ಶನಿವಾರ, ಏಪ್ರಿಲ್ 26, 2025
HomeSpecial Storyಅಂಗಾರಕ ಸಂಕಷ್ಟ ಚತುರ್ಥಿಯಂದು ಶುಭಫಲಕ್ಕಾಗಿ ಗಣೇಶನಿಗೆ ಅರ್ಪಿಸಿ ಕಡಲೆ

ಅಂಗಾರಕ ಸಂಕಷ್ಟ ಚತುರ್ಥಿಯಂದು ಶುಭಫಲಕ್ಕಾಗಿ ಗಣೇಶನಿಗೆ ಅರ್ಪಿಸಿ ಕಡಲೆ

Angarka Sankashti : ವಿಘ್ನ ವಿನಾಶಕನಾದ ಗಣೇಶನ ಆರಾಧನೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗಣೇಶ ಚತುರ್ಥಿಯ ಜೊತೆಗೆ ಪ್ರತಿ ಮಾಸದಲ್ಲೂ ಬರುವ ಚತುರ್ಥಿಯಂದು ಅಂಗಾರಕ ಸಂಕಷ್ಟ ಚತುರ್ಥಿ ಆಚರಣೆಯ ಸಂಪ್ರದಾಯವಿದೆ.

- Advertisement -

Angarka Sankashti : ವಿಘ್ನ ವಿನಾಶಕನಾದ ಗಣೇಶನ ಆರಾಧನೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗಣೇಶ ಚತುರ್ಥಿಯ ಜೊತೆಗೆ ಪ್ರತಿ ಮಾಸದಲ್ಲೂ ಬರುವ ಚತುರ್ಥಿಯಂದು ಅಂಗಾರಕ ಸಂಕಷ್ಟ ಚತುರ್ಥಿ ಆಚರಣೆಯ ಸಂಪ್ರದಾಯವಿದೆ. ಸಂಸ್ಕೃತದಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯದಿಂದ ಮುಕ್ತಿ ಪಡೆಯುವುದು. ಒಂದೊಮ್ಮೆ ಯಾವುದೇ ದುಃಖವಿದ್ದರೆ ಅದನ್ನು ಹೋಗಲಾಡಿಸಲು ಅಂಗಾರಕ ಚತುರ್ಥಿಯ ದಿನದಂದು ವಿಧಿವತ್ತಾಗಿ ಉಪವಾಸವನ್ನು ಆಚರಿಸಿ ಗಣೇಶನನ್ನು ಪೂಜಿಸಲಾಗುತ್ತದೆ. ಇದೇ ಸಂಕಷ್ಠಿ ಮಂಗಳವಾರದಂದು ಬಂದ್ರೇ ಆಚರಣೆ ಶ್ರೇಷ್ಠ ಎಂದು ಪುರಾಣಗಳು ಹೇಳಿವೆ.

ಅಂಗಾರಕ ಚತುರ್ಥಿಯಲ್ಲಿ ಅಂಗಾರಕ ಅನ್ನೋದು ಕೂಡ ಸಂಸ್ಕೃತ ಪದವಾಗಿದ್ದು, ಅಂಗಾರಕದ ಅರ್ಥ ಸುಟ್ಟ ಕಲ್ಲಿದ್ದಲಂತೆ ಕೆಂಪು ಎನ್ನುವುದು. ಗಣೇಶನ ಪ್ರೀತಿಯ ಬಣ್ಣವೂ ಕೆಂಪು. ಈ ದಿನದಂದು ಭಗವಾನ್ ಗಣೇಶನನ್ನು ಪೂಜಿಸುವುದರ ಮೂಲಕ ಮತ್ತು ಉಪವಾಸ ವ್ರತವನ್ನು ಮಾಡುವುದರಿಂದ ಭಕ್ತರು ವಿಘ್ನವಿನಾಶಕನ ಕೃಪೆಗೆ ಪಾತ್ರರಾಗಬಹುದು. ಗಣೇಶ ಅವರ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ ಎಂದು ಹಿಂದೂ ಭಕ್ತರು ಬಲವಾಗಿ ನಂಬುತ್ತಾರೆ.

Angarka Sankashti Offer chickpeas to Ganesha for auspicious results
Image Credit to Original Source

ಅಂಗಾರಕ ಚತುರ್ಥಿಯ ದಿನವನ್ನು ವಿಮೋಚನೆಯ ದಿನ ಎನ್ನಲಾಗುತ್ತದೆ. ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದ್ದಾನೆ ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ಅಂಗಾರಕ ಸಂಕಷ್ಟಿಯ ದಿನದಂದು ಉಪವಾಸವೃತವನ್ನು ಕೈಗೊಳ್ಳುವ ವ್ಯಕ್ತಿಯು ಗಣೇಶ ಮತ್ತು ಮಂಗಳ ಗ್ರಹಗಳ ಆಶೀರ್ವಾದ ಪಡೆಯುತ್ತಾನೆ. ಅಲ್ಲದೇ ಉಪವಾಸ ಮಾಡುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸಮಸ್ಯೆಗಳನೇ ಎದುರಿಸುವುದು ಇಲ್ಲವಂತೆ. ಜೊತೆಗೆ ನೆಮ್ಮದಿಯ, ಶಾಂತಿಯುತ ಜೀವನ ನಡೆಸುತ್ತಾನೆ ಎಂದು ನಂಬಲಾಗಿದೆ. ಸಂಕಷ್ಠಿ ವ್ರತ ಆಚರಿಸುವ ವ್ಯಕ್ತಿಯೂ ಬದುಕಿನ ಎಲ್ಲ ಬಗೆಯ ಸಂಕಷ್ಠಗಳಿಂದಲೂ ಮುಕ್ತನಾಗುತ್ತಾನೆ ಎಂಬ ಪ್ರತೀತಿ ಇದೆ.

ಅಂಗಾರಕ ಚತುರ್ಥಿಯನ್ನು ಸಂಕಷ್ಠಿ ವ್ರತವನ್ನು ಆಚರಿಸಿ ಗಣಪತಿಯನ್ನು ಆರಾಧಿಸಿದ್ರೇ 21 ವ್ರತಗಳನ್ನು ಪಾಲಿಸಿದ್ದಕ್ಕೆ ಸಮ ಎನ್ನಲಾಗುತ್ತದೆ. ಈ ದಿನ ಸುರ್ಯೋದಯದಿಂದ ಆರಂಭಿಸಿ ಸೂರ್ಯಾಸ್ತದವರೆಗೂ ಉಪವಾಸ ಆಚರಿಸಿ ಚಂದ್ರನಿಗೆ ಅರ್ಘ್ಯನೀಡಿ ಬಳಿಕ ಊಟ ಮಾಡುತ್ತಾರೆ. ಒಂದೊಮ್ಮೆ ಉಪವಾಸ ವೃತವನ್ನು ಕೈಗೊಂಡುಸಂಕಲ್ಪ ಮಾಡಿದರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುವುದು. ಹೀಗಾಗಿ ಜನರು ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ ಸಂಕಷ್ಠಿ ವ್ರತ ಆಚರಿಸುತ್ತಾರೆ.

ಸಂಕಷ್ಠಿಯಂದು ಗಣೇಶನಿಗೆ ನೀರಲ್ಲಿ ನೆನೆಸಿದ ಕಡಲೆ ಕಾಯಿಯನ್ನು ಅರ್ಪಿಸುವ ಪರಿಪಾಠವಿದೆ. ಗಣೇಶ ಕಡಲೆ ಪ್ರಿಯನಾಗಿದ್ದು, ಕಡಲೆ ಕಾಯಿ ,ಕಡಲೆ ಪಂಚಕಜ್ಜಾಯ ಹಾಗೂ ಕಡಲೆಉಸುಳಿ ಅರ್ಪಿಸುವುದರಿಂದ ಪ್ರಸನ್ನನಾಗುತ್ತಾನೆ. ಇದಲ್ಲದೇ ಸಂಕಷ್ಠಿಯಂದು ಪ್ರಾಥಃಕಾಲದಲ್ಲೇ ಎದ್ದು ಶುರ್ಚಿಭೂತರಾಗಿ ಈ ಕೆಳಗಿನ ಮಂತ್ರವನ್ನು ಜಪಿಸುವುದರಿಂದ ಉದ್ಯೋಗ ಹಾಗೂ ವ್ಯವಹಾರದಲ್ಲಿ ಎದುರಿಸುವ ಅಡೆತಡೆಗಳನ್ನು ಗೆಲ್ಲಬಹುದು.

