Kedarnath Yatra Suspended : ಮಿತಿಮೀರಿದ ವರುಣನ ಕಾಟ : ಕೇದಾರನಾಥ ಯಾತ್ರೆಗೆ ತಾತ್ಕಾಲಿಕ ಬ್ರೇಕ್​

Kedarnath Yatra Suspended :ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರುದ್ರಪ್ರಯಾಗ ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ಕೇದಾರನಾಥ ಯಾತ್ರೆಗೆ ತಾತ್ಕಾಲಿಕ ಬ್ರೇಕ್​ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ಸುರಿಯುತ್ತಿರುವ ಮಳೆಯು ಕೇದಾರನಾಥ ಯಾತ್ರೆ ಕೈಗೊಂಡವರಿಗೂ ಸಂಕಷ್ಟ ತಂದೊಡ್ಡಿದೆ. ಈಗಾಗಲೇ ಕೇದಾರನಾಥ ಯಾತ್ರೆ ಕೈಗೊಂಡಿರುವ ಭಕ್ತಾದಿಗಳನ್ನು ಗೌರಿಕುಂದ್​ ಹಾಗೂ ಕೇದಾರನಾಥದ ವಿವಿಧ ಶಿಬಿರಗಳಲ್ಲಿ ಇರಿಸಲಾಗಿದೆ.


ಸೋಮವಾರ ಬೆಳಗ್ಗಿನ ಜಾವ ಕೇದಾರನಾಥದಲ್ಲಿರುವ ಶಿವನ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದ ಬಳಿಕ ಭಕ್ತಾದಿಗಳು ಹಿಂದಿರುಗುವ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಭಕ್ತಾದಿಗಳನ್ನು ವಿವಿಧ ಶಿಬಿರಗಳಲ್ಲಿ ಇರಿಸಿದ್ದೇವೆ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


2013ರಲ್ಲಿ ನಡೆದ ಕೇದಾರನಾಥ ದುರಂತದ ಬಳಿಕ ಜಾಗೃತವಾಗಿರುವ ರುದ್ರಪ್ರಯಾಗ ಜಿಲ್ಲಾಡಳಿತವು ಯಾತ್ರಾರ್ಥಿಗಳಿಗೆ ಹವಾಮಾನ ತಿಳಿಯಾಗುವವರೆಗೆ ನಿಯೋಜನೆಯಾಗಿರುವ ಶಿಬಿರಗಳಲ್ಲಿಯೇ ಇರುವಂತೆ ಮನವಿ ಮಾಡಿದೆ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ಹೇಳಿದ್ದಾರೆ.


ಇದರ ಜೊತೆಯಲ್ಲಿ ಗೌರಿ ಕುಂದ್​​ನ ಮೂಲ ಶಿಬಿರದಿಂದ ಕೇದಾರನಾಥಕ್ಕೆ ತೆರಳಲು ಸಿದ್ಧವಾಗಿರುವ ಜನರನ್ನು ದೇಗುಲಕ್ಕೆ ಮುಂದಿನ ಪ್ರಯಾಣ ಕೈಗೊಳ್ಳುವುದಕ್ಕೆ ತಡೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇಲ್ಲಿಯವರೆಗೆ ಮಳೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಮುಂದೆಯೂ ಇಂತಹ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ : BY Vijayendra : ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಗೆ ನೊರೆಂಟು ವಿಘ್ನ : ಬೇರೆಯದೇ ಲೆಕ್ಕಾಚಾರದಲ್ಲಿದೆ ಹೈಕಮಾಂಡ್

ಇದನ್ನೂ ಓದಿ : Heavy Rain Yellow Alert : ತಮಿಳುನಾಡಲ್ಲಿ ಮೇಲ್ಮೈ ಸುಳಿಗಾಳಿ ಕರ್ನಾಟಕದಲ್ಲಿ ಬಾರೀ ಮಳೆ : ಉಡುಪಿ, ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌

Kedarnath Yatra Suspended Amid Heavy Rains In Uttarakhand: Officials

Comments are closed.