ಸೋಮವಾರ, ಏಪ್ರಿಲ್ 28, 2025
HomekarnatakaVijayendra CM : 2023 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೇ ಬಿವೈ ವಿಜಯೇಂದ್ರ ಸಿಎಂ :...

Vijayendra CM : 2023 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೇ ಬಿವೈ ವಿಜಯೇಂದ್ರ ಸಿಎಂ : ಸಿದ್ಧವಾಗಿದೆ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

- Advertisement -

ಬೆಂಗಳೂರು : ಕರ್ನಾಟಕದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ಬಿಜೆಪಿ ಹೈಕಮಾಂಡ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರೋ ಕನಸಿನಲ್ಲಿದೆ. ಆದರೆ ರಾಜ್ಯದಲ್ಲಿ ಬೇರೆಯೇ ಲೆಕ್ಕಾಚಾರ ನಡೆದಂತಿದ್ದಿ, ಬಿಜೆಪಿಯ ಕೆಲ ಶಾಸಕರು ಹಾಗೂ ಸಚಿವರ ಮಾತಿನ ವೈಖರಿ ಗಮನಿಸಿದ್ರೇ ಮುಂದಿನ ಚುನಾವಣೆಗೆ ಸಿಎಂ‌ ಕ್ಯಾಂಡಿಡೇಟ್ ಬಿ.ವೈ.ವಿಜಯೇಂದ್ರ (Vijayendra CM) ಎಂಬ ಸಿದ್ಧತೆಯೊಂದಿಗೆ ತೆರಳುವಂತಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ.

ಹೌದು 2023 ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ , ಜೆಡಿಎಸ್ ಹಾಗೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ಸರ್ಕಸ್ ನಡೆಸಿದೆ. ಈ ಮಧ್ಯೆ ಬಿಜೆಪಿಯಲ್ಲಿ ಯಾರ ನಾಯಕತ್ವದಲ್ಲಿ ಚುನಾವಣೆಗೆ ಹೋಗೋದು ಎಂಬ ಪ್ರಶ್ನೆಯೂ ಇದೆ. ಇದೆಲ್ಲದರ ಮಧ್ಯೆ ಹೋದಲ್ಲಿ ಬಂದಲ್ಲಿ ಬಿಜೆಪಿಯ ಶಾಸಕರು, ಸಚಿವರು ಬಿಎಸ್ ವೈ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಸಿಎಂ ಆಗಬೇಕು, ಆಗ್ತಾರೇ ಎಂಬ ಮಾತುಗಳನ್ನಾಡುತ್ತಿದ್ದಾರೆ.

ಕಳೆದ ಎರಡು ದಿನದ ಹಿಂದೆ ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ನಾರಾಯಣ್ ಗೌಡ, ಮಾಜಿ ಸಿಎಂ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಸಿಎಂ ಆದರೇ ತಪ್ಪೇನು ? ಅವರಲ್ಲಿ ಆ ನಾಯಕತ್ವದ ಗುಣ ಇದೆ. ನಾವೆಲ್ಲ ಬಿಎಸ್ವೈ ಮುಖ ನೋಡಿಕೊಂಡೇ ಬಿಜೆಪಿಗೆ ಹೋಗಿದ್ದು, ನಮಗಂತೂ ಬಿ.ವೈ.ವಿಜಯೇಂದ್ರ ಅವರಲ್ಲಿ ಒಬ್ಬ ಭವಿಷ್ಯದ ನಾಯಕ ಕಾಣಿಸುತ್ತಿದ್ದಾರೆ ಎಂದಿದ್ದರು.

ಇದರ ಬೆನ್ನಲ್ಲೇ ಬುಧವಾರ ವಿಜಯಪುರದಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ವಿಜಯೇಂದ್ರ ಸಿಎಂ ಆಗಲಿ. ಈ ರಾಜ್ಯದಲ್ಲಿ ಪ್ರಧಾನಿ ಮಗನೂ ಸಿಎಂ ಆಗಿದ್ದಾನೆ. ಅದರಲ್ಲಿ ಸಿಎಂ ಪುತ್ರ ಸಿಎಂ ಆಗೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಈ ಮಾತುಗಳನ್ನು ಕೇಳಿದ್ರೇ ಯಾಕೋ ಬಿಜೆಪಿ ನಾಯಕರು ಒಳಗೊಳಗೆ ಹೈಕಮಾಂಡ್ ಗೆ ಸೆಡ್ಡು ಹೊಡೆಯುವ‌ ಸೂಚನೆ ರವಾನಿಸುವಂತಿದೆ ಎನ್ನಲಾಗ್ತಿದೆ.

ಇತ್ತೀಚಿಗೆ ಬಿ.ವೈ.ವಿಜಯೇಂದ್ರ ಅವರಿಗೆ ಪರಿಷತ್ ಸ್ಥಾನ ನೀಡದೇ ಹೊರಗಿಡಲಾಗಿತ್ತು. ಆದರೆ ಇದಕ್ಕೆಲ್ಲ ನೊಂದುಕೊಳ್ಳದ ಮಾಜಿಸಿಎಂ ಬಿಎಸ್ವೈ ನನ್ನ ನಾಯಕತ್ವದಲ್ಲೇ ಮುಂದಿನ 10 ವರ್ಷ ಚುನಾವಣೆ ಎದುರಿಸಲಿದ್ದೇವೆ ಎಙದು ಘೋಷಿಸಿದ್ದಾರೆ. ಹೀಗಾಗಿ ಲಿಂಗಾಯತ್ ಶಾಸಕರು, ನಾಯಕರ ಬೆಂಬಲದೊಂದಿಗೆ ಬಿಎಸ್ವೈ ಮುಂದಿನ ಎಲೆಕ್ಷನ್ ನಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ. ಅದರ ಜೊತೆಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಲಿದ್ದಾರೆ.

ಅಲ್ಲದೇ ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟು ಅಲ್ಲಿ‌ಮಗನನ್ನು ಗೆಲ್ಲಿಸಿಕೊಂಡು ಶಾಸಕ ಸ್ಥಾನದಲ್ಲಿ ಕೂರಿಸಿ ಬಳಿಕ ಪಕ್ಷವನ್ನು ಗೆಲ್ಲಿಸಿದ ಕಾರಣಕ್ಕಾಗಿ ಮಗನಿಗೆ ಸಿಎಂ ಸ್ಥಾನದಲ್ಲಿ ಕೇಳಲಿದ್ದಾರಂತೆ‌‌‌ ಇದೇ ಪ್ಲ್ಯಾನ್ ಕಾರಣಕ್ಕೆ ಆಗಾಗ ಸಚಿವರು ಹಾಗೂ ಶಾಸಕರು ಬಿ.ವೈ.ವಿಜಯೇಂದ್ರ ಸಿಎಂ ಆಗ್ತಾರೆ ಎಂದು ಕನವರಿಸುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲೇ ಕೇಳಿ ಬರುತ್ತಿದೆ.

ಇದನ್ನೂ ಓದಿ : ಇನ್ನೂ 10 ವರ್ಷ ನನ್ನದೇ ನಾಯಕತ್ವ: ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಸಂದೇಶ

ಇದನ್ನೂ ಓದಿ : ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಮಾಸ್ಟರ್ ಪ್ಲ್ಯಾನ್ : ಸ್ವತಃ ಕಣಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯ, ದೇಶದ ರಾಜಕೀಯ ವಿದ್ಯಾಮಾನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Yeddyurappa Master Plan Vijayendra CM in Karnataka 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular