Ayodhya Ram Mandir inauguration : ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟೆಗಾಗಿ ಕ್ಷಣ ಗಣನೆ ಆರಂಭವಾಗಿದೆ. ದೇಶದ ಪ್ರತಿಯೊಬ್ಬ ಭಕ್ತನೂ ರಾಮ ಸೇವೆಗಾಗಿ ಕಾತುರನಾಗಿ ನಿಂತಿದ್ದಾನೆ. ಕೆಲವರು ರಾಮನಿಗೆ ಅಳಿಲು, ರಾಮನಿಗಾಗಿ ಸಾಲು ಸಾಲು ಉಡುಗೊರೆ : ಏನೆಲ್ಲಾ ಉಡುಗೊರೆ ಭಕ್ತರಿಂದ ಬಂತು ಗೊತ್ತಾ ?

ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟೆಗಾಗಿ ಕ್ಷಣ ಗಣನೆ ಆರಂಭವಾಗಿದೆ. ದೇಶದ ಪ್ರತಿಯೊಬ್ಬ ಭಕ್ತನೂ ರಾಮ ಸೇವೆಗಾಗಿ ಕಾತುರನಾಗಿ ನಿಂತಿದ್ದಾನೆ . ಕೆಲವರು ರಾಮನಿಗೆ ಅಳಿಲು ಸೇವೆ ಮಾಡಿದ್ರೆ. ಇನ್ನು ಕೆಲವರು ರಾಮನಿಗಾಗಿ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಚಿನ್ನ ಬೆಳೀಯ ಉಡುಗೊರೆಗಳು ಅಯೋಧ್ಯೆಗೆ ಹರಿದು ಬರುತ್ತಿವೆ ಅದರಲ್ಲಿ ಪ್ರಮುಖವಾದವು ಇಂತಿವೆ.

1. ಪಾಟ್ನಾದ ಹನುಮಾನ್ ಘಡ್ ನಿಂದ ರಾಮನಿಗಾಗಿ ಚಿನ್ನದ ಬಿಲ್ಲು ಹಾಗೂ ಚಿನ್ನದ ಕಲಶವು ಉಡುಗರೆ. 10 ಕೋಟಿ ವೆಚ್ಚದಲ್ಲಿ ಈ ಬಿಲ್ಲು ಹಾಗೂ ಕಲಶಗಳನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ : ರಾಮನ ದರ್ಶನಕ್ಕಾಗಿ ಕಾಯುತ್ತವೆ ಪ್ರೇತಾತ್ಮಗಳು : ರಾಮನಿಗೂ ಲಕ್ಷ್ಮಣ ನಿಗೂ ಇಲ್ಲಿ ಭಿನ್ನ ಪೂಜೆ
2 ಹೈದರಾಬಾದ್ ಮೂಲದ ಶ್ರೀನಿವಾಸ ಶಾಸ್ತ್ರಿ ಎಂಬವವರು ರಾಮನಿಗಾಗಿ 8 ಕೆಜಿ ತೂಕದ ಪಾದುಕೆ ನೀಡಿದ್ದಾರೆ.ಬರಗಾಲಿನಲ್ಲಿ ಹೈದರಾಬಾದ್ ನಿಂದ ನಡಿಗೆಯಲ್ಲಿ ಬಂದು ರಾಮನಿಗೆ ಇದನ್ನು ಸಮರ್ಪಿಸಿದ್ರು.

3. ರಾಜಸ್ಥಾನದ ಜೋದ್ ಪುರದಿಂದ 3200 ಕೆಜಿ ತೂಕದ ತುಪ್ಪವನ್ನು ರಥದ ಮೂಲಕ ತಂದು ರಾಮನಿಗೆ ಒಪ್ಪಿಸಲಾಯಿತು. ಇದರಿಂದ ರಾಮನಿಗೆ ಅಭಿಷೇಕ ನಡೆಯಲಿದೆ. ಜೊತೆಯಲ್ಲೇ ರಾಮ ಮಂದಿರದ ದೀಪವನ್ನು ಬೆಳಗಲಾಗುತ್ತೆ.

