ಅವಕಾಶ ಕೂಡಿ ಬಂದಿರಲಿಲ್ಲ. ಹೀಗಾಗಿ ಸಿದ್ದರಾಮೋತ್ಸವ ಹೆಸರಿನಲ್ಲಿ ಬೃಹತ್​ ಸಮಾವೇಶವನ್ನು ನಡೆಸುವ ಮೂಲಕ ಕಾಂಗ್ರೆಸ್​ ಕಾರ್ಯಕರ್ತರನ್ನು ಒಗ್ಗೂಡಿಸಿ ಕೇವಲ ವಿರೋಧ ಪಕ್ಷಗಳಿಗೆ ಅಷ್ಟೇ ಅಲ್ಲದೇ ತಾನು ಕೂಡ ಹೈಕಮಾಂಡ್​ ಎದುರಲ್ಲಿ ಬಲಿಷ್ಠನಂತೆ ಕಾಣಬೇಕು ಎನ್ನುವುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ.

ಧರ್ಮ ಸಂಘರ್ಷಗಳ ವಿಚಾರ ಬಂದಾಗ ಸಿದ್ದರಾಮಯ್ಯ ಈಗಾಗಲೇ ಅನೇಕ ಹಿಂದೂಗಳ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ನಿಷ್ಠೂರವಾದಿಯಾಗಿರುವ ಕುರುಬ ಸಮುದಾಯದ ನಾಯಕ ಎಷ್ಟೇ ಬಾರಿ ಮುಸ್ಲಿಂ ಸಮುದಾಯಗಳ ಪರವಾಗಿ ನಿಂತರೂ ಸಹ ಪಿಎಫ್​​ಐ ಹಾಗೂ ಎಸ್​ಡಿಪಿಐ ಸಮುದಾಯಗಳು ಸಿದ್ದರಾಮಯ್ಯರ ಈ ಮತವನ್ನು ಕಸಿದುಕೊಳ್ಳುವ ಎಲ್ಲಾ ಸಾಧ್ಯತೆ ಕೂಡ ಇದೆ.ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿಯೇ ಸೋಲಿನ ರುಚಿಯನ್ನು ಕಂಡಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ತನ್ನ ಶಕ್ತಿ ಏನೆಂದು ಸಾಬೀತು ಪಡಿಸುವುದು ಅತ್ಯಂತ ಅನಿವಾರ್ಯವಾಗಿರೋದ್ರಿಂದ ಈ ಮಹೋತ್ಸವ ಆಚರಿಸಲಾಗ್ತಿದೆ ಎನ್ನಲಾಗಿದೆ.

ರಾಹುಲ್​ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರೋದ್ರಿಂದ ಸಿದ್ದರಾಮಯ್ಯ ಬರ್ತಡೇ ನೆಪದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಎಲ್ಲಾ ರೀತಿಯಲ್ಲಿ ರಣತಂತ್ರವನ್ನು ಹೂಡಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​​ ನನ್ನ ಹೆಸರನ್ನು ಪರಿಗಣಿಸಿಬಿಟ್ಟರೆ ತನಗೆ ಕಾಂಗ್ರೆಸ್​ ಗೆದ್ದ ಬಳಿಕ ಸಿಎಂ ಗದ್ದುಗೆ ಸಿಗಲಿದೆ ಎಂಬ ರೀತಿಯಲ್ಲಿ ರಾಜಕೀಯ ಪವಾಡಕ್ಕೆ ಕಾಂಗ್ರೆಸ್​ ಟಗರು ಮುಂದಾಗಿರುವಂತೆ ಕಾಣ್ತಿದೆ .

ಇದನ್ನು ಓದಿ : Tirumala Tirupati Hundi Collection: ಜುಲೈ ತಿಂಗಳಲ್ಲಿ ಬರೋಬ್ಬರಿ 139.45 ಕೋಟಿ ಆದಾಯ ಗಳಿಸಿದ ತಿರುಮಲ ತಿರುಪತಿ ದೇವಸ್ಥಾನಗಳು

ಇದನ್ನೂ ಓದಿ : CM Basavaraj Bommai change : ರಾಜ್ಯದಲ್ಲಿ ಮತ್ತೆ ಬದಲಾಗ್ತಾರಾ ಸಿಎಂ ಬೊಮ್ಮಾಯಿ : ಕೇಶವಕೃಪಾ ಉಲ್ಲೇಖಿಸಿ ಭವಿಷ್ಯ ನುಡಿದ ಕಾಂಗ್ರೆಸ್

Siddaramaiah birthday rally at davanagere political beliefs

Comments are closed.