ಭಾನುವಾರ, ಏಪ್ರಿಲ್ 27, 2025
HomepoliticsSiddaramaiah : ಸತ್ತವರ ಪರ ಹೋರಾಟ ಮಾಡಿದರೆ ಸಣ್ಣ ವಿಚಾರವೇ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

Siddaramaiah : ಸತ್ತವರ ಪರ ಹೋರಾಟ ಮಾಡಿದರೆ ಸಣ್ಣ ವಿಚಾರವೇ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

- Advertisement -

ಚಾಮರಾಜನಗರ : Siddaramaiah : ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್​ ಪರಸ್ಪರ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿದೆ. ಚಾಮರಾಜನಗರದಲ್ಲಿ ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಯ ಎಲ್ಲಾ ಆರೋಪಗಳಿಗೆ ಟಾಂಗ್​ ನೀಡಿದರು.


ಸಣ್ಣ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್​​ ಹೋರಾಟ ಮಾಡುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿಕೆ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದರೆ ಅದು ಸಣ್ಣ ವಿಚಾರವೇ..?ಶಿವಮೊಗ್ಗದಲ್ಲಿ ಹರ್ಷ ಶವ ಇಟ್ಟುಕೊಂಡು ನಿಷೇದಾಜ್ಞೆ ಇದ್ದಾಗಲೂ ಶವಯಾತ್ರೆ ಮಾಡಿದ್ರು‌.ಬೆಳ್ತಂಗಡಿಯಲ್ಲಿ ದಿನೇಶ್ ಸತ್ತಾಗ ಅವನಿಗೆ ಯಾಕೆ ಪಾದಯಾತ್ರೆ ಮಾಡಲಿಲ್ಲ?ನರಗುಂದ ಮುಸ್ಲಿಂ ವ್ಯಕ್ತಿ ಸತ್ತಾಗ ಯಾಕೇ ಪಾದಯಾತ್ರೆ ಮಾಡಲಿಲ್ಲ? ಮಾತೆತ್ತಿದ್ದರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ. ಹರ್ಷನಿಗೆ 25 ಲಕ್ಷ ರೂಪಾಯಿ ಕೊಟ್ಟರು. ಆದರೆ ದಿನೇಶ್​ ಕುಟುಂಬಕ್ಕೆ ಏಕೆ ಪರಿಹಾರ ಕೊಡಲಿಲ್ಲ..?ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಲು ಶುರುಮಾಡಿದ್ದಾರೆ.ಜನರ ಮಧ್ಯ ಬೆಂಕಿ ಹಚ್ಚಲು ಶುರು ಮಾಡಿದ್ದಾರೆ.ಬೆಲೆ ಏರಿಕೆ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿ‌ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.


ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಗಲಾಟೆಗೆ ಕಾಂಗ್ರೆಸ್​ ಕಾರಣ ಎಂಬ ಬಿಜೆಪಿ ಪೋಸ್ಟ್​ಗೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಹುಬ್ಬಳ್ಳಿಯಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ಜೈಲಿಗೆ ಸೇರಿದವನು ಒಬ್ಬ ಭಜರಂಗದಳ ಕಾರ್ಯಕರ್ತ.ಗಲಾಟೆ ಹುಟ್ಟಕ್ಕಿದ್ದು ಭಜರಂಗದಳವನು.ಈಗ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ತನ್ನ ತಪ್ಪು ಹಾಗೂ ಭ್ರಷ್ಟಾಚಾರ ಪ್ರಕರಣಗಳು ಹೊರ ಬರುತ್ತೆ ಅಂದಾಗ ಬಿಜೆಪಿ ಕಾಂಗ್ರೆಸ್​ ಮೇಲೆ ಆರೋಪ ಹೊರಿಸುತ್ತದೆ. ಈಶ್ವರಪ್ಪ ಹಾಗೂ ಜಾರಕಿಹೊಳಿ ರಾಜೀನಾಮೆ ಕೊಟ್ಟರು. ಇವರು ನಮ್ಮ ಪಕ್ಷದವರಾ..? ಇವುಗಳನ್ನೆಲ್ಲ ಮುಚ್ಚಿಕೊಳ್ಳಲು ಬಿಜೆಪಿ ಕಾಂಗ್ರೆಸ್​ ಮೇಲೆ ಆರೋಪ ಹೊರಿಸುತ್ತಿದೆ ಎಂದು ಹೇಳಿದರು.

ಇದನ್ನು ಓದಿ : UPSC, ESIC, BOB, SBI JOBS : ಸರಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿಗೆ ಸುವರ್ಣಾವಕಾಶ

ಇದನ್ನೂ ಓದಿ : basanagowda patil yatnal : ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್​

Siddaramaiah’s outrage against BJP

RELATED ARTICLES

Most Popular