ನೀರಿನ ನಡುವೆಯೇ ಗುಹಾಂತರನಾಗಿ ನಿಂತಿದ್ದಾನೆ ಮೂಡಗಲ್ಲು ಶ್ರೀ ಕೇಶವ ನಾಥೇಶ್ವರ- ಇವನ ದರ್ಶನಕ್ಕೆ ಬಂದ್ರೆ ಇಲ್ಲಿ ಕಚ್ಚಲ್ಲ ಹಾವು

ದೇವರು ಬೆಟ್ಟದಲ್ಲಿ ನೆಲೆ ನಿಂತ್ರೆ , ಇನ್ನು ಕೆಲವು ಕಡೆಗಳಲ್ಲಿ ಗುಹೆ, ನೀರಿನಲ್ಲಿ ಸ್ಥಾಪಿತ ರೂಪದಲ್ಲಿ ದೇವರು ಕಾಣಸಿಗುತ್ತಾರೆ . ಇಂತಹ ವೈಶಿಷ್ಟಗಳನ್ನು ಹೊಂದಿರುವ ದೇವಾಲಯವೊಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿಯಲ್ಲಿರೋ (Keradi)  ಮೂಡಗಲ್ಲು ಶ್ರೀ ಕೇಶವನಾಥೇಶ್ವರ ದೇವಾಲಯ (moodagallu keshavantheshwar temple).

moodagallu keshavantheshwar temple Keradi : ನಮ್ಮ ಪರಂಪರೆಯೇ ಹಾಗೆ ಇಲ್ಲಿ ದೇವರು ಇಂತಹೇ ಕಡೆಗಳಲ್ಲಿ ನೆಲೆ ನಿಂತಿರಬೇಕು ಎಂಬುದಿಲ್ಲ. ನಮ್ಮ ದೇವಾಲಯಗಳ ವೈಶಿಷ್ಟಯವೇ ಇದು . ನಮ್ಮಲ್ಲಿ ಕೆಲವು ದೇವಾಲಯಗಳು ಕಲ್ಲಿನಲ್ಲಿ ನಿರ್ಮಿತವಾದ್ರೆ, ಇನ್ನು ಕೆಲವು ಕಲ್ಲುಗಳೇ ದೇವಾಲಯವಾಗಿ ಎದ್ದು ನಿಂತಿವೆ . ಕೆಲವು ದೇವರು ಬೆಟ್ಟದಲ್ಲಿ ನೆಲೆ ನಿಂತ್ರೆ , ಇನ್ನು ಕೆಲವು ಕಡೆಗಳಲ್ಲಿ ಗುಹೆ, ನೀರಿನಲ್ಲಿ ಸ್ಥಾಪಿತ ರೂಪದಲ್ಲಿ ದೇವರು ಕಾಣಸಿಗುತ್ತಾರೆ . ಇಂತಹ ವೈಶಿಷ್ಟಗಳನ್ನು ಹೊಂದಿರುವ ದೇವಾಲಯವೊಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿಯಲ್ಲಿರೋ (Keradi)  ಮೂಡಗಲ್ಲು ಶ್ರೀ ಕೇಶವನಾಥೇಶ್ವರ ದೇವಾಲಯ (moodagallu keshavantheshwar temple).

moodagallu keshavantheshwar temple Keradi Kundapura Udupi Karnataka Kannada News
Image Credit to Original Source

ಹೌದು ಇದು ಕಲ್ಲಿನ ದೇವಾಲಯವಲ್ಲ, ಬದಲಾಗಿ ಕಲ್ಲಿನ ಒಳಗೆ ನಿರ್ಮಿತವಾದ ಅಂದ್ರೆ ಗುಹಾಂತರ ಶಿವ ದೇವಾಲಯ . ಇಲ್ಲಿ ಶಿವ ಗುಹೆಯ ಒಳಗೆ ಉದ್ಬವ ಶಿವಲಿಂಗವಾಗಿ ನೆಲೆ ನಿಂತಿದ್ದಾನೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ, ಇಲ್ಲಿ ಗುಹೆಯ ತುಂಬಾ ನೀರು ತುಂಬಿಕೊಂಡು ಇರೋದು . ನೀರಿನ ಮಧ್ಯಬಾಗದಲ್ಲಿ ಈ ಶಿವಲಿಂಗ ನಿರ್ಮಿತವಾಗಿದ್ದು, ಭಕ್ತರು ದರ್ಶನ ಮಾಡಬೇಕಾದ್ರೆ ಈ ನೀರಿನಲ್ಲಿ ನಡೆದುಕೊಂಡೇ ಹೋಗ ಬೇಕು . ಇಲ್ಲಿ ಸಾಮಾನ್ಯವಾಗಿ ಮೊಣಕಾಲಿನ ತನಕ ನೀರು ತುಂಬಿಕೊಂಡು ಇರುತ್ತೆ . ಜೊತೆಗೆ ಈ ನೀರನ್ನು ಹಾವು, ಮೀನುಗಳು ತಮ್ಮ ಆವಾಸಸ್ಥಾನ ವಾಗಿ ಮಾಡಿಕೊಂಡಿದೆ . ಇಲ್ಲಿ ಕಣ್ಣಿಗೆ ಕಾಣುವ ರೀತಿಯಲ್ಲಿ ಹಾವುಗಳು ಓಡಾಡಿಕೊಂಡು ಇದ್ದರೂ, ಇಂದಿನ ವರೆಗೂ ಯಾವುದೇ ಭಕ್ತರಿಗೆ ತೊಂದರೆ ಕೊಟ್ಟಿಲ್ಲ. ಇಲ್ಲಿ ದೇವರ ದರ್ಶನವನ್ನು ಮಾಡುವಾಗ ಮೀನುಗಳು ಕಾಲಿಗೆ ಕಚಗುಳಿ ನೀಡೋದೇ ಒಂದು ವಿಶೇಷ ಅನುಭವ ಅಂತಾರೆ ಸ್ಥಳೀಯರು.

ಇಲ್ಲಿನ ಸ್ಥಳವುರಾಣಕ್ಕೆ ಬರೋದಾದ್ರೆ ಈ ದೇವಾಲಯವನ್ನು ಯಾರೋ ನಿರ್ಮಿಸಿದ್ದು , ಅಥವಾ ಪ್ರತಿಷ್ಟಾಪಿಸಿದ್ದಲ್ಲ . ಬದಲಾಗಿ ಇದು ಒಂದು ಉದ್ಭವಲಿಂಗ . ಇಲ್ಲಿ ಶಿವ ಲಿಂಗದ ಹಿಂಭಾಗದಲ್ಲಿ ಗುಹೆಯೊಂದು ಇದ್ದು , ಇದು ಕಾಶಿಗೆ ಹೋಗುವ ದಾರಿ ಅಂತ ನಂಬಲಾಗುತ್ತೆ. ಇಲ್ಲಿ ಹಲವು ಸಾಧು ಸಂತರು ಗುಹೆಯ ಒಳ ಭಾಗದಲ್ಲಿ ಇಂದಿಗೂ ತಪಸ್ಸು ಮಾಡುತ್ತಾರೆ . ಹಾಗೂ ಇಲ್ಲಿಂದ ಕಾಶಿಗೆ ತೆರಳಿ ದೇವರ ದರ್ಶನ ಮಾಡುತ್ತಾರೆ ಅನ್ನೋ ನಂಬಿಕೆ ಇಲ್ಲಿದೆ . ಇದೇ ಗುಹೆಯ ಮೂಲಕ ಶಿವ ಕಾಶಿಗೆ ತೆರಳಿದ್ದ ಅಂತಾನೂ ಇಲ್ಲಿನ ಸ್ಥಳ ಪುರಾಣ ಹೇಳುತ್ತೆ.

ಇದನ್ನೂ ಓದಿ :ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ

ಈ ಗುಹಾಂತರ ದೇವಾಲಯದಲ್ಲಿ ೫೦ ಅಡಿಗಳಷ್ಟು ನೀರು ಹರಡಿಕೊಂಡಿದ್ದು, ಮಳೆಗಾಲದಲ್ಲಿ ಅತ್ಯಧಿಕ ಮಳೆ ಸುರಿಯೂದರಿಂದ ನೀರಿನ ಪ್ರಮಾಣ ಸ್ವಲ್ಪ ಜಾಸ್ತಿಯಾಗಿಯೇ ಇರುತ್ತೆ . ಆದ್ರೆ ಇಂದಿನವರೆಗೂ ಇಲ್ಲಿನ ಶಿವಲಿಂಗ ಮಾತ್ರ ನೀರು ತುಂಬಿ ಮುಳುಗಡೆಯಾಗಿಲ್ಲ ಅನ್ನೋದೇ ವಿಶೇಷ . ಇನ್ನು ಇಲ್ಲಿನ ವಿಸ್ಮಯಗಳ ಕುರಿತು ಬರೋದಾದ್ರೆ , ಇಲ್ಲಿ ನಿತ್ಯ ಸಂಜೆ ೫ ಘಂಟೆಗೆ ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತೆ . ಈ ಗುಹಾಂತರ ದೇವಾಲಯದಲ್ಲಿ ಕೇವಲ ದೀಪದ ಬೆಳಕು ಮಾತ್ರ ಇರೋದ್ರಿಂದ , ಸೂರ್ಯನ ಬೆಳಕು ಬಿದ್ದಾಗ ಶಿವಲಿಂಗ ಸ್ವಟಿಕದಂತೆ ಕಂಗೊಳಿಸುತ್ತೆ . ಇನ್ನು ಇಲ್ಲಿ ರಾತ್ರಿ ವೇಳೆ ವಿಸ್ಮಯವೊಂದು ಘಟಿಸುತ್ತಂತೆ . ಅದೇನಂದ್ರೆ ಇಲ್ಲಿ ರಾತ್ರೆಯ ವೇಳೆಯಲ್ಲಿ ಇಲ್ಲೇ ಪಕ್ಕದಲ್ಲಿರೋ ಅಶ್ವಥಮರದಿಂದ ಬೆಳಕೊಂದು ಬಂದು ಗುಹೆಯ ಒಳಗೆ ತೆರಳುತ್ತಂತೆ. ಇದನ್ನು ಖುದ್ದು ಇಲ್ಲಿನ ಅರ್ಚಕರೇ ನೋಡಿರೋದಾಗಿ ತಿಳಿಸುತ್ತಾರೆ .

moodagallu keshavantheshwar temple Keradi Kundapura Udupi Karnataka Kannada News
Image Credit to Original Source

ಇನ್ನು ಇಲ್ಲಿ ದೇವರ ಶಕ್ತಿಯ ಕುರಿತು ವಿವರಿಸುವ ಭಕ್ತರು , ಹಲವು ವರ್ಷಗಳ ಹಿಂದೆ ಇಲ್ಲಿ ರೈತನೊಬ್ಬ ವಾಸವಿದ್ದನಂತೆ . ಈ ರೈತನ ಭೂಮಿಗೆ ಪ್ರತಿ ರಾತ್ರಿಯು ಹಸುವೊಂದು ಮೇಯಲು ಬಂದು ಬೆಳೆಯನ್ನು ನಾಶ ಮಾಡುತ್ತಿತ್ತಂತೆ . ಒಂದು ದಿನ ಇದನ್ನು ನೋಡಿದ ರೈತ ದನವನ್ನು ಅಟ್ಟಿಸಿಕೊಂಡು ಬಂದನಂತೆ . ಆಗ ಆ ಹಸುವು ಗುಹೆಯೊಳಗೆ ಓಡಿ ಹೋಯಿತಂತೆ . ಅದನ್ನು ಹಿಂಬಾಲಿಸಿಕೊಂಡು ಬಂದ ರೈತ ಕೂಡಾ ಗುಹೆಯೊಳಗೆ ತೆರಳಿದಾಗ ಅಲ್ಲಿ ಕತ್ತಲಾವರಿಸಿ ಆತ ಭಯಗೊಂಡನಂತೆ. ಆಗ ಆತ ಭಕ್ತಿಯಿಂದ ದೇವರನ್ನು ದಾರಿ ತೋರುವಂತೆ ಕೇಳಿಕೊಂಡಾಗ ಬೆಳಕೊಂದು ಗುಹೆಯಲ್ಲಿ ಮೂಡಿ, ರೈತನಿಗೆ ಹೊರ ಹೋಗಲು ದಾರಿ ತೋರಿಸಿತಂತೆ. ಆಗ ಇಲ್ಲಿನ ಮಹಿಮೆಯನ್ನು ತಿಳಿದ ರೈತ, ಹಸುವು ಮೇಯಲು ಬಂದಿದ್ದ ಭೂಮಿಯನ್ನೇ ದೇವಾಲಯಕ್ಕೆ ದಾನವಾಗಿ ನೀಡಿದ ಅನ್ನೋದು ಇತಿಹಾಸ.

