ಧಾರವಾಡ : Union Minister Prahlad Joshi : ಬಿಜೆಪಿ ಸರ್ಕಾರದ ಅವಧಿಯಲ್ಲಿ ಲಂಚ ಹಾಗೂ ಮಂಚಕ್ಕೆ ಮಾತ್ರ ಬೆಲೆ ಉಳಿದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಯೊಂದು ಸರ್ಕಾರಿ ಉದ್ಯೋಗ ಕೂಡ ಮಾರಾಟಕ್ಕಿದೆ . ಕೆಲಸ ಬೇಕು ಅಂದರೆ ರಾಜ್ಯದ ಯುವತಿಯರು ಮಂಚ ಹತ್ತಬೇಕು ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ವಿಚಾರವಾಗಿ ಇಂದು ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಒಂದು ಅಯೋಗ್ಯ ಪಕ್ಷ ಎಂದು ಕಿಡಿಕಾರಿದ್ದಾರೆ.
ಕೆಲಸ ಪಡೆಯಬೇಕು ಅಂದರೆ ಯುವತಿಯರು ಮಂಚ ಹತ್ತಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರ ಲಂಚ ಹಾಗೂ ಮಂಚದ ಹೇಳಿಕೆಯಲ್ಲಿ ನಾನು ಎರಡನೇ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇನೆ. ಹೆಣ್ಣುಮಕ್ಕಳ ಬಗ್ಗೆ ಅಪಾರ ಶ್ರದ್ಧ, ಗೌರವ ಇರುವ ದೇಶ ನಮ್ಮದು.ಆದರೆ ಪ್ರಿಯಾಂಕ್ ಖರ್ಗೆ ನಮ್ಮ ರಾಜ್ಯದ ಜನತೆ ಕೆಲಸಕ್ಕಾಗಿ ಮಂಚ ಹತ್ತುತ್ತಾರೆಂದು ಹೇಳಿಕೆ ನೀಡಿದ್ದಾರೆ . ಇದು ಅತ್ಯಂತ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇವರಯ ಯಾರು..? ಭ್ರಷ್ಟಾಚಾರದ ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿ ಉತ್ಪತ್ತಿ ಮಾಡಿದ್ದೇ ಇವರು. ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಅನೇಕ ಹಗರಣಗಳನ್ನು ಮಾಡಿದೆ. 2ಜಿ, ಕಾಮನ್ವೆಲ್ತ್ ಒಂದಾ -ಎರಡಾ..? ದಿನ ಬೆಳಗಾದರೆ ಹಗರಣಗಳ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಭಾರತಕ್ಕೆ ಬರೋರಿಗೆ ವೀಸಾ ಕೊಡಲು ದುಡ್ಡು ತೆಗೆದುಕೊಂಡಿದ್ದರು. ಇಂತಹ ಅಯೋಗ್ಯ ಕಾಂಗ್ರೆಸ್ ಪಕ್ಷದ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ಕೇಳಿ ನಗು ಬರುತ್ತಿದೆ. ಇಂತಹ ಜೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ : Salman Rushdie : ವಿವಾದಿತ ಲೇಖಕ ಸಲ್ಮಾನ್ ರಶ್ದಿಗೆ ಬಹಿರಂಗ ವೇದಿಕೆಯಲ್ಲಿ ಚಾಕು ಇರಿತ : ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ
ಇದನ್ನೂ ಓದಿ : sonia gandhi tests positive :ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್
ಇದನ್ನೂ ಓದಿ : national flag :ಹರ್ಘರ್ ತಿರಂಗಾ ಅಭಿಯಾನ : ಮನೆಯಲ್ಲೇ ತ್ರಿವರ್ಣ ಧ್ವಜ ಹಾರಿಸಿದವರು ರಾಷ್ಟ್ರಧ್ವಜದ ಘನತೆ ಮರೆಯಿರಿ
Union Minister Prahlad Joshi outraged against Congress MLA Priyank Kharge