ಇದನ್ನೂ ಓದಿ : ಕಾರ್ತೀಕ ಸೋಮವಾರದ ಆಚರಣೆ ಮಹತ್ವವೇನು ? ಶಿವನನ್ನು ಅರ್ಚಿಸುವುದು ಹೇಗೆ ?

ಅಂಗಾರಕ ಚತುರ್ಥಿಯ ದಿನದಂದು ಸಂಕಟ ಹರ ಗಣೇಶ ಸ್ತೋತ್ರ: || ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ ಲಂಬೋಧರಂ ಪಂಚಮಂ ಚ ಷಷ್ಠಂ ವಿಕಟಮೇವಚ ಸಪ್ತಮಂ ವಿಘ್ನ ರಾಜಂಚ ಧೂಮ್ರವರ್ಣಂ ತಥಾಷ್ಠಕಂ ಮಂತ್ರವನ್ನು ಪಠಣ ಮಾಡಬೇಕು.

ನವಮಂ ಫಲ ಚಂದ್ರಂಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ ವಿದ್ಯಾರ್ಥಿ ಲಭತೆ ವಿದ್ಯಂ ವಿದ್ಯಾಂ ಧನಾರ್ಥಿ ಲಭತೆ ಧನಂ ಪುತ್ರಾರ್ಥಿ ಲಭತೆ ಪುತ್ರಂ ಮೋಕ್ಷಾರ್ಥಿ ಲಭತೆ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಮಸ್ಯಾಃ ಅಷ್ಟಾಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ

ಇದನ್ನೂ ಓದಿ : ನೀರಿನ ನಡುವೆಯೇ ಗುಹಾಂತರನಾಗಿ ನಿಂತಿದ್ದಾನೆ ಮೂಡಗಲ್ಲು ಶ್ರೀ ಕೇಶವ ನಾಥೇಶ್ವರ- ಇವನ ದರ್ಶನಕ್ಕೆ ಬಂದ್ರೆ ಇಲ್ಲಿ ಕಚ್ಚಲ್ಲ ಹಾವು

ಇದಲ್ಲದೇ ಸಂಕಷ್ಠಿಯಂದು ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ನಿಮ್ಮ ಮನೆಯ ಹತ್ತಿರದ ಗಣೇಶ ದೇವಸ್ಥಾನಕ್ಕೆ ಸಮರ್ಪಿಸುವುದು ಕೂಡ ನಿಮಗೆ ಶುಭ ಲಾಭತರಲಿದೆ. ಪೌರಾಣಿಕ ಕಥೆಗಳಲ್ಲಿ ಗಣೇಶನು ಸಿಂಧೂರವನ್ನು ತುಂಬಾ ಇಷ್ಟಪಡುತ್ತಾನೆ ಎಂದು ಹೇಳಲಾಗುತ್ತೆ, ಹೀಗಾಗಿ ಸಂಕಷ್ಠಿಯಂದು ವಿಘ್ನವಿನಾಶಕನಿಗೆ ಸಿಂಧೂರ ಸಮರ್ಪಣೆ ಶ್ರೇಷ್ಠವಾಗಿದೆ. ಇದಲ್ಲದೇ ಹಸಿರು ಗರಿಕೆ ಅರ್ಪಿಸುವುದು ಕೂಡ ಶುಭಕರ.

Angarka Sankashti Offer chickpeas to Ganesha for auspicious results

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular