VastuDosha for congress office: ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವಾಸ್ತು ದೋಷ : ಪರಿಹಾರಕ್ಕೆ ಮೊರೆ ಹೋದ ನಾಯಕರು

ಮಂಗಳೂರು: (VastuDosha for congress office) ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾಂಗ್ರೇಸ್‌ ಎಲ್ಲಾ ರೀತಿಯಲ್ಲೂ ತಯಾರಿ ನಡೆಸುತ್ತಿದೆ. ನಾಡಿನಾದ್ಯಂತ ಬಿಜೆಪಿ ಭದ್ರಕೋಟೆ ನಿರ್ಮಿಸಿದ್ದು, ಪಕ್ಷದ ಬಗ್ಗೆ ಹಲವು ಬದಲಾವಣೆಯ ನಿರೀಕ್ಷೆಯಿಂದ ಮಂಗಳೂರಿನ ಜಿಲ್ಲಾ ಕಾಂಗ್ರೇಸ್‌ ಸಮೀತಿ ಕಚೇರಿಯಲ್ಲಿ ವಾಸ್ತು ಬದಲಾವಣೆ ನಡೆಯುತ್ತಿದೆ.

ವಾಸ್ತು ತಜ್ಞರ ಸಲಹೆಯ ಮೇರೆಗೆ ಮಲ್ಲಿಕಟ್ಟೆ ಕಾಂಗ್ರೆಸ್‌ ಕಚೇರಿ (VastuDosha for congress office) ಮೆಟ್ಟಿಲುಗಳ ನವೀಕರಣ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೆ ಕಾಂಗ್ರೆಸ್‌ ಕಚೇರಿಯ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು. ವಾಸ್ತುಗಳ ಪ್ರಕಾರ ಎಂಟು ಮೆಟ್ಟಿಲುಗಳಿರುವುದು ದೋಷವಂತೆ, ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳಿರಬೇಕು ಎಂದು ವಾಸ್ತು ಪ್ರಕಾರಗಳು ಹೇಳುತ್ತವೆಯಂತೆ. ಹೀಗಾಗಿ ಸದ್ಯಕ್ಕೆ ಕಚೇರಿಯ ಮುಂಬಾಗದಲ್ಲಿ ಎಂಟು ಮೆಟ್ಟಿಲುಗಳಿದ್ದು, ಸಮ ಸಂಖ್ಯೆಯಾಗಿರುವುದರಿಂದ ಇನ್ನೊಂದು ಮೆಟ್ಟಿಲನ್ನು ಸೇರಿಸಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.

ಪಕ್ಷದ ರಾಜಕೀಯ ಭವಿಷ್ಯವನ್ನು ಬದಲಾಯಿಸುವ ಪ್ರಮುಖ ಸಲಹೆಗಳಲ್ಲಿ, ವಾಸ್ತು (VastuDosha for congress office) ಬದಲಾವಣೆಗಳು ಪ್ರಮುಖವಾಗಿ ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. 2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆಯಾಗಿತ್ತು. ಇದಾದ ಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲನ್ನು ಕಂಡಿತ್ತು. ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಕಚೇರಿ ನಿರ್ಮಾಣದ ಸಮಯದಲ್ಲಿ ವಾಸ್ತು ಗೆ ಒತ್ತು ನೀಡದಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸೆ ಮುಖಂಡರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : Siddaramaiah Secret meeting : ಹೈಕಮಾಂಡ್ ಗೂ ಕ್ಯಾರೇ ಎನ್ನದ ಸಿದ್ಧರಾಮಯ್ಯ: ವರಿಷ್ಠರ ಭೇಟಿ ಬಳಿಕ ಅಪ್ತರೊಂದಿಗೆ ರಹಸ್ಯ ಮೀಟಿಂಗ್

ಸದ್ಯ ವಾಸ್ತು ಬದಲಾವಣೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿದ್ದು, ವಾಸ್ತು ಬದಲಾವಣೆಯ ವಾದವನ್ನು ಕಾಂಗ್ರೆಸ್‌ ಮುಖಂಡರು ನಿರಾಕರಿಸಿದ್ದಾರೆ. ಇದು ವಾಸ್ತು ಬದಲಾವಣೆಯಲ್ಲ. ಬದಲಾಗಿ ಕಚೇರಿಗಳ ಎದುರಿಗೆ ಇರುವ ಮೆಟ್ಟಿಲುಗಳು ಎತ್ತರವಾಗಿದ್ದು, ಹತ್ತಲು ಕಷ್ಟವಾಗುತ್ತಿತ್ತು. ಹಾಗಾಗಿ ಇನ್ನೊಂದು ಮೆಟ್ಟಿಲನ್ನು ಸೇರಿಸಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಇದು ವಾಸ್ತು ಬದಲಾವಣೆಯಲ್ಲ, ದುರಸ್ತಿ ಕಾರ್ಯ ಎಂದು ಡಿಸಿಸಿ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

(VastuDosha for congress office) Congress is preparing in all ways to come to power again in the upcoming elections. The BJP has built strongholds across the country, and due to the expectation of many changes in the party, the office of the District Congress Committee in Mangalore is undergoing renovation.

Comments are closed.