4.ಗುಜರಾತ್ ನಿಂದ ರಾಮನ ಕಂಪನ್ನು ಚೆಲ್ಲೋಕೆ 108 ಅಡಿ ಉದ್ದದ ಅಗರ ಬತ್ತಿಯನ್ನು ತಯಾರಿಸಲಾಗಿದೆ. ಇದನ್ನು ಉರಿಸಿದ್ರೆ 1 ತಿಂಗಳು ಕಂಪನ್ನು ಬೀರುತ್ತೆ. ಇದರ ಕಂಪು 4 ಕಿಲೋ ಮೀ ಟರ್ ತನಕವೂ ಬೀರಲಿದೆ.
5. ಅಲಿಘಡ್ ನ ಸತ್ಯ ಪ್ರಕಾಶ್ ಶರ್ಮಾ ಎಂಬವರು ಅತೀದೊಡ್ಡ ಬೀಗ ವನ್ನು ತಯಾರಿಸಿ ರಾಮಮಂದಿರಕ್ಕೆ ನೀಡಿದ್ದಾರೆ .ಇದರ ತೂಕ 400 ಕೆಜಿ ಯಷ್ಟಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿದೆ ಮಾರೀಚನನ್ನು ಕೊಂದ ಜಾಗ ; ರಾಮ ಬಂದು ಹೋಗಿದಕ್ಕೆ ಈ ದೇವಾಲಯವೇ ಸಾಕ್ಷಿ
6 .ಲಕ್ನೋದ ಅನಿಲ್ ಸಹೂ ಎಂಬವರು 9 ದೇಶದ ಘಂಟೆಯನ್ನು ತೋರಿಸಬಲ್ಲ ಗಡಿಯಾರವನ್ನು ನೀಡಿದ್ದಾರೆ.
7. ವಡೋದರದಿಂದ ರಾಮ ಮಂದಿರಕ್ಕಾಗಿ 1100 ಕೆಜಿ ತೂಕದ ದೀಪ ಉಡುಗರೆಯಾಗಿ ಬಂದಿದೆ. ಇದರಲ್ಲಿ 800 ಕೆಜಿ ತುಪ್ಪವನ್ನು ಹಾಕಿ ದೀಪ ಹಚ್ಚಬಹುದಾಗಿದೆ. ಇದು ಒಂದು ಬಾರಿ ಉರಿಸಿದ್ರೆ 2 ತಿಂಗಳು ಉರಿಯುತ್ತೆ.

8. ಉತ್ತರ ಪ್ರದೇಶದಿಂದ 2100 ಕೆಜಿ ಘಂಟೆ ನೀಡಲಾಗಿದ್ದು, ಅದು ಓಂಕಾರ ಶಬ್ಧವನ್ನು ಮಾಡುತ್ತೆ.
9. ಸೂರತ್ ನ ಬಂಗಾರದ ವ್ಯಾಪಾರಿಯೊಬ್ಬರು 5000 ಅಮೇರಿಕಾ ವಜ್ರದ ನೆಕ್ಲೆಸ್ ನೀಡಿದ್ದಾರೆ. 8 ಜನಕನ ಊರಿನಿಂದ 3000 ರೀತಿಯ ವಿವಿಧ ಬಂಗಾರ ಹಾಗೂ ಬೆಳ್ಳಿ ಒಡವೆ ನೀಡಲಾಗಿದೆ.

10 ನಾಗಪುರದ ಬಾಣಸಿಗನಿಂದ 7000 ಕೆಜಿ ರಾಮಾ ಹಲ್ವಾ
ಹೀಗೇ ಹತ್ತು ಹಲವು ಉಡುಗೊರೆಗಳು ಹರಿದು ಬರುತ್ತಿದೆ. ಒಟ್ಟಾರೆ ರಾಮನಿಗಾಗಿ ಕಾದ ಕ್ಷಣ ಈ ಗ ನಿಜವಾಗಿದ್ದು ರಾಮನನ್ನು ಕಣ್ಣು ತುಂಬಿಕೊಳ್ಳೊಕೆ ದೇಶ ಕಾಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸೇವೆ ಮಾಡಿದ್ರೆ. ಇನ್ನು ಕೆಲವರು ರಾಮನಿಗಾಗಿ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ.
Ayodhya Ram Mandir inauguration Do you know what gifts came from devotees ?