Rehnuma Bhati : ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ರಾಜೀವ್‌ ಶುಕ್ಲ ವಿರುದ್ದ ಲೈಂಗಿಕ ಕಿರುಕುಳ ದೂರು ದಾಖಲು

ನವದೆಹಲಿ : ಭಾರತ ಕ್ರಿಕೆಟ್‌ ತಂಡ ಖ್ಯಾತ ಆಟಗಾರ ಹಾರ್ದಿಕ್‌ ಪಾಂಡ್ಯ, ಮುನಾಫ್‌ ಪಟೇಲ್‌ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ರಾಜೀಶ್‌ ಶುಕ್ಲ ವಿರುದ್ದ ಇದೀಗ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಈ ಕುರಿತು ರೆಹನುಮಾ ಭಾಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಾಯಕನಾಗಿರುವ ರಿಯಾಜ್ ಭಾಟಿ ಪತ್ನಿರೆಹನುಮಾ ಭಾಟಿ (Rehnuma Bhati) ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಪತಿ ಅತ್ಯಾಚಾರ ಮತ್ತು ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ನಡೆಸುತ್ತಿದ್ದಾರೆ. ತನ್ನ ಪತಿ ರಿಯಾಜ್ ಭಾಟಿ ತನ್ನ ವ್ಯವಹಾರಕ್ಕಾಗಿಉನ್ನತ ವ್ಯಕ್ತಿಗಳ ಜೊತೆಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆ ನೀಡಿರುವ ದೂರಿನಲ್ಲಿ ಖ್ಯಾತ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಮುನಾಫ್ ಪಟೇಲ್, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ವಿರುದ್ದ ಗಂಭೀರವಾದ ಆರೋಪ ಮಾಡಿದ್ದು, ದೂರಿನಲ್ಲಿ ಈ ಮೂವರ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ ತನ್ನ ಮೇಲೆ ಅತ್ಯಾಚಾರ ನಡೆದಿರುವ ಪ್ರದೇಶ ಹಾಗೂ ಸಮಯದ ಕುರಿತು ರೆಹನುಮಾ ಭಾಟಿ ಉಲ್ಲೇಖ ಮಾಡಿಲ್ಲ. ಮಾಧ್ಯಮದವರೊಂದಿಗೆ ಮಾತನಾಡುವ ವೇಳೆಯಲ್ಲಿಯೂ ಕೂಡ ಈ ಮೂವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಮುಂಬೈ ಪೊಲೀಸರಿಗೆ ಅವರು ಸಲ್ಲಿಸಿದ ಅರ್ಜಿಯಲ್ಲಿ ಪೃಥ್ವಿರಾಜ್ ಕೊಠಾರಿಗೆ ಯಾವುದೇ ವಿವರಣೆಯನ್ನು ನಮೂದಿಸಿಲ್ಲವಾದರೂ, ದಿ ಪ್ರಿಂಟ್‌ನೊಂದಿಗೆ ಮಾತನಾಡುವಾಗ ರೆಹಮುನಾ ಅವರು ಅರ್ಜಿಯಲ್ಲಿ ಅವರನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ನಾನು ಸಪ್ಟೆಂಬರ್‌ ತಿಂಗಳಿನಲ್ಲಿಯೇ ದೂರು ನೀಡಿದ್ದೇನೆ. ಇದೀಗ ನವೆಂಬರ್‌ ತಿಂಗಳು ಕಳೆದಿದೆ. ಆದರೆ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಲ್ಲ. ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹಣ ಬೇಡಿಕೆಯಿಟ್ಟಿದ್ದಾರೆ ಎಂದು ಕೂಡ ರೆಹನುಮಾ ಭಾಟಿ ಆರೋಪ ಮಾಡಿರುವ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ರಿಯಾಜ್ ಭಾಟಿ ಅವರ ಪತ್ನಿ ಸಲ್ಲಿಸಿದ ದೂರಿನ ಪ್ರತಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರಾದ ಸಮೀತ್ ಠಕ್ಕರ್ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 24, 2021 ರಂದು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನ ಎಫ್‌ಐಆರ್ ಚಿತ್ರ ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ರೆಹನುಮಾ ಭಾಟಿ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 406, 420, 354, 354(A), 354(B), 509, 370, 376, 376(D), 377, 356, 386, 506(II)232, r ಅಡಿಯಲ್ಲಿ ಮಾಡಿದ ಅಪರಾಧಗಳಿಗಾಗಿ ದೂರು ದಾಖಲಿಸಲಾಗಿದೆ. /w 120(B), ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ 2000 ರ ವಿಭಾಗಗಳು 66(A), 66(E), POCSO ಕಾಯಿದೆ 2012 ರ ವಿಭಾಗಗಳು 8 ಮತ್ತು 6, ಮಹಿಳಾ ಕಾಯಿದೆಯ ಅಸಭ್ಯ ಪ್ರಾತಿನಿಧ್ಯದ ವಿಭಾಗಗಳು 4, 5, ಮತ್ತು 6 , ಮತ್ತು ಅನೈತಿಕ ಸಂಚಾರ (ರಕ್ಷಣೆ) ಕಾಯಿದೆ 1956 ಗಾಗಿ ವಿಭಾಗಗಳು 5B ಮತ್ತು 5C ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಟಿ20 ವಿಶ್ವಕಪ್‌ ಫೈನಲ್‌ಗೇರಿದ ನ್ಯೂಜಿಲೆಂಡ್‌ : ಮುಗ್ಗರಿಸಿದ ಇಂಗ್ಲೆಂಡ್‌

ಇದನ್ನೂ ಓದಿ : T20 World Cup ಫೈನಲ್‌ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ : ಮುಗ್ಗರಿಸಿದ ಪಾಕಿಸ್ತಾನ

(Rehnuma Bhati filled Sexual Charges Were Filed Against Hardik Pandya, Munaf Patel, And Rajeev Shukla)

Comments are closed.