ಬೆಂಗಳೂರು: ಕಲಾವಿದರ ಕೈ ಸೇರೋ ಕಸವೂ ಕಲಾಕೃತಿಯಾಗಬಲ್ಲದು ಎಂಬುದಕ್ಕೆ ಗುಜರಿ ವಸ್ತುಗಳಲ್ಲಿ ಸಿದ್ಧವಾದ ಪ್ರಧಾನಿ ಮೋದಿ ಸುಂದರ 14 ಅಡಿ ಎತ್ತರದ ಪ್ರತಿಮೆಯೇ ಸಾಕ್ಷಿ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಪ್ಪ-ಮಗ ಇಂತಹದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ನಿವಾಸಿ ಕೆ.ವೆಂಕಟೇಶ್ವರ್ ರಾವ್ ಹಾಗೂ ಅವರ ಪುತ್ರ ರವಿಚಂದ್ರ ಇಂತಹದೊಂದು ವಿಭಿನ್ನ ಕಲಾಕೃತಿ ನಿರ್ಮಿಸಿ ದೇಶದ ಗಮನಸೆಳೆದಿದ್ದಾರೆ.ಅಂದಾಜು 2 ಟನ ಅಟೋಮೊಬೈಲ್ ಸ್ಕ್ರ್ಯಾಪ್ ಗಳನ್ನು ಬಳಸಿಕೊಂಡು 14 ಅಡಿ ಎತ್ತರದ ವಿಜೇತ ಸಂಕೇತ ತೋರುತ್ತಿರುವ ಮೋದಿ ಪ್ರತಿಮೆ ನಿರ್ಮಿಸಲಾಗಿದೆ.

ಬೈಕ್ ಚೈನ್, ಗೇರ್ ವೀಲ್,ಕಬ್ಬಿಣದ ರಾಡುಗಳು,ಸ್ಕ್ರೂನಟ್ ಗಳು,ಬೋಲ್ಟ್ ಗಳನ್ನು ಬಳಸಿ ಮೋದಿ ಪ್ರತಿಮೆ ನಿರ್ಮಿಸಲಾಗಿದೆ. ಸೆ.16 ರಂದು ಈ ವಿಶೇಷ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಪೋರೇಟರ್ ಮೋಹನರಾಜು ಸ್ಥಾಪಿಸಲಿದ್ದಾರೆ.
ವೆಂಕಟೇಶರಾವ್ ಮತ್ತು ರವಿಚಂದ್ರ ಎರಡು ತಿಂಗಳ ಕಾಲ ಶ್ರಮ ವಹಿಸಿ 15 ರಿಂದ 20 ಕಾರ್ಮಿಕರನ್ನು ಬಳಸಿಕೊಂಡು ಈ ಪ್ರತಿಮೆ ಸಿದ್ಧಪಡಿಸಿದ್ದು, ಇದಕ್ಕಾಗಿ ಹೈದ್ರಾಬಾದ್, ವಿಶಾಖಪಟ್ಟಣಂ,ಚೈನೈ ಸೇರಿದಂತೆ ಹಲವೆಡೆಯಿಂದ ಸ್ಕ್ರ್ಯಾಪ್ ಗಳನ್ನು ತರಿಸಿಕೊಳ್ಳಲಾಗಿತ್ತಂತೆ.
Prime minister Narendra modi has been made of scrap material