ಸೋಮವಾರ, ಏಪ್ರಿಲ್ 28, 2025
HomepoliticsSuraj Revanna : ದೊಡ್ಡಗೌಡರ ಸೇನೆಗೆ ಮತ್ತೊಬ್ಬ ಸೇನಾಧಿಪತಿ: ಮೊಮ್ಮಗನನ್ನು ರಾಜಕೀಯಕ್ಕೆ ತರಲು ನಡೆದಿದೆ ಸಿದ್ಧತೆ

Suraj Revanna : ದೊಡ್ಡಗೌಡರ ಸೇನೆಗೆ ಮತ್ತೊಬ್ಬ ಸೇನಾಧಿಪತಿ: ಮೊಮ್ಮಗನನ್ನು ರಾಜಕೀಯಕ್ಕೆ ತರಲು ನಡೆದಿದೆ ಸಿದ್ಧತೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಘೋಷಣೆಯಾಗಿರುವ ವಿಧಾನಪರಿಷತ್ ಸ್ಥಾನಗಳ ಚುನಾವಣೆ ಮತ್ತೆ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಮುನ್ನುಡಿ ಬರೆದಿದ್ದು, ಜೆಡಿಎಸ್ ನಿಂದ ಗೌಡ್ರ ಕುಟುಂಬದ ಮತ್ತೊಂದು ಕುಡಿ ಸೂರಜ್ ರೇವಣ್ಣ (Suraj Revanna) ರಾಜಕಾರಣಕ್ಕೆ ಎಂಟ್ರಿಕೊಡೋದು ಬಹುತೇಕ ಖಚಿತ ಎನ್ನಲಾಗ್ತಿದೆ. ರಾಜ್ಯದಲ್ಲಿ ಉಪಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಪರಿಷತ್ ಚುನಾವಣೆ ರಂಗೇರಿದೆ. ಮೂರು ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಮತ್ತು ಅವರನ್ನು ಗೆಲ್ಲಿಸಿಕೊಳ್ಳುವ ರಣತಂತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಜೆಡಿಎಸ್ ಕೂಡ ರಣತಂತ್ರ ರೂಪಿಸುವಲ್ಲಿ ಯಶಸ್ವಿಯಾಗಿದ್ದು ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯ ಪ್ರವೇಶಕ್ಕೆ ಸಿದ್ಧವಾಗಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಹಿರಿಯ ಪುತ್ರ ಸೂರಜ್ ರೇವಣ್ಣ ವಿಧಾನಪರಿಷತ್ ಗೆ ಆಯ್ಕೆ ಬಳಸಿದ್ದಾರೆ ಎನ್ನಲಾಗಿದೆ. ಪುತ್ರನನ್ನು ಆಯ್ಕೆ ಮಾಡಲು ಎಚ್.ಡಿ.ರೇವಣ್ಣ ಸರ್ಕಸ್ ಆರಂಭಿಸಿದ್ದಾರೆ. ಈಗಾಗಲೇ ಈ ಕುರಿತು ರೇವಣ್ಣ ಹಾಸನದ ಜೆಡಿಎಸ್ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಎಲ್ಲರ ಒಪ್ಪಿಗೆ ಪಡೆದಿದ್ದಾರಂತೆ.

ಈಗ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ರೇವಣ್ಣ ಪುತ್ರನ ಹೆಸರನ್ನು ಅಂತಿಮಗೊಳಿಸಿ ಜೆಡಿಎಸ್ ವರಿಷ್ಠ ರಿಗೆ ಕಳುಹಿಸಲಿದ್ದಾರಂತೆ. ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ್ ಹಾಗೂ ಪುತ್ರ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಈ ಪ್ರಸ್ತಾಪವನ್ನು ಅಂತಿಮಗೊಳಿಸಲಿದ್ದಾರಂತೆ. ಹಾಸನದಲ್ಲಿ ದಿನೇ ದಿನೇ ಬಿಜೆಪಿ ತನ್ನ ಬಲ ವೃದ್ಧಿಸಿಕೊಳ್ಳುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪರಿಷತ್ ಅಭ್ಯರ್ಥಿ ನಮ್ಮ ಕುಟುಂಬದವರೇ ಆದರೆ ಸರಿ ಎಂಬುದು ದೇವೇಗೌಡರ ಚಿಂತನೆ ಎನ್ನಲಾಗುತ್ತಿದೆ. ಹಿಂದಿನ ಭಾರಿ ಪಟೇಲ್ ಶಿವರಾಂ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ನ ಗೋಪಾಲಸ್ವಾಮಿ ಎದುರು ಜೆಡಿಎಸ್ ಸೋತಿತ್ತು.

ಹೀಗಾಗಿ ಈ ಭಾರಿ ಗೌಡ್ರ ಮೊಮ್ಮಗನನ್ನೇ ನಿಲ್ಲಿಸಲು ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಪ್ಲ್ಯಾನ್ ಮಾಡಿದ್ದಾರಂತೆ. ವೃತ್ತಿಯಲ್ಲಿ ವೈದ್ಯರಾಗಿರೋ ಡಾ.ಸೂರಜ್ ರೇವಣ್ಣ ಕೂಡ ಈ ಪ್ರಸ್ತಾಪ ಒಪ್ಪಿಕೊಂಡಿದ್ದಾರಂತೆ. ರೇವಣ್ಣ ಎರಡನೇ ಪುತ್ರ ಪ್ರಜ್ವಲ್ ರೇವಣ್ಣ ಕೂಡ ರಾಜಕೀಯದಲ್ಲಿ ಬೆಳೆಯುತ್ತಿದ್ದು ಯುವಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗ ಎರಡನೇ ಕುಡಿಯನ್ನು ರಾಜಕೀಯ ಕ್ಕೆ ತರಲು ಗೌಡರ ಕುಟುಂಬ ತೆರೆಮರೆಯ ಕಸರತ್ತು ಆರಂಭಿಸಿದೆ.

ಇನ್ನೊಂದೆಡೆ ಈಗಾಗಲೇ ತಮ್ಮ ಕುಟುಂಬಕ್ಕೆ ಕುಟುಂಬ ರಾಜಕಾರಣದ ಟ್ಯಾಗ್ ತಗುಲಿದೆ. ಈ ನಿರ್ಧಾರದಿಂದ ಇನ್ನಷ್ಟು ಟೀಕೆ ವಿರೋಧ ವ್ಯಕ್ತವಾಗೋ ಸಾಧ್ಯತೆ ಕೂಡ ಇರೋದರಿಂದ ದೇವೇಗೌಡರು ಇದಕ್ಕಾಗಿ ಪ್ಲ್ಯಾನ್ ಬಿ ಕೂಡ ಸಿದ್ಧಪಡಿಸಿದ್ದಾರಂತೆ.

ಇದನ್ನೂ ಓದಿ : MLA’s son dies : ಗುಂಡು ಹಾರಿಸಿಕೊಂಡು ಕಾಂಗ್ರೆಸ್‌ ಶಾಸಕರ ಪುತ್ರ ಆತ್ಮಹತ್ಯೆ

ಇದನ್ನೂ ಓದಿ : Bitcoin ಕೇಸಲ್ಲಿ ಬಿಜೆಪಿ ನಾಯಕರ ವಿರುದ್ದ ಮುನಿಸು : ಮೋದಿ, ಅಮಿತ್‌ ಶಾಗೆ ದೂರು ಕೊಟ್ಟ ಸಿಎಂ ಬೊಮ್ಮಾಯಿ

( Suraj Revanna, Grandson of former Prime Minister HD Deve Gowda, who is preparing to enter politics through the MLC elections )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular