ಕರ್ನಾಟಕದಲ್ಲಿದೆ ಮಾರೀಚನನ್ನು ಕೊಂದ ಜಾಗ ; ರಾಮ ಬಂದು ಹೋಗಿದಕ್ಕೆ ಈ ದೇವಾಲಯವೇ ಸಾಕ್ಷಿ

Mrugavadhe Mallikarjuna Temple : ಅಯೋಧ್ಯೆ ಮರು ಜೀವ ಪಡೆಯುತ್ತಿದ್ದಂತೆ ಎಲ್ಲೆಡೆ ರಾಮ ಜಪ ಶುರುವಾಗಿದೆ . ಇಡೀ ಭರತ ಖಂಡವೇ ಮರ್ಯಾದಾ ಪುರುಶೋತ್ತಮನ ಭಕ್ತಿಯಲ್ಲಿ ತೇಲಾಡುತ್ತಿದೆ. ರಾಮಾಯಣದ ವನವಾನವಾಸದಲ್ಲಿ ರಾಮ ಚಲಿಸಿದ ಜಾಗವೆಲ್ಲಾ ಭಕ್ತರ ಶ್ರದ್ಧಾ ಕೇಂದ್ರವಾಗಿವೆ

Mrugavadhe Mallikarjuna Temple : ಅಯೋಧ್ಯೆ ಮರು ಜೀವ ಪಡೆಯುತ್ತಿದ್ದಂತೆ ಎಲ್ಲೆಡೆ ರಾಮ ಜಪ ಶುರುವಾಗಿದೆ . ಇಡೀ ಭರತ ಖಂಡವೇ ಮರ್ಯಾದಾ ಪುರುಶೋತ್ತಮನ ಭಕ್ತಿಯಲ್ಲಿ ತೇಲಾಡುತ್ತಿದೆ. ರಾಮಾಯಣದ ವನವಾನವಾಸದಲ್ಲಿ ರಾಮ ಚಲಿಸಿದ ಜಾಗವೆಲ್ಲಾ ಭಕ್ತರ ಶ್ರದ್ಧಾ ಕೇಂದ್ರವಾಗಿವೆ. ಇಂತಹ ಜಾಗ ಕರ್ನಾಟಕದಲ್ಲೂ ಇದೆ. ನೀವು ಅಂದುಕೊಂಡಿರಬಹುದು ಅದು ಹನುಮಂತನ ಜನ್ಮ ಭೂಮಿ ಅಂಜನಾದ್ರಿ ಅಂತ . ಆದ್ರೆ ಅದನ್ನು ಹೊರತು ಪಡಿಸಿ ಇನ್ನೊಂದು ಕಡೆಗೆ ರಾಮ ಬಂದಿದ್ದ. ಇದೇ ಜಾಗ ರಾಮಾಯಣ ಅನ್ನೋ ಮಹಾ ಕಾವ್ಯಕ್ಕೆ ತಿರುವು ಸಿಕ್ಕಿದ ಜಾಗ.

Mrugavadhe Mallikarjuna Temple the place where Maricha was killed in Karnataka This temple is a witness of the coming and going of Ayodhya Rama 
Image Credit to Original Source

ಹೌದು ಇಲ್ಲಿ ನಡೆದ ಆ ಘಟನೆ ಸೀತೆಯನ್ನು ರಾವಣನ ಕೈಗೆ ಸಿಗುವಂತೆ ಮಾಡಿದ್ದು. ಇಲ್ಲಿ ರಾಮ ಬಿಟ್ಟ ಒಂದು ಬಾಣ ರಾಕ್ಷಸನ್ನು ನೆಲಗೆಡಹುವಂತೆ ಮಾಡಿತ್ತು. ಇದು ಮಾರೀಚನನ್ನು ರಾಮ ಸಂಹರಿಸಿದ ಸ್ಥಳ. ರಾವಣನ ಮಾವನಾದ ಮಾರೀಚನು ಸೀತೆಯನ್ನು ಮೋಸಗೊಳಿಸಲು ಚಿನ್ನದ ಜಿಂಕೆಯ ರೂಪದಲ್ಲಿ ಪಂಚವಟಿಯಲ್ಲಿ ಕಾಣಿಕೊಂಡನು. ಸೀತೆಯ ಬಯಕೆಯ ಮೇರೆಗೆ ರಾಮನು ಆತನ್ನು ಅಟ್ಟಿಸಿಕೊಂಡು ಬಂದು ಬಾಣ ಬಿಟ್ಟನು . ಆ ಬಾಣವು ಇದೇ ಜಾಗದಲ್ಲಿ ಮಾರೀಚನಿಗೆ ತಾಕಿತು ಎಂದು ಇಲ್ಲಿನ ಸ್ಥಳಪುರಾಣ ಹೇಳುತ್ತೆ.

ಇದನ್ನೂ ಓದಿ :ನಿಗೂಢಗಳ ಬೀಡು ಈ ದೇವಾಲಯ; ಇಲ್ಲಿ ಮಿಡಿಯುತ್ತೆ ಕೃಷ್ಣನ ಜೀವಂತ ಹೃದಯ

Mrugavadhe Mallikarjuna Temple the place where Maricha was killed in Karnataka This temple is a witness of the coming and going of Ayodhya Rama 
Image Credit to Original Source

ಇನ್ನು ಮಾರೀಚ ರಾವಣನಂತೆ ಬ್ರಾಹ್ಮಣನಾಗಿದ್ದ, ಯಾವಾಗ ರಾಮನ ಬಾಣತಾಗಿತೋ ಆತನ ತೊಡೆಯಿಂದ ಶಿವಲಿಂಗ ಹೊರ ಬಂತು . ಅದನ್ನು ರಾಮ ಇಲ್ಲೇ ಸ್ಥಾಪಿಸಿದ ಅನ್ನೋ ಮಾತಿದೆ. ಇಂದಿಗೂ ಅದೇ ಶಿವಲಿಂಗವನ್ನು ಆರಾಧಿಸಿಕೊಂಡು ಬರಲಾಗುತ್ತಿದೆಯಂತೆ . ಇನ್ನು ಮಾರೀಚ ಸತ್ತು ಬಿದ್ದ ಜಾಗದಲ್ಲಿ ಅಶೋಕ ವೃಕ್ಷವೊಂದು ಸ್ಥಾಪಿಸಲಾಗಿತ್ತಂತೆ. ಆದರೆ ಅದು ಈಗ ನಶಿಸಿ ಹೋಗಿದೆ ಅನ್ನೋದು ಇಲ್ಲಿಯ ಸ್ಥಳೀಯರ ಮಾತು.

ಇದನ್ನೂ ಓದಿ : ರಾಮಮಂದಿರ ಲೋಕಾರ್ಪಣೆ : ಜನವರಿ 22 ರಂದು ರಜೆ ಘೋಷಿಸಿದ ಕೇಂದ್ರ ಸರಕಾರ

ಅಂದ ಹಾಗೆ ಈ ಜಾಗವಿರೋದು ಎಲ್ಲಿ ಅಂದ್ರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೋಕಿನ ಒಂದು ಗ್ರಾಮದಲ್ಲಿ. ಈ ಗ್ರಾಮವನ್ನು ಮೃಗವಧೆ ಅನ್ನೋ ಹೆಸರಿನಿಂದಲೇ ಕರೆಯಲಾಗುತ್ತೆ. ಮೃಗವಧೆ ಅಂದ್ರೆ ಮಾರೀಚನ ವಧೆ ಅನ್ನೋದು ಇಲ್ಲಿನ ಜನರ ನಂಬಿಕೆ. ಇಲ್ಲಿ ರಾಮನೇ ಸ್ಥಾಪಿಸಿದ  ಮಲ್ಲಿಕಾರ್ಜುನ  ದೇವರ ಸನ್ನಿಧಿ ಇದೆ. ಮುಂದೆ ಬಂದ ಅರಸರು ಇಲ್ಲಿನ ಮಹತ್ವ ಅರಿತು ಈ ದೇವಾಲಯದ ಜೀರ್ಣೋಧಾರ ಮಾಡಿದ್ರು ಅನ್ನೋ ಮಾತನ್ನು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

Mrugavadhe Mallikarjuna Temple the place where Maricha was killed in Karnataka This temple is a witness of the coming and going of Ayodhya Rama 
Image Credit to Original Source

ಇನ್ನು ಇಲ್ಲಿಗೆ ಭಾನುವಾರದಂದು ಹೆಚ್ಚಿನ ಭಕ್ತರು ಬರುತ್ತಾರೆ ಉಳಿದಂತೆ ಈ ಸ್ಥಳ ಹೆಚ್ಚಿನ ಪ್ರವಾಸಿಗರನ್ನು ಹೊಂದಿಲ್ಲ. ಪ್ರಕೃತಿಯ ಮಡಿಲಲ್ಲಿ ಶಾಂತವಾಗಿ ರಾಮನ ಕಥೆಯನ್ನು ಹೇಳುವ ಸ್ಥಳ ನಿಜಕ್ಕೂ ಅದ್ಬುತ ಎಂಬುದರಲ್ಲಿ ಎರಡು ಮಾತಿಲ್ಲ .

ಇದನ್ನೂ ಓದಿ : ಅಯೋಧ್ಯೆಯ ರಾಮಮಂದಿರ ಹೇಗಿದೆ : ಆಹ್ವಾನ ಪತ್ರಿಕೆಯಲ್ಲೇ ಇದೆ ಭವ್ಯಮಂದಿರದ ಚಿತ್ರಣ

Mrugavadhe Mallikarjuna Temple the place where Maricha was killed in Karnataka; This temple is a witness of the coming and going of Ayodhya Rama 

Comments are closed.