ಮಂಗಳವಾರ, ಏಪ್ರಿಲ್ 29, 2025
HomepoliticsBJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್...

BJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

- Advertisement -

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೂ ಒಂದೂವರೆ ವರ್ಷ ಇರುವಾಗಲೇ ರಾಜಕೀಯ ರಣಾಂಗಣ ರಂಗೇರಲಾರಂಭಿಸಿದ್ದು ಸದಾ ಬಿಜೆಪಿಯನ್ನು‌ ಕುಟುಕುವ ಸಿದ್ಧರಾಮಯ್ಯ ನವರ ವಿರುದ್ಧ ಬಿಜೆಪಿ ಟ್ವೀಟ್ ಅಸ್ತ್ರ ಪ್ರಯೋಗಿಸಿದೆ. ವಲಸೆ ರಾಮಯ್ಯ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸರಣಿ ಟ್ವೀಟ್ ಮೂಲಕ ಬಿಜೆಪಿ ಸಿದ್ಧರಾಮಯ್ಯನವರನ್ನು (BJP vs Siddaramaiah ) ತರಾಟೆಗೆ ತೆಗೆದುಕೊಂಡಿದ್ದು ಈ ಭಾರಿ ನಿಮ್ಮದು ಕ್ಷೇತ್ರಾಂತರವೋ ? ಮತಾಂತರವೋ ಎಂದು ಪ್ರಶ್ನಿಸಿದೆ.

ನನಗೆ ಐದಾರು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲು ಆಹ್ವಾನ‌ಬರುತ್ತಿದೆ ಎಂಬ ಸಿದ್ಧರಾಮಯ್ಯ ಹೇಳಿಕೆಯನ್ನು ಲೇವಡಿ ಮಾಡಿರುವ ಬಿಜೆಪಿ ಈ ಭಾರಿ ಬರಿ ಕ್ಷೇತ್ರಾಂತರವೋ ಅಥವಾ ಪಕ್ಷಾಂತರವೋ ಎಂದು ಪ್ರಶ್ನೆ ಮಾಡಿದೆ. ಮಾತ್ರವಲ್ಲ ನಿಮ್ಮ ಆಪ್ತರು ಸಮಾಜವಾದಿ ಹಾಗೂ ಆಪ್ ಪಕ್ಷದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೇ ನೀವು ಪಕ್ಷಾಂತರಕ್ಕೆ ಸಿದ್ಧವಾಗುವಂತೆ ತೋರುತ್ತಿದೆ ಎಂದಿದೆ.

ನಮ್ಮ ಸಂಪರ್ಕದಲ್ಲಿ ಆ ಪಕ್ಷದವರು ಇದ್ದಾರೆ.‌ಈ ಪಕ್ಷದವರು ಇದ್ದಾರೆ ಎಂದು ನೀವು ಕೆಲ ದಿನಗಳಿಂದ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ನೋಡಿದರೇ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಸಿದ್ಧರಾಮಯ್ಯನವರೇ ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ ಎಂದು ಬಿಜೆಪಿ ಪ್ರಶ್ನಿಸಿದೆ‌. ನಿಮ್ಮ ಆಪ್ತರು ಸಮಾಜವಾದಿ ಹಾಗೂ ಆಪ್ ಮುಖಂಡರನ್ನು ಭೇಟಿ ಮಾಡಿದ್ದು ಅಕಸ್ಮಿಕವಲ್ಲ. ಇದೊಂದು ವ್ಯವಸ್ಥಿತ ನಡೆ.ಉತ್ತರ ಪ್ರದೇಶ ಚುನಾವಣೆ ಬಳಿಕ ಕರ್ನಾಟಕದಲ್ಲೂ ಇದರ ಪ್ರತಿಫಲನ‌ ಕಾಣಬಹುದೇ ಎಂದು ಬಿಜೆಪಿ ಕುಟುಕಿದೆ.

ಇತ್ತೀಚಿಗೆ ಬಾದಾಮಿಗೆ ಭೇಟಿ ನೀಡಿದ್ದ ಸಿದ್ಧರಾಮಯ್ಯ ಆ ವೇಳೆ ನನಗೆ ಐದಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಒತ್ತಡ ಇದೆ. ಆದರೆ ಸದ್ಯಕ್ಕೆ ಆ ಬಗ್ಗೆ ತೀರ್ಮಾನ ಮಾಡಿಲ್ಲ ಎಂದಿದ್ದರು. ಅಲ್ಲದೇ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ಧರಾಮಯ್ಯ ಆಪ್ತ ಸಿ.ಎಂ.ಇಬ್ರಾಹಿಂ ಹೆಸರು ಮುಂಚೂಣಿಯಲ್ಲಿದ್ದು ಸ್ವತಃ ಇಬ್ರಾಹಿಂ‌ತಾವು ನಾಯಕ ಸ್ಥಾನದ ಆಕಾಂಕ್ಷಿ ಎಂದಿದ್ದರು. ಆದರೆ ಈಗ ಪ್ರತಿ ಪಕ್ಷ ನಾಯಕ ಸ್ಥಾನ ಬಿ.ಕೆ.ಹರಿಪ್ರಸಾದ್ ಪಾಲಾದ ಹಿನ್ನೆಲೆಯಲ್ಲಿ ಸಿ.ಎಂ.ಇಬ್ರಾಹಿಂ ಸಿದ್ಧು ಹಾಗೂ ಕಾಂಗ್ರೆಸ್ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಅಲ್ಲದೇ ಸಿ.ಎಂ.ಇಬ್ರಾಹಿಂ ಬಹಿರಂಗವಾಗಿ ಸಿದ್ಧರಾಮಯ್ಯನವರ ವಿರುದ್ಧವೇ ಅಸಮಧಾನ ವ್ಯಕ್ತಪಡಿಸುವ ಮೂಲಕ ಸಿದ್ಧು ಗೆ ಮುಜುಗರ ತಂದಿದ್ದಾರೆ. ಈ ಮಧ್ಯೆ ಸಿ.ಎಂ.ಇಬ್ರಾಹಿಂ ಸಮಾಜವಾದಿ ನಾಯಕರನ್ನು ಭೇಟಿ‌ ಮಾಡಿದ್ದಾರೆ ಎನ್ನಲಾಗಿದ್ದು ಇದಕ್ಕೆ ಬಿಜೆಪಿ ಸಿದ್ಧು ಪ್ರೇರಣೆ ಎಂಬರ್ಥದಲ್ಲಿ ಟ್ವೀಟ್ ವಾರ್‌ ಮಾಡಿದೆ.

ಇದನ್ನೂ ಓದಿ : ಮತ್ತೆ ಸದ್ದು ಮಾಡ್ತಿದೆ ಬೆಳಗಾವಿ ಪಾಲಿಟಿಕ್ಸ್ : ಸಾಹುಕಾರ ಸಹೋದರರ ಬಿಟ್ಟು ನಡೀತು ಮೀಟಿಂಗ್

ಇದನ್ನೂ ಓದಿ : ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ: ಸರ್ಕಾರದ ವಿರುದ್ಧ ಮಾಜಿ ಕಾರ್ಪೋರೇಟರ್ ಶಿವರಾಜ್ ದೂರು

(Siddaramaiah was renamed valase ramaiah,BJP vs Siddaramaiah tweet war)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular