ಮಂಗಳವಾರ, ಏಪ್ರಿಲ್ 29, 2025
HomeSpecial StoryBalakot airstrike day: ಇಂದು ಭಾರತದ ಪಾಲಿಗೆ ಅವಿಸ್ಮರಣೀಯ ದಿನ: ಬಾಲಕೋಟ್‌ ವೈಮಾನಿಕ ದಾಳಿಗೆ ಮೂರು...

Balakot airstrike day: ಇಂದು ಭಾರತದ ಪಾಲಿಗೆ ಅವಿಸ್ಮರಣೀಯ ದಿನ: ಬಾಲಕೋಟ್‌ ವೈಮಾನಿಕ ದಾಳಿಗೆ ಮೂರು ವರ್ಷ

- Advertisement -

ನವದೆಹಲಿ: (Balakot airstrike day) ಪುಲ್ವಾಮ ದಾಳಿಯ ಪ್ರತಿಕಾರವಾಗಿ ಪಾಕಿಸ್ತಾನದ ನೆಲದಲ್ಲಿ ಬೀಡುಬಿಟ್ಟಿದ್ದ ಜೈಶ್‌-ಎ-ಮೊಹಮ್ಮದ್‌ ಭಯೋತ್ಪಾದಕ ಶಿಬಿರವನ್ನು ಭಾರತೀಯ ವಾಯುಪೆಡೆ ದ್ವಂಸಗೊಳಿಸಿ, ಬಾಲಕೋಟ್‌ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ವೈಮಾನಿಕ ದಾಳಿಗೆ ಮೂರು ವರ್ಷ ಸಂದಿದೆ. ಅಂದು ಪಾಕಿಸ್ತಾನದ ಮಂದಿ ಏಳುವ ಮೊದಲೇ ಹಲವು ನೆಲೆಗಳು ಧ್ವಂಸವಾಗಿದ್ದು, ಹಲವು ಪಾಕಿಸ್ತಾನದ ಉಗ್ರರು ಸತ್ತು ಬಿದ್ದಿದ್ದರು. ಇದು ಭಾರತದ ಪಾಲಿಗೆ ಅವಿಸ್ಮರಣೀಯ ದಿನವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮ ದಾಳಿಯ ಪ್ರತೀಕಾರವಾಗಿ ಭಾರತದ ವಾಯುಸೇನೆ ಬಾಲಕೋಟ್‌ ನಲ್ಲಿ ವಾಯುದಾಳಿ ನಡೆಸಿತ್ತು. ಪುಲ್ವಾಮಾ ದಾಳಿಯಲ್ಲಿ ನಲವತ್ತು ಕೆಂದ್ರ ಮೀಸಲು ಪೊಲೀಸ್‌ ಪಡೆ ಸೈನಿಕರು ತಮ್ಮ ಜೀವತ್ಯಾಗ ಮಾಡಿದ್ದರು. ಫೆ. ೧೪, ೨೦೧೯ ರಂದು ಪಾಕಿಸ್ತಾನದ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೇಥ್‌ ಪೊರ ಹೆದ್ದಾರಿ ಮೇಲೆ ಸಾಗುತ್ತಿದ್ದ ಕೇಂದ್ರಿಯ ಮೀಸಲು ಪೊಲೀಸ್‌ ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿಯನ್ನು ನಡೆಸಿದ್ದು, ದಾಳಿಯಲ್ಲಿ ನಲವತ್ತು ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದು ನಾಲ್ಕು ವರ್ಷಗಳಾಗಿವೆ.

ನಮ್ಮ ಭಾರತೀಯ ಯೋಧರ ಹತ್ಯೆಗೆ ಕಾರಣವಾಗಿದ್ದ ಪಾಕಿಸ್ತಾನ ಹಾಗೂ ಇದರ ಉಗ್ರರ ವಿರುದ್ದ ಭಾರತ ಪ್ರತಿಕಾರ ತೀರಿಸಿಕೊಳ್ಳಲು ಕಾದು ಕುಳಿತಿದ್ದು, ಫೆ.೨೬, ೨೦೧೯ ರ ಮಂಗಳವಾರದಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಉಗ್ರರ ಮೇಲೆ ದಾಳಿ ನಡೆಸಿತ್ತು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ನಸುಕಿನಲ್ಲಿ ಭಾರತೀಯ ವಾಯುಪಡೆ ಬಾಲಾಕೋಟ್‌ ನಲ್ಲಿ ಸರ್ಜಿಕಲ್‌ ದಾಳಿ ನಡೆಸಿತ್ತು. ಇದರಲ್ಲಿ ೩೫ಒ ಕ್ಕೂ ಹೆಚ್ಚು ಉಗ್ರರು ಹತ್ಯೆಗೊಂಡರು.

ಸರ್ಜಿಕಲ್‌ ದಾಳಿಯಿಂದ ಜಾಗತಿಕ ಮಟ್ಟದಲ್ಲಿ ತನ್ನ ಉಗ್ರ ಸಂಚು ಬಯಲಾಯ್ತು ಎಂದು ಫೆ.27ರಂದು ತನ್ನ ಯುದ್ಧ ವಿಮಾನಗಳಿಂದ ಭಾರತದ ಗಡಿ ಬಳಿಯ ನೆಲೆಗಳ ಮೇಲೆ ಮತ್ತೆ ಪಾಕಿಸ್ತಾನದ ಉಗ್ರ ತಂಡಗಳು ದಾಳಿಗೆ ಯತ್ನಿಸಿತ್ತು. ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ತಂಡ ಮಿಗ್‌-21 ಬೈಸನ್‌ ಯುದ್ಧ ವಿಮಾನದಿಂದ ಪಾಕ್‌ ಜೆಟ್‌ಗಳ ಬೆನ್ನಟ್ಟಿದ್ದು, ಪ್ರತಿದಾಳಿ ನಡೆಸಲು ಬಂದಿದ್ದ ಉಗ್ರ ತಂಡ ಅಲ್ಲಿಂದ ಕಾಲ್ಕಿತ್ತು ಓಡಿತ್ತು. ದುರಾದೃಷ್ಟವೆಂಬಂತೆ ಅಭಿನಂದನ್‌ ಅವರ ವಿಮಾನ ಪಾಕ್‌ ಗಡಿಯಲ್ಲಿ ಪತನಗೊಂಡು ಅವರು ಪಾಕ್‌ ಉಗ್ರರ ವಶಕ್ಕೆ ಬಿದ್ದರು. ನಂತರ ಮಾ.1 ರಂದು ಪಾಕ್‌ ಸೇನೆ ಅವರನ್ನು ಪುನಃ ಭಾರತಕ್ಕೆ ಸುರಕ್ಷಿತವಾಗಿ ಒಪ್ಪಿಸಿತು.

ಇದನ್ನೂ ಓದಿ : ಬಣ್ಣಗಳ ಹಬ್ಬ ಹೋಳಿಯ ಬಗ್ಗೆ ಇಲ್ಲಿದೆ ಇಂಟರಸ್ಟಿಂಗ್‌ ಸ್ಟೋರಿ

ಇದನ್ನೂ ಓದಿ : Sleeping Hanuman : ಮಲಗಿದ ರೂಪದಲ್ಲಿದ್ದಾನೆ ಹನುಮಂತ ; ಭಕ್ತನ ಕೋರಿಕೆಗಾಗಿ ಈ ರೂಪ

Balakot airstrike day: Today is an unforgettable day for India: Balakot airstrike marks three years

RELATED ARTICLES

Most Popular