sonia gandhi tests positive :ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್​​

ದೆಹಲಿ : sonia gandhi tests positive : ನ್ಯಾಷನಲ್​ ಹೆರಾಲ್ಡ್​​ ಅಕ್ರಮ ಪ್ರಕರಣದಲ್ಲಿ ಸಾಲು ಸಾಲು ವಿಚಾರಣೆಯನ್ನು ಎದುರಿಸುತ್ತಿರುವ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇದೀಗ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಸಂಬಂಧ ಕಾಂಗ್ರೆಸ್​ ಹಿರಿಯ ನಾಯಕ ಜೈರಾಮ್​ ರಮೇಶ್​ ಅಧಿಕೃತ ಮಾಹಿತಿ ನೀಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಸೋನಿಯಾ ಗಾಂಧಿ ಕೊರೊನಾ ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಇಡಿಯಿಂದ ವಿಚಾರಣೆಗೆ ವಿನಾಯಿತಿ ಕೋರಿದ್ದರು.


ಟ್ವಿಟರ್​ನಲ್ಲಿ ಈ ಸಂಬಂಧ ಮಾಹಿತಿ ನೀಡಿರುವ ಕಾಂಗ್ರೆಸ್​ ಹಿರಿಯ ನಾಯಕ ಜೈರಾಮ್​ ರಮೇಶ್​​​ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಅವರಿಗೆ ಕೋವಿಡ್​ ಸೋಂಕು ದೃಢಪಟ್ಟಂತಾಗಿದೆ. ವೈದ್ಯಕೀಯ ಸಲಹೆಯಂತೆ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇತ್ತ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಕೂಡ ಈ ಸಂಬಂಧ ಟ್ವೀಟ್​ ಮಾಡಿದ್ದು ಸೋನಿಯಾ ಗಾಂಧಿ ಶೀಘ್ರದಲ್ಲಿಯೇ ಕೋವಿಡ್​ 19ನಿಂದ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದಾರೆ.


ನ್ಯಾಷನಲ್​ ಹೆರಾಲ್ಡ್​​ ಅಕ್ರಮ ಪ್ರಕರಣದಲ್ಲಿ ಸೋನಿಯಾ ಗಾಂಧಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್​ ನೀಡಿದ್ದ ಕೆಲವೇ ದಿನಗಳಲ್ಲಿ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಅವರು ವಿಚಾರಣೆಯಿಂದ ವಿನಾಯ್ತಿ ಕೋರಿ ಇಡಿ ಬಳಿಯಲ್ಲಿ ಮನವಿ ಮಾಡಿದ್ದರು. ಕೊರೊನಾದಿಂದ ಗುಣಮುಖರಾದ ಬಳಿಕ ಅವರು ಪುತ್ರಿ ಪ್ರಿಯಾಂಕ ಗಾಂಧಿ ವಾದ್ರಾ ಜೊತೆಯಲ್ಲಿ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದು. ಕೊರೊನಾದಿಂದ ಗುಣಮುಖರಾಗಿ ಕೆಲವೇ ತಿಂಗಳಲ್ಲಿ ಇದೀಗ ಮತ್ತೆ ಅವರು ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ.


ಇತ್ತ ಲೋಕಸಭೆಯ ಮಾಜಿ ಸ್ಪೀಕರ್​ ಹಾಗೂ ಕೇಂದ್ರದ ಮಾಜಿ ಸಚಿವೆ ಮೀರಾ ಕುಮಾರ್​ರಿಗೆ ಕೊರೊನಾ ಸೋಂಕು ತಗುಲಿದೆ. ಈ ಸಂಬಂಧ ಮೀರಾ ಕುಮಾರ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ನನಗೆ ಕಳೆದ ರಾತ್ರಿ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ. ನಾನೀಗ ಹೋಂ ಕ್ವಾರಂಟೈನ್​​ನಲ್ಲಿದ್ದೇನೆ. ನನ್ನೊಂದಿಗೆ ಕಳೆದ ಕೆಲವು ದಿನಗಳಿಂದ ಸಂಪರ್ಕದಲ್ಲಿದ್ದವರು ಕೂಡಲೇ ಕೋವಿಡ್​ 19 ಪ್ರೊಟೋಕಾಲ್​​ ಅನುಸರಿಸುವಂತೆ ವಿನಂತಿಸುತ್ತಿದ್ದೇನೆ ಎಂದು ಟ್ವೀಟಾಯಿಸಿದ್ದಾರೆ.

ಇದನ್ನು ಓದಿ : Keerthy Suresh : ಸೋಲಿನಿಂದ ಕಂಗೆಟ್ಟ ಸೌತ್ ನಟಿಗೆ ಸಖತ್ ಅಫರ್, ಹೊಂಬಾಳೆ ನೆಕ್ಸ್ಟ್ ಮೂವಿಗೆ‌ ಕೀರ್ತಿ ಸುರೇಶ್ ನಾಯಕಿ

ಇದನ್ನೂ ಓದಿ : Salman Rushdie : ವಿವಾದಿತ ಲೇಖಕ ಸಲ್ಮಾನ್​ ರಶ್ದಿಗೆ ಬಹಿರಂಗ ವೇದಿಕೆಯಲ್ಲಿ ಚಾಕು ಇರಿತ : ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ

sonia gandhi tests positive for covid-19 second time in 3 months

Comments are closed.