Siddaramaiah vs DK Sivakumar : ಗೆದ್ದ ಸಿದ್ದರಾಮಯ್ಯ ಬಿದ್ದ ಡಿ.ಕೆ.ಶಿವಕುಮಾರ್ : ಪರಿಷತ್ ಸದಸ್ಯರ ಆಯ್ಕೆಯಲ್ಲಿ ಕನಕಪುರ ಬಂಡೆಗೆ ಹಿನ್ನೆಡೆ

ಬೆಂಗಳೂರು : ನೊರೆಂಟು ಲೆಕ್ಕಾಚಾರಗಳ ಬಳಿಕ‌ ಕಾಂಗ್ರೆಸ್ ವಿಧಾನಪರಿಷತ್ ಗೆ ತಮ್ಮ ಎರಡು ಸದಸ್ಯರಿಗೆ ಟಿಕೇಟ್ ಘೋಷಿಸಿದೆ. ಆದರೆ ಈ ಎರಡೂ ಟಿಕೇಟ್ ಗಳು ಸಿದ್ಧು ಆಪ್ತರಿಗೆ ಸಿಕ್ಕಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿಯೇ ಕೇಳಿಬಂದಿದ್ದು, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸುತ್ತ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಸ್ಥಾನಕ್ಕೇರುವ ಕನಸಿನಲ್ಲಿದ್ದ ಡಿಕೆಶಿಗೆ (Siddaramaiah vs DK Sivakumar) ಇದು ತೀವ್ರ ಮುಖಭಂಗ ಎಂದೇ ಬಣ್ಣಿಸಲಾಗುತ್ತಿದೆ.

ಹೌದು ಕಾಂಗ್ರೆಸ್ ನ ಹಿರಿಯ ನಾಯಕ ಡಿಕೆಶಿಯವರ ಎಲ್ಲ ಲೆಕ್ಕಾಚಾರಗಳು ಉಲ್ಟಾ ಮಾಡುವಂತ ಬೆಳವಣಿಗೆಗಳು ಪಕ್ಷದಲ್ಲಿ ನಡೆಯುತ್ತಿವೆ. ವಿಧಾನ ಪರಿಷತ್ ಸ್ಥಾನಕ್ಕಾಗಿ ಡಿಕೆಶಿ ನಡೆಸಿದ್ದ ಎಲ್ಲ ಲಾಭಿಗಳು ವಿಫಲವಾಗಿದ್ದು, ಡಿಕೆಶಿಯವರ ಆಪ್ತ ಎಸ್.ಆರ್.ಪಾಟೀಲ್ ರನ್ನು ಕಡೆಗಣಿಸಿದ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸಿದ್ಧು ಆಪ್ತರಿಗೆ ಮಣೆ ಹಾಕಿದ್ದು, ಸದಾ ಪಕ್ಷ ಸಂಘಟನೆ ಹಾಗೂ ಪಕ್ಷದ ಪರ ವಕಾಲತ್ತಿಗೆ ನಿಲ್ಲುವ ವಾಕ್ ಚತುರ ಎಂ.ನಾಗರಾಜು ಯಾದವ್ ಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಬಿ ಫಾರ್ಂ ನೀಡಿದೆ.

ಇನ್ನುಳಿದ ಒಂದು ಸ್ಥಾನಕ್ಕೆ ಮೊದಲೇ‌ ನಿಗದಿಯಾದಂತೆ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದು, ಜಬ್ಬಾರ್ ಟ್ರಾವೆಲ್ಸ್ ಮಾಲೀಕ ಹಾಗೂ ಉದ್ಯಮಿ ಅಬ್ದುಲ್‌ ಜಬ್ಬಾರ್ ಯಶಸ್ವಿ ಎರಡನೇ ಭಾರಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಆದರೆ ಈ ಆಯ್ಕೆಗಳಲ್ಲಿ ಕಾಂಗ್ರೆಸ್ ನಿಷ್ಠರಿಗೆ ಸ್ಥಾನ ಸಿಕ್ಕಿದೆ ಎಂಬ ಅಂಶ ನಿಜವಾದರೂ ಈ ಆಯ್ಕೆಯಲ್ಲಿ ಕೇವಲ ಸಿದ್ಧರಾಮಯ್ಯನವರ ಶಿಫಾರಸ್ಸಿನವರಿಗೆ ಸ್ಥಾನ ನೀಡಲಾಗಿದೆ ಎಂಬುದು ಅಷ್ಟೇ ಸತ್ಯ.

ಇತ್ತೀಚಿಗಷ್ಟೇ ಎಸ್ .ಆರ್.ಪಾಟೀಲ್ ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳಿಗಾಗಿ ಟ್ರ್ಯಾಕ್ಟರ್ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇಂತಿಪ್ಪ ಎಸ್.ಆರ್.ಪಾಟೀಲ್ ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಡಿಕೆಶಿ ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ‌ಜನರ ವಿಶ್ವಾಸ, ಚುನಾವಣೆ ಬಳಿಕ ಉತ್ತರ ಕರ್ನಾಟಕ ಭಾಗದ ಎಮ್ ಎಲ್ ಎ ಗಳ ಬೆಂಬಲ ಪಡೆಯುವುದು ಸೇರಿದಂತೆ ಹಲವು ಕಾರಣಕ್ಕೆ ಎಸ್.ಆರ್.ಪಾಟೀಲ್ ರನ್ನು ಬೆಂಬಲಿಸಿದ್ದರು.

ಆದರೆ ಕೊನೆ ಕ್ಷಣದಲ್ಲಿ ಹೈಕಮಾಂಡ್ ಮನಸ್ಸು ಬದಲಾಯಿಸಿ ಯಾದವ ಸಮುದಾಯದ ನಾಗರಾಜ್ ಯಾದವ್ ಹಾಗೂ ಅಲ್ಪಸಂಖ್ಯಾತ ನಾಯಕ ಅಬ್ದುಲ್ ಜಬ್ಬಾರ್ ಗೆ ಟಿಕೇಟ್ ನೀಡಿದೆ. ಇದು ವೈಯಕ್ತಿಕವಾಗಿ ಡಿಕೆಶಿಗೆ ಸೋಲು ಎಂದೇ ಬಣ್ಣಿಸಲಾಗುತ್ತಿದ್ದು, ಸ್ವತಃ ಡಿಕೆಶಿ ಕೂಡ ಇದರಿಂದ‌ ಕೊಂಚ ವಿಚಲಿತರಾಗಿದ್ದಾರಂತೆ. ನಿನ್ನೆ ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ನಾಯಕ ಡಿಕೆಶಿಗೆ ಈ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿಯೇ ದೆಹಲಿಯಲ್ಲಿ ಹತಾಶೆಯಿಂದ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ಡಿ.ಕೆ.ಶಿವಕುಮಾರ್ ನಾವು ಮಾಡಿದ ಅಡುಗೆಯನ್ನು ಯಾರೋ ಉಂಡು ಹೋಗುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದರು.

ಇದನ್ನೂ ಓದಿ : ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ Or ಪುನಾರಚನೆ : ಗ್ರೀನ್ ಸಿಗ್ನಲ್ ನಿರಾಕರಿಸಿದ BJP ಹೈಕಮಾಂಡ್

ಇದನ್ನೂ ಓದಿ : ಬಿಜೆಪಿಯಿಂದ ಎಂಎಲ್​ಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ವಿಜಯೇಂದ್ರಗೆ ಭಾರಿ ನಿರಾಸೆ

Karnataka MLC ELECTION 2022 Siddaramaiah vs DK Sivakumar

Comments are closed.