ಬೆಂಗಳೂರು : ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯ ನೇಮಕಕ್ಕೆ ಸಿದ್ದತೆ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ಹೊಸ ಸಂಪುಟ ರಚನೆಯ ಸರ್ಕಸ್ ಕೂಡ ಮುಂದುವರಿದಿದೆ. ಈ ನಡುವಲ್ಲೇ ರಾಜ್ಯದ ಹೊಸ ಸಂಪುಟದಲ್ಲಿ ಹಳಬರಿಗೆ ಕೋಕ್ ಸಿಗೋದು ಬಹುತೇಕ ಖಚಿತ. ಯುವಕರಿಗೆ ಹೆಚ್ಚಿನ ಆಧ್ಯತೆ ಸಿಗೋ ಸಾಧ್ಯತೆಯಿದೆ. ಹೀಗಾಗಿ ಯಾರೆಲ್ಲಾ ಸಂಪುಟ ಸೇರಬಹುದು ಅನ್ನೋ ಡಿಟೇಲ್ಸ್ ಇಲ್ಲಿದೆ.
ಕೇಂದ್ರ ಸಂಪುಟ ಪುನರಚನೆಯಂತೆಯೇ ರಾಜ್ಯದಲ್ಲಿಯೂ ಮುಂದಿನ ಚುನಾವಣೆಯನ್ನು ದೃಷ್ಟಿಯನ್ನಿಟ್ಟುಕೊಂಡು ಸಂಪುಟ ರಚನೆಯ ಸಾಧ್ಯತೆಯಿದೆ. ಜಾತಿ, ಪ್ರಾಂತ್ಯದ ಲೆಕ್ಕಾಚಾರದ ಜೊತೆಗೆ ಯುವಕರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿಯೂ ಹೈಕಮಾಂಡ್ ಚಿಂತನೆ ನಡೆಸಿದೆ. ಸದ್ಯಕ್ಕೆ ಶೇ.40ರಷ್ಟು ಮಾತ್ರವೇ ಹಿರಿಯ ನಾಯಕರಿಗೆ ಅವಕಾಶ ನೀಡಿದ್ರೆ, ಶೇ.60ರಷ್ಟು ಹೊಸ ಮುಖಗಳು ಸಚಿವ ಸ್ಥಾನ ಅಲಂಕರಿಸೋದು ಬಹುತೇಕ ಖಚಿತ.
ಪ್ರಮುಖವಾಗಿ ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸುರೇಶ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಸೋಮಣ್ಣ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಪ್ರಭು ಚವ್ಹಾಣ್, ಆರ್.ಶಂಕರ್, ನಾರಾಯಣ ಗೌಡ, ಗೋಪಾಲಯ್ಯ ಹಾಗೂ ಶ್ರೀಮಂತ ಪಾಟೀಲ್, ಎಂ.ಟಿ.ಬಿ.ನಾಗರಾಜ್ ಗೆ ಕೋಕ್ ಕೊಡುವುದು ಬಹುತೇಕ ಖಚಿತ.
ಹಾಲಿ ಸಚಿವರ ಪೈಕಿ ಆಶೋಕ್, ಬಸವರಾಜ್ ಬೊಮ್ಮಾಯಿ, ಶ್ರೀರಾಮುಲು, ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಮರುಗೇಶ್ ನಿರಾಣಿ, ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ ಹಾಗೂ ಎಸ್.ಅಂಗಾರ ಸಚಿವರಾಗಿ ಮುಂದುವರಿಯುವ ಸಾಧ್ಯತೆಯಿದೆ. ಅಲ್ಲದೇ ವಲಸೆ ಬಂದ ಶಾಸಕರ ಪೈಕಿ ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್ ಹಾಗೂ ಬಿ.ಸಿ.ನಾಗೇಶ್ ಸಂಪುಟ ಸೇರುವುದು ಬಹುತೇಕ ಖಚಿತ ಎನ್ನುತ್ತಿದೆ ಬಿಜೆಪಿ ಮೂಲಗಳು.
ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳಿಗೆ ಸಚಿವ ಸ್ಥಾನ ಸಿಗೋದು ಖಚಿತ. ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಮಾರ್ ಬಂಗಾರಪ್ಪ, ಪಿ.ರಾಜೀವ್, ಪೂರ್ಣಿಮಾ ಶ್ರೀನಿವಾಸ್, ಬಾಲಚಂದ್ರ ಜಾರಕಿಹೊಳಿ, ಚಂದ್ರಪ್ಪ, ರಾಜೂಗೌಡ, ಮುನಿರತ್ನ, ಎಂ.ಪಿ.ಕುಮಾರಸ್ವಾಮಿ, ದತ್ತಾತ್ರೆಯ ಪಾಟೀಲ್, ಎ.ಎಸ್.ಪಾಟೀಲ್ ನಡಹಳ್ಳಿ, ಹಾಲಪ್ಪ ಆಚಾರ್, ಅಪ್ಪಚ್ಚು ರಂಜನ್, ಶಿವನಗೌಡ ನಾಯಕ್ ಹಾಗೂ ಸತೀಶ್ ರೆಡ್ಡಿ ಸಚಿವರಾಗೋ ಸಾಧ್ಯತೆಯಿದೆ.