Sonam Kapoor : ನಟಿ ಸೋನಂ ಕಪೂರ್​ ಪ್ರೆಗ್ನೆನ್ಸಿ ಫೋಟೋಶೂಟ್​: ಶ್ವೇತ ವರ್ಣದ ಧಿರಿಸಿನಲ್ಲಿ ಬೇಬಿ ಬಂಪ್​ ಪ್ರದರ್ಶನ

Sonam Kapoor : ನಟಿ ಸೋನಂ ಕಪೂರ್​ ಸಧ್ಯ ತಮ್ಮ ಗರ್ಭಾವಸ್ಥೆಯನ್ನು ಎಂಜಾಯ್​ ಮಾಡ್ತಿದ್ದಾರೆ. ಇಂದು ಜನ್ಮದಿನದ ಸಂಭ್ರಮದಲ್ಲಿರುವ ನಟಿ ಸೋನಂ ಕಪೂರ್​​ ಲಂಡನ್​​ನಲ್ಲಿ ತಮ್ಮ ಪತಿ ಆನಂದ್​ ಅಹುಜಾ ಜೊತೆಯಲ್ಲಿ ಬರ್ತಡೇ ಸೆಲಬ್ರೇಟ್​ ಮಾಡಿದ್ದಾರೆ. ಈ ವಿಶೇಷ ದಿನಕ್ಕೂ ಮುನ್ನ ಖ್ಯಾತ ಫ್ಯಾಶನ್​ ಡಿಸೈನರ್​ ಜೋಡಿ ಅಬು ಜಾನಿ ಸಂದೀಪ್​​ ಖೋಸ್ಲಾ ಸೋನಂ ಕಪೂರ್​​ರ ಹೊಸ ಮೆಟರ್ನಿಟಿ ಫೋಟೋಶೂಟ್​​ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಶ್ವೇತವರ್ಣದ ಧಿರಿಸಿನಲ್ಲಿ ಬೇಬಿ ಬಂಪ್​ ಪ್ರದರ್ಶಿಸುತ್ತಿರುವ ನಟಿ ಸೋನಂ ಕಪೂರ್​ ದೇವತೆಯಂತೆ ಕಾಣ್ತಿದ್ದಾರೆ .


ಈ ಫೋಟೋದಲ್ಲಿ ನಟಿ ಸೋನಂ ಕಪೂರ್​ ಶ್ವೇತ ವರ್ಣದ ಉಡುಪನ್ನು ಧರಿಸಿದ್ದು ತೋಳಿನಿಂದ ಎದೆಯ ಭಾಗದವರೆಗೆ ಮುತ್ತಿನ ಸರದಲ್ಲಿ ಡಿಸೈನ್​ ಮಾಡಲಾಗಿದೆ. ಇದೊಂದು ಕ್ರಾಪ್​ ಟಾಪ್​ ಆಗಿದ್ದು ಸೋನಂರ ಬೇಬಿ ಬಂಪ್​ ಸ್ಪಷ್ಟವಾಗಿ ಕಾಣುವಂತಿದೆ. ಸೀಳನ್ನು ಹೊಂದಿರುವ ಉದ್ದನೆಯ ಸ್ಕರ್ಟ್​ ಸೋನಂ ಕಪೂರ್​​ರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಮುತ್ತಿನ ಮಣಿಗಳಿಂದಲೇ ಸೋನಂ ಕಪೂರ್​​ರ ಕೇಶ ವಿನ್ಯಾಸ ಮಾಡಲಾಗಿದ್ದು ಇದು ಇವರ ಉಡುಪಿಗೆ ಸಂಪೂರ್ಣ ಹೊಂದಿಕೆಯಾಗಿದೆ.


ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಬು ಜಾನಿ ಹಾಗೂ ಸಂದೀಫ್​ ಖೋಸ್ಲಾ, ಸೋನಂ ಕಪೂರ್​ ತಾಯಿಯಾಗಲಿರುವ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ನಾವು ಈಕೆಯನ್ನು ಪ್ರೀತಿಸುತ್ತೇವೆ. ಫ್ಯಾಶನ್​ಗಾಗಿ ಆಕೆಯ ಉತ್ಸಾಹ , ಆಕೆಯ ನಿರ್ಭೀತ ಸ್ವಾತಂತ್ರ್ಯ ಇವರನ್ನು ಪ್ರತಿ ಬಾರಿಯೂ ಭಿನ್ನವಾಗಿ ಕಾಣುವಂತೆ ಮಾಡುತ್ತಿದೆ. ಜೀವನದ ಹೊಸ ಪ್ರಯಾಣಕ್ಕೆ ಸಿದ್ಧರಾಗಿರುವ ನಿಮ್ಮ ಪ್ರತಿ ಹೆಜ್ಜೆಯು ಹೆಚ್ಚು ಬಲಶಾಲಿಯಾಗಿ ಹಾಗೂ ಪ್ರಕಾಶಮಾನವಾಗಿ ಬೆಳಗಲಿ ಎಂದು ನಾವು ಹಾರೈಸುತ್ತೇವೆ ಎಂದು ಬರೆದುಕೊಂಡಿದ್ದಾರೆ .

ಇದನ್ನು ಓದಿ : Siddaganga Shivakumara Swami : ಸಿದ್ಧಗಂಗಾ ಶ್ರೀಗಳ ಪಠ್ಯಕ್ಕೆ ಕತ್ತರಿ : ಸಮಿತಿ ಎಡವಟ್ಟಿಗೆ ವ್ಯಕ್ತವಾಗ್ತಿದೆ ಭಾರೀ ಆಕ್ರೋಶ

ಇದನ್ನೂ ಓದಿ : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್‌

Pregnant Sonam Kapoor new maternity photoshoot in beaded white ensemble is way beyond stunning – see pic

Comments are closed.