ಬೆಂಗಳೂರು : ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರಪ್ಪ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ತಲೆದಂಡವಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈಶ್ವರಪ್ಪ ಗುತ್ತಿಗೆದಾರರಿಂದ ಶೇಕಡಾ 40 ರಷ್ಟು ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕಾಮಗಾರಿ ಹಣ ಹಿಂಪಡೆಯಲಾಗದೇ ಸಂತೋಷ್ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮಧ್ಯೆ ಈ ಆತ್ಮಹತ್ಯೆ ಮತ್ತು ರಾಜೀನಾಮೆ ನಡುವೆಯೂ ಈಶ್ವರಪ್ಪ (KS Eshwarappa) ಭಾರಿ ವರ್ಗಾವಣೆ ನಡೆಸಿದ್ದು, ಈ ಮಾಸ್ ಟ್ರಾನ್ಸಫರ್ ನಲ್ಲೂ ಈಗ ಅಕ್ರಮದ ಮಾತು ಕೇಳಿ ಬಂದಿದೆ.
ಹೌದು, ಕಳೆದ ಎರಡು ಮೂರು ದಿನಗಳಿಂದ ಸಚಿವ ಈಶ್ವರಪ್ಪ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಸಂಕಷ್ಟದ ಹೊತ್ತಿನಲ್ಲೂ ಸಚಿವ ಈಶ್ವರಪ್ಪ ತಮ್ಮ ಚಾಕಚಕ್ಯತೆ ಮೆರೆದಿದ್ದು ಮೈಸೂರು ಜಿಲ್ಲೆಯಾದ್ಯಂತ ಪಿಡಿಓಗಳ ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಏಪ್ರಿಲ್ 12 ರಂದು ಸಚಿವ ಈಶ್ವರಪ್ಪ ಮೈಸೂರು ಪ್ರವಾಸದಲ್ಲಿದ್ದರು. ಈ ವೇಳೆಯೇ ಸಚಿವ ಈಶ್ವರಪ್ಪ, ಜಿಲ್ಲೆಯ 29 ಪಿಡಿಓ ಗಳನ್ನು ವರ್ಗಾವಣೆ ಮಾಡಿದ್ದಾರೆ. ಏಪ್ರಿಲ್ 12 ರಂದು ಈಶ್ವರಪ್ಪನವರು ವಿಭಾಗೀಯ ಸಭೆಯಲ್ಲಿ ಪಾಲ್ಗೊಂಡಿದ್ದು ಅಂದೇ ಉಡುಪಿಯಲ್ಲಿ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೆಚ್ಚಿತ್ತು. ಈ ಒತ್ತಡದ ನಡುವೆಯೇ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಈಶ್ವರಪ್ಪ ಎಂಬ ಸಂಗತಿ ಈಗ ಬೆಳಕಿಗೆ ಬಂದಿದ್ದು ವರ್ಗಾವಣೆಯ ಲಿಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏ.12ರಂದು 29 ಪಿಡಿಓಗಳ ವರ್ಗಾವಣೆ ಆದೇಶದ ಪ್ರತಿ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರೊಂದಿಗೆ ಸಚಿವ ಈಶ್ವರಪ್ಪ ತಾವು ಹುದ್ದೆಗೆ ರಾಜೀನಾಮೆ ನೀಡೋದು ಅನಿವಾರ್ಯವಾಗಲಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಹಣ ಪಡೆದು 29 ಪಿ ಡಿ ಓ ಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ವರ್ಗಾವಣೆ ಹಿಂದೆ ಲಕ್ಷಾಂತರ ರೂಪಾಯಿ ಲಂಚದ ಹಣ ಕೆಲಸ ಮಾಡಿದೆ ಎಂದು ಈಗ ಕಾಂಗ್ರೆಸ್ ಆರೋಪಿಸಿದೆ . ಮಾತ್ರವಲ್ಲ ಸಂತೋಷ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ವೇಳೆಯಲ್ಲೇ ಈಶ್ವರಪ್ಪ ಇಷ್ಟೊಂದು ವರ್ಗಾವಣೆ ಮಾಡಿರೋದು ಅವರ ಲಂಚಗುಳಿತನಕ್ಕೆ ಸಾಕ್ಷಿ ಒದಗಿಸುತ್ತಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ : ಬೂಸ್ಟರ್ ಡೋಸ್ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಸೀರಂ ಸಂಸ್ಥೆ ಮನವಿ
ಇದನ್ನೂ ಓದಿ : ಮಹಿಳೆಯರ ಸುರಕ್ಷತೆಗಾಗಿ ಕಚೇರಿಯಲ್ಲೇ ದೂರು ಸಮಿತಿ : ದೌರ್ಜನ್ಯ ತಪ್ಪಿಸಲು ಮಹಿಳಾ ಆಯೋಗದ ಸಿದ್ಧತೆ
Transfer before resigning KS Eshwarappa charges serious