ಇದನ್ನೂ ಓದಿ : ಕುಕ್ಕೆಯಿಂದ ಕಾಳಿಂಗನಾಗಿ ಬಂದು ಖುದ್ದು ಸುಬ್ರಹ್ಮಣ್ಯ ನೇ ನೆಲೆ ನಿಂತ ಕ್ಷೇತ್ರ – ಇಲ್ಲಿ ಬಂದ್ರೆ ನಾಗದೋಷ ಪರಿಹಾರ

ಈ ದೇವಾಲಯದ ಜಾತ್ರೆ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯುತ್ತೆ . ಇದನ್ನು ವೀಕ್ಷಿಸೋಕೆ ಅಂತಾನೆ ಸುತ್ತಮುತ್ತಲ ಗ್ರಾಮದಿಂದ ನೂರಾರು ಮಂದಿ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಇನ್ನು ದೇವಾಲಯವು ಗ್ರಾಮದ ಒಳಭಾಗದ ಬೆಟ್ಟದ ಬಳಿಯಲ್ಲಿ ಇರೋದ್ರಿಂದ ಇಲ್ಲಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಹೀಗಾಗಿ ದೇವಾಲಯಕ್ಕೆ ಹೆಚ್ಚಾಗಿ ಭಕ್ತರು ಆಗಮಿಸೋದಿಲ್ಲ. ಜೊತೆಗೆ ಇದು ಹೆಚ್ಚಾಗಿ ಪ್ರಚಾರ ಪಡೆಯದ ಕಾರಣ, ಹಲವರಿಗೆ ಈ ದೇವಾಲಯದ ಮಾಹಿತಿ ಇಲ್ಲ ಅಂತಾನೆ ಹೇಳಬಹುದು.

ಹೋಗೋದು ಹೇಗೆ ?

ಇಲ್ಲಿನ ಸಂಪರ್ಕದ ಕುರಿತು ಹೇಳೋದಾದ್ರೆ , ಕೊಲ್ಲೂರಿಗೂ ಇದು ಸಮೀಪವಿದ್ದು, ಕೊಲ್ಲೂರು ಮಾರ್ಗವಾಗಿ ಕೆರಾಡಿಗೆ ತಲುಪಿ ಅಲ್ಲಿಂದ ಮೂಡುಗಲ್ಲಿಗೆ ಹೋಗ ಬಹುದು . ಅಥವಾ ಕುಂದಾಪುರದಿಂದ ಹೋಗೋದಾದ್ರೆ ಹಾಲಾಡಿ ಮಾರ್ಗದ ಮೂಲಕ ಕೆರಾಡಿಗೆ ತಲುಪಿ ಅಲ್ಲಿಂದ ದೇವಾಲಯಕ್ಕೆ ತಲುಪಬಹುದು . ಕೆರಾಡಿವರೆಗೂ ಬಸ್ ಸಂಪರ್ಕವಿದ್ದು, ಅಲ್ಲಿಂದ ಖಾಸಗಿ ವಾಹನಗಳ ಮೂಲಕ ಇಲ್ಲಿಗೆ ತಲುಪಬಹುದು. ಒಟ್ಟಾರೆ ಪ್ರಕೃತಿ ಸೌಂದರ್ಯದ ಗಣಿಯಾದ ಈ ಸ್ಥಳಕ್ಕೆ ಒಮ್ಮೆಯಾದ್ರು ನೀವು ಭೇಟಿ ನೀಡಲೇ ಬೇಕು.

ಇದನ್ನೂ ಓದಿ : ಭಕ್ತರನ್ನು ಕಾಯುತ್ತಾಳೆ ಪೊಳಲಿ ರಾಜರಾಜೇಶ್ವರಿ : ಮಣ್ಣಿನ ವಿಗ್ರಹದಲ್ಲಿ ನೆಲೆಸಿದ್ದಾಳೆ ತಾಯಿ

moodagallu keshavantheshwar temple Keradi Kundapura Udupi Karnataka Kannada News

Comments are